ನಾಳೆಯಿಂದ ಚಾಮುಂಡೇಶ್ವರಿ ಪೂಜಾ ಮಹೋತ್ಸವ, ಆ.3ರಂದು ಚಂಡಿಕಾ ಹೋಮ
ಮೈಸೂರು

ನಾಳೆಯಿಂದ ಚಾಮುಂಡೇಶ್ವರಿ ಪೂಜಾ ಮಹೋತ್ಸವ, ಆ.3ರಂದು ಚಂಡಿಕಾ ಹೋಮ

July 30, 2018

ಮೈಸೂರು: ಮೈಸೂರಿನ ಕಬೀರ್ ರಸ್ತೆಯಲ್ಲಿ ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಜು.31ರಿಂದ ಆ.4ರವರೆಗೆ 35ನೇ ವರ್ಷದ ಚಾಮುಂಡೇಶ್ವರಿ ಪೂಜಾ ಮಹೋತ್ಸವ ನಡೆಯಲಿದೆ.

ಜು.31ರಂದು ಬೆಳಿಗ್ಗೆ 10ಕ್ಕೆ ಚಾಮುಂಡೇಶ್ವರಿ ಅಮ್ಮನವರ ಪ್ರತಿಷ್ಠಾಪನೆ, ಆ.1ರಂದು ಸಂಜೆ 4.30ಕ್ಕೆ ಮಹಿಳೆಯರಿಗೆ ರಂಗೋಲೆ ಸ್ಪರ್ಧೆ, ಆ.2ರಂದು ವಿಶೇಷ ಪೂಜೆ, ಹೋಮ, ಆ.3ರಂದು ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವ ಅಂಗವಾಗಿ ಬೆಳಿಗ್ಗೆ 7ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ ಪೂರ್ಣಾಹುತಿ, ಪ್ರಸಾದ ವಿನಿಯೋಗ ಹಾಗೂ ಸಂಜೆ 7ಕ್ಕೆ ಸಂಗೀತ ರಸಮಂಜರಿ ನಡೆಯಲಿದೆ.

ಆ.4ರಂದು ಮಧ್ಯಾಹ್ನ 12 ಗಂಟೆಗೆ ಸಮಾಜದ ಸಾಧಕರಿಗೆ ಸನ್ಮಾನ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 7 ಗಂಟೆಗೆ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿ ಕಾವೇರಿ ಹೊಳೆಯಲ್ಲಿ ದೇವಿಯನ್ನು ವಿಸರ್ಜಿಸುವುದರೊಂದಿಗೆ ಪೂಜಾ ಮಹೋತ್ಸವ ಕೊನೆಗೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷ ವಿನಯ್ ಸರೋದೆ ತಿಳಿಸಿದ್ದಾರೆ.

Translate »