ಪಾಂಡವಪುರ: ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದ ಬೆಳೆದ ಕೆಲ ಸ್ವಾರ್ಥಿಗಳು ಇಂದು ಅವರ ಕೈ ಕಡಿಯುವ ನಿಟ್ಟಿನಲ್ಲಿ ನನ್ನನ್ನು ಸೋಲಿಸಲು ಇನ್ನಿಲ್ಲದ ಕುತಂತ್ರ ನಡೆಸಿದ್ದಾರೆ. ಆದರೆ ಈ ಧರ್ಮ ಯುದ್ಧದಲ್ಲಿ ಪುಟ್ಟರಾಜುನನ್ನು ಉಳಿಸಿಕೊಳ್ಳುವುದು ಕ್ಷೇತ್ರದ ಮತದಾರರ ಕೈಯಲ್ಲಿದೆ ಎಂದು ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಬಾವುಕರಾಗಿ ನುಡಿದರು. ಪಟ್ಟಣದ ತಮ್ಮ ನಿವಾಸದ ಮುಂಭಾಗದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ನನ್ನ ತಂದೆ ಸಣ್ಣತಮ್ಮೇಗೌಡರು ದೈಹಿಕವಾಗಿ ಜನ್ಮ ನೀಡಿದರೆ ಹೆಚ್.ಡಿ.ದೇವೇಗೌಡರು ನನ್ನನ್ನು ಒಬ್ಬ…