ಮಡಿಕೇರಿ: ಅಂತರಾಷ್ಟ್ರೀಯ ರ್‍ಯಾಲಿ ಪಟು ಕೊಡಗಿನ ಮಾಳೇಟಿರ ಜಗತ್ ನಂಜಪ್ಪ ಹಾಗೂ ಕೋ ಡ್ರೈವರ್ ಉದ್ದ ಪಂಡ ಚೇತನ್ ಚಂಗಪ್ಪ ಗೋವಾದಲ್ಲಿ ನಡೆದ ‘ರೈನ್ ಫಾರೆಸ್ಟ್ ಚ್ಯಾಲೆಂಜರ್ಸ್ ಇಂಡಿಯಾ-2018’ ರ್‍ಯಾಲಿಯಲ್ಲಿ ಮೊದಲ ಸ್ಥಾನವನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಗೋವಾದ ಕೆಫಿಕಂ ಹಾಗು ಡೌನಪೋಲದ ಅರಣ್ಯದ ಕಡಿದಾದ ಮಾರ್ಗ ದಲ್ಲಿ ನಡೆದ ರ್‍ಯಾಲಿಯು, ರ್‍ಯಾಲಿ ಪ್ರಿಯರಲ್ಲಿ ರೋಮಾಂಚಕತೆ ಸೃಷ್ಟಿಸಿತು. ಇಳಿಜಾರಿನಲ್ಲಿ ವಿಂಚ್‍ಗಳ ಮೂಲಕ ಕಠಿಣ ಶ್ರಮದಿಂದ ಬೆಟ್ಟವನ್ನೇರುವುದು, ಕಿರಿದಾದ ಜಾಗದಲ್ಲಿ ಇಳಿಸುವುದು, ರಿವರ್ ಕ್ರಾಸಿಂಗ್ ನಂತಹ ರೋಚಕ…