ಮೈಸೂರು: ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಭಾನುವಾರ ರಾವ್ಸ್ ಕನ್‍ಸ್ಟ್ರಕ್ಷನ್ಸ್ ಮತ್ತು ಸಂಸ್ಕಾರ ಭಾರತಿ ಆಶ್ರಯದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಐಐಟಿ ಮದ್ರಾಸ್, ಮೈಸೂರಿನ ಎನ್‍ಐಇ ವಿದ್ಯಾವಿಕಾಸ್ ಸೇರಿದಂತೆ ಪ್ರತಿಷ್ಠಿತ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿರುವ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಬಿ.ಜೆ.ರಂಗನಾಥ್ ಹಾಗೂ ಶಿಕ್ಷಣ ಕ್ಷೇತ್ರದ ವಿವಿಧ ವಿಷಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 15ಕ್ಕೂ ಖ್ಯಾತ ಪ್ರಾಧ್ಯಾಪಕರನ್ನು ಡಾ.ಡಿ.ವಿ.ಪ್ರಹ್ಲಾದ್‍ರಾವ್ ಸನ್ಮಾನಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ.ಬಿ.ಜೆ.ರಂಗನಾಥ್, ಸಾತ್ವಿಕ, ಶಾಂತಿ, ಸಂತೋಷದಿಂದ ಜೀವನ ನಡೆಸಲು ಒಳ್ಳೆಯ ಗುರುವಿನ…