ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜ.1ರಿಂದ ರಾಗಿ ಖರೀದಿ ಕೇಂದ್ರ ತೆರೆಯಲಾಗುತ್ತಿದ್ದು, ಮಾ.31ರವರೆಗೆ ರೈತರು ಕ್ವಿಂಟಾಲ್‍ಗೆ 2897 ರೂ. ದರಕ್ಕೆ ರಾಗಿ ಮಾರಾಟ ಮಾಡಬಹುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಎಂ.ಶಿವಣ್ಣ ತಿಳಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗ ಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆ ಯಾದ್ಯಂತ ರಾಗಿ ಬೆಳೆ ಉತ್ತಮವಾಗಿದೆ. ಒಟ್ಟು 30,989 ಹೆಕ್ಟೇರ್ ಪ್ರದೇಶದಲ್ಲಿ 70,369 ಮೆಟ್ರಿಕ್ ಟನ್ ರಾಗಿ ಬೆಳೆ ಬೆಳೆಯಲಾಗಿದೆ….