ತಿರುಗಾಟದಿಂದ  ಲೋಕಾನುಭವ ಹೆಚ್ಚಳ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅಭಿಮತ
ಮೈಸೂರು

ತಿರುಗಾಟದಿಂದ  ಲೋಕಾನುಭವ ಹೆಚ್ಚಳ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅಭಿಮತ

July 30, 2018

ಮೈಸೂರು: ಹೆಚ್ಚು ತಿರುಗಾಡಿದಷ್ಟು ಲೋಕಾನುಭವ ಹೆಚ್ಚುತ್ತದೆ. ಹಾಗಾಗಿ ಸಾಧ್ಯವಿದ್ದಷ್ಟು ಲೋಕ ಸುತ್ತಿ ಅನುಭವ ಪಡೆದುಕೊಳ್ಳಿ ಎಂದು ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಸಲಹೆ ನೀಡಿದರು.

ಮೈಸೂರಿನ ಕಲಾಮಂದಿರ ಮನೆಯಂಗಳದಲ್ಲಿ ಗಾಯತ್ರಿ ಎಂಟರ್ ಪ್ರೈಸಸ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಲಾವಿದ ಎಸ್.ಎಂ.ಜಂಬುಕೇಶ್ವರ್ ಅವರ `ಅಮೆರಿಕದ ಅಂತರಂಗ’ ಪ್ರವಾಸ ಕಥನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶ ಸುತ್ತು, ಕೋಶ ಓದು ಎಂಬ ಗಾದೆ ಮಾತನ್ನು ಉಲ್ಲೇಖಿಸಿದ ಅವರು, ನೀವು ಸುತ್ತಿದಷ್ಟು ಲೋಕದ ಅನುಭವ ಹೆಚ್ಚುತ್ತದೆ. ಅದನ್ನು ಜಂಬುಕೇಶ್ವರ್ ಅವರು ತಮ್ಮ ಪುಸ್ತಕದಲ್ಲಿ ಹೃದಯಂಗಮವಾಗಿ ವಿಶ್ಲೇಷಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಲೇಖಕ ಎಸ್.ಎಂ.ಜಂಬುಕೇಶ್ವರ, ತಾವು ಅಮೆರಿಕಾದಲ್ಲಿ ಕಂಡ ಅನೇಕ ಅಂಶಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದೇನೆ. ಸ್ವಚ್ಛತೆ, ಶಿಸ್ತಿಗೆ ಅವರು ನೀಡುವಷ್ಟು ಆದ್ಯತೆ ನಾವು ನೀಡುತ್ತಿಲ್ಲ. ಅಲ್ಲಿ ವಯೋವೃದ್ಧರೂ ಕೂಡ ಮನೆಯಲ್ಲಿ ಕೂರದೆ ದುಡಿಯಲು ಹೋಗುತ್ತಾರೆ ಎಂದು ಹೇಳಿದರು.

ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ಸಿ.ನಾಗಣ್ಣ ಪುಸ್ತಕ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಲೇಖಕ ಡಾ.ಚಂದ್ರಶೇಖರಯ್ಯ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »