ಮೈಸೂರು: ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಭಾನುವಾರ ರಾವ್ಸ್ ಕನ್‍ಸ್ಟ್ರಕ್ಷನ್ಸ್ ಮತ್ತು ಸಂಸ್ಕಾರ ಭಾರತಿ ಆಶ್ರಯದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಐಐಟಿ ಮದ್ರಾಸ್, ಮೈಸೂರಿನ ಎನ್‍ಐಇ ವಿದ್ಯಾವಿಕಾಸ್ ಸೇರಿದಂತೆ ಪ್ರತಿಷ್ಠಿತ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿರುವ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಬಿ.ಜೆ.ರಂಗನಾಥ್ ಹಾಗೂ ಶಿಕ್ಷಣ ಕ್ಷೇತ್ರದ ವಿವಿಧ ವಿಷಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 15ಕ್ಕೂ ಖ್ಯಾತ ಪ್ರಾಧ್ಯಾಪಕರನ್ನು ಡಾ.ಡಿ.ವಿ.ಪ್ರಹ್ಲಾದ್‍ರಾವ್ ಸನ್ಮಾನಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ.ಬಿ.ಜೆ.ರಂಗನಾಥ್, ಸಾತ್ವಿಕ, ಶಾಂತಿ, ಸಂತೋಷದಿಂದ ಜೀವನ ನಡೆಸಲು ಒಳ್ಳೆಯ ಗುರುವಿನ ಅವಶ್ಯಕತೆಯನ್ನು ವಿವರಿಸಿದರು. ಭಾರತದ ಹಿಂದಿನ ಋಷಿ ಮುನಿಗಳ ಗ್ರಂಥಗಳ ಪಾತ್ರ ವಿಶೇಷವಾದುದು. ದೇಶದಲ್ಲಿ ಇಂದಿನ ವಿದ್ಯಮಾನವನ್ನು ಗಮನಿಸಿದರೆ ಯೋಗ್ಯ ಗುರುಗಳ ಕೊರತೆ ಇರುವಲ್ಲಿ ಆಸಕ್ತರು ಗ್ರಂಥಗಳನ್ನು ತಿಳಿದವರ ಮಾರ್ಗದರ್ಶನದಿಂದ ಅಭ್ಯಸಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಡಾ.ಸಿ.ಹೆಚ್.ಶ್ರೀನಿವಾಸಮೂರ್ತಿ, ವೇ.ಬ್ರ.ಶ್ರೀ ಶ್ರೀನಿವಾಸನ್, ಡಾ.ಕೆ.ಜೆ.ಮುರಳೀಧರ್, ಡಾ.ಡಿ.ಕೆ.ರಮೇಶ್, ಡಾ.ಎ.ಎಸ್.ಶ್ರೀಕಂಠಪ್ಪ, ಪ್ರೊ.ಶ್ರೀನಿವಾಸ್, ಪಾ.ರಾ.ಕೃಷ್ಣಮೂರ್ತಿ, ಬಿ.ಜೆ.ಸುಬ್ಬುಕೃಷ್ಣ, ಜಿ.ವಿಶ್ವನಾಥ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.