ಗೋವಾ ರ್‍ಯಾಲಿಯಲ್ಲಿ ಜಗತ್ ನಂಜಪ್ಪ ಪ್ರಥಮ
ಕೊಡಗು

ಗೋವಾ ರ್‍ಯಾಲಿಯಲ್ಲಿ ಜಗತ್ ನಂಜಪ್ಪ ಪ್ರಥಮ

July 30, 2018

ಮಡಿಕೇರಿ:  ಅಂತರಾಷ್ಟ್ರೀಯ ರ್‍ಯಾಲಿ ಪಟು ಕೊಡಗಿನ ಮಾಳೇಟಿರ ಜಗತ್ ನಂಜಪ್ಪ ಹಾಗೂ ಕೋ ಡ್ರೈವರ್ ಉದ್ದ ಪಂಡ ಚೇತನ್ ಚಂಗಪ್ಪ ಗೋವಾದಲ್ಲಿ ನಡೆದ ‘ರೈನ್ ಫಾರೆಸ್ಟ್ ಚ್ಯಾಲೆಂಜರ್ಸ್ ಇಂಡಿಯಾ-2018’ ರ್‍ಯಾಲಿಯಲ್ಲಿ ಮೊದಲ ಸ್ಥಾನವನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಗೋವಾದ ಕೆಫಿಕಂ ಹಾಗು ಡೌನಪೋಲದ ಅರಣ್ಯದ ಕಡಿದಾದ ಮಾರ್ಗ ದಲ್ಲಿ ನಡೆದ ರ್‍ಯಾಲಿಯು, ರ್‍ಯಾಲಿ ಪ್ರಿಯರಲ್ಲಿ ರೋಮಾಂಚಕತೆ ಸೃಷ್ಟಿಸಿತು.

ಇಳಿಜಾರಿನಲ್ಲಿ ವಿಂಚ್‍ಗಳ ಮೂಲಕ ಕಠಿಣ ಶ್ರಮದಿಂದ ಬೆಟ್ಟವನ್ನೇರುವುದು, ಕಿರಿದಾದ ಜಾಗದಲ್ಲಿ ಇಳಿಸುವುದು, ರಿವರ್ ಕ್ರಾಸಿಂಗ್ ನಂತಹ ರೋಚಕ ಹಾಗೂ ರೋಮಾಂಚಕಾರಿ ಸಾಹಸಮಯವಾಗಿ ರ್‍ಯಾಲಿ ನಡೆಯಿತು.

ಅಂತರಾಷ್ಟ್ರೀಯ ರ್‍ಯಾಲಿ ಪಟು ಮಾಳೇಟಿರ ಜಗತ್ ನಂಜಪ್ಪ ತನ್ನ ಜೀಪನ್ನು ರ್‍ಯಾಲಿಗೆ ತಕ್ಕಂತೆ ಸಿದ್ಧಪಡಿಸಿ ಚಾಕಚಕ್ಯತೆಯಿಂದ ಜೀಪನ್ನು ನಡೆಸಿದರೆ, ಕೋಡ್ರೈವರ್ ಉದ್ದ ಪಂಡ ಚೇತನ್‍ಚಂಗಪ್ಪ ಟ್ರಾಕ್‍ಗಳಲ್ಲಿ ಜೀಪ್ ಸಿಲುಕಿಕೊಂಡಾಗ ವಿಂಚ್‍ಗಳಿಂದ ತೆರಳಲು ಸಹಕರಿಸಿದರು. ರ್‍ಯಾಲಿಯಲ್ಲಿ ಕೊಡಗಿನ ಜಗತ್ತ್ ನಂಜಪ್ಪ (ಡೈವರ್) ಹಾಗೂ ಚೇತನ್ ಚಂಗಪ್ಪ (ಕೋಡ್ರೈವರ್) ಗೆಲುವನ್ನು ಸಾಧಿಸುವ ಮೂಲಕ 4ಲಕ್ಷ ನಗದು, 3900 ಡಾಲರ್ ಟ್ರೋಫಿ ಪಡೆಯುವ ಮೂಲಕ ಓವರಾಲ್‍ನಲ್ಲಿ ಮೊದಲ ಬಹುಮಾನ ವನ್ನು ಪಡೆದಿದ್ದಾರೆ.

ಎರಡನೇ ಬಹಮಾನವನ್ನು ಮಲೇಶಿಯಾದ ಡ್ರೈವರ್ ಹಾಗೂ ಗೋವಾದ ಕೋಡ್ರೈ ವರ್ ಪಡೆದರೆ, ಮೂರನೇ ಬಹುಮಾನ ವನ್ನು ಚಂಡಿಘಡದ ರ್‍ಯಾಲಿ ಪಟುಗಳು ಪಡೆದಿದ್ದಾರೆ. ಮಲೇಶಿಯ, ಕೇರಳ, ತಮಿಳು ನಾಡು, ಕರ್ನಾಟಕ, ಆಂದ್ರ, ಪಂಜಾಬ್, ಮಹಾರಾಷ್ಟ್ರ, ಗೋವಾದ 38 ಅಂತರಾ ಷ್ಟ್ರೀಯ ಮಟ್ಟದ ನುರಿತ ರ್‍ಯಾಲಿ ಪಟುಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಜಗತ್ ನಂಜಪ್ಪ ಹಾಗು ಚೇತನ್‍ಚಂಗಪ್ಪವರ V5 OFFROADERS COORG ರ್‍ಯಾಲಿ ತಂಡದ ಸದಸ್ಯರಾದ ಕುಂಞಂಡ ಮಾಚು ಮಾಚಯ್ಯ, ಬಿದ್ದಾಟಂಡ ಗಣಪತಿ, ಚೊಟ್ಟೆರ ಜನನ್ ಜೋಯಪ್ಪ ಪಾಲ್ಗೊಂಡು ಸಾಥ್ ನೀಡಿದ್ದರು.

Translate »