ಮೈಸೂರು:ಮೈಸೂರು ನಗರದಲ್ಲಿ ನಾಯಿಕೊಡೆ ಗಳಂತೆ ತಲೆ ಎತ್ತಿರುವ ಅನಧಿಕೃತ ಬ್ಯೂಟಿ ಪಾರ್ಲರ್‌ಗಳ ಮುಚ್ಚಿಸುವಂತೆ ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘದ ಕಾರ್ಯ ಕರ್ತರು ಆಗ್ರಹಿಸಿದ್ದು, ಅನುಮತಿ ಪಡೆದು ನಡೆಯುತ್ತಿರುವ ಬ್ಯೂಟಿ ಪಾರ್ಲರ್‌ಗಳಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯು ತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘದ ಅಧ್ಯಕ್ಷೆ ಸುಜಾತ ಸಿಂಗ್, ಮಾಜಿ ಅಧ್ಯಕ್ಷೆ…