ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ
ಕೊಡಗು

ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ

July 30, 2018

ವಿರಾಜಪೇಟೆ:  ಪರಿಸರದಿಂದ ಗಾಳಿ ಬೆಳಕು ಅಹಾರಗಳನ್ನು ಪಡೆದು ಕೊಳ್ಳುವ ನಾವು ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿ ಯೊಬ್ಬರ ಕರ್ತವ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬೇಟೋಳಿ, ಹಾಗೂ ಬಾಳುಗೋಡು ಏಕಲವ್ಯ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ವಸತಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ”ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಗಿಡಗಳನ್ನು ಹೇಗೆ ನೆಡುತ್ತೇವೆ ಅದೆರೀತಿ ಅದನ್ನು ಪೋಷಿಸಿ ಬೆಳುಸುವಂತಾಗಬೇಕು. ಪ್ಲಾಸ್ಟಿಕ್ ಹಾವಳಿ ಕಡಿಮೆ ಮಾಡುವಂತೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಕೂಡ ರಸ್ತೆ ಬದಿಯಲ್ಲೆ ಕಸಗ ಳನ್ನು ಸುರಿಯುತ್ತಾರೆ ಸ್ವಚ್ಚತೆಯ ಬಗ್ಗೆ ಪ್ರತಿ ಯೊಬ್ಬರು ಅರಿತುಕೊಳ್ಳುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಿಕೇರಿ ಮತ್ತು ವಿರಾಜಪೇಟೆ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವ ಗೌಡ ಅವರು ಮಾತನಾಡಿ, ಮಾನವನು ಬದುಕಲು ಎಲ್ಲಾ ಅವಕಾಶ ಗಳನ್ನು ನೀಡಿದ ಭೂಮಿ, ಪ್ರಕೃತಿಯಿಂದ ಪರಿಶುದ್ಧ ಗಾಳಿ, ನೀರು ಇತ್ಯಾದಿಗಳನ್ನು ಪಡೆದುಕೊಳ್ಳುವ ನಾವು ಪ್ರಕೃತಿಗಾಗಿ ಪ್ರತಿ ವರ್ಷವು ಗಿಡನೆಡುವ ಮೂಲಕ ಮರ ವನ್ನು ಬೆಳೆಸುವುದರೊಂದಿಗೆ ಅರಣ್ಯವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಳುಗೋಡು ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲ ಯೋಗನರಸಿಂಹಸ್ವಾಮಿ ಮಾತನಾಡಿ, ಇತ್ತೀ ಚಿನ ದಿನಗಳಲ್ಲಿ ಅರಣ್ಯ ನಾಶದಿಂದಾಗಿ ಕಾಡು ಪ್ರಾಣೆಗಳು ಊರಿಗೆ ಬರುತ್ತಿರುವುದ ರಿಂದ ಕಾಡನ್ನು ಬೆಳೆಸಬೇಕಾಗಿದೆ.

ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಿಡ ನೆಡುವ ಕಾರ್ಯಕ್ರಮ ಉತ್ತಮ ಯೋಜನೆಯಾಗಿದೆ. ಕೆಲವು ವರ್ಷಗಳಿಂದ ಭೂಮಿ ಮೇಲೆ ಪ್ಲಾಸ್ಟಿಕ್ ಹೆಚ್ಚಾಗಿರುವುದರಿಂದ ಮಳೆಯನೀರು ಸರಾಗವಾಗಿ ಭೂಮಿಯನ್ನು ತಲುಪಲು ಸಾಧ್ಯವಾಗದೆ ಹರಿದು ಹೋಗುತ್ತದೆ ಅದರಿಂದ ಪ್ಲಾಸ್ಟಿಕ್‍ನ್ನು ಬಳಸಬಾರದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ವಸತಿ ಶಾಲೆಯ ಕನ್ನಡ ಪ್ರಾಧ್ಯಾಪಕ ಚಂದ್ರ ನಾಯಕ್ ಮಾತನಾಡಿ, ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿ ಬೆಳೆಸಲು ಇನ್ನು ಹೆಚ್ಚು ಜಾಗೃತಿ ಕಾರ್ಯಕ್ರಮಗಳು ನಡೆಯ ಬೇಕಾಗಿದೆ ಎಂದರು.

ಬೇಟೋಳಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಗಣೇಶ್ ಮಾತನಾಡಿದರು.

ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, ಸದಸ್ಯರಾದ ಬಿ.ಇ.ಶಾಂತಿ, ಬಿ.ಎಸ್. ಪೂವಮ್ಮ, ಗಣಪತಿ, ಇತರರು ಉಪಸ್ಥಿತ ರಿದ್ದರು. ಶ್ರೀಕ್ಷೇ.ಧ.ಗ್ರಾ.ಯೋಜನೆಯ ಮೇಲ್ವಿಚಾರಕ ರವಿಂದ್ರ ಸ್ವಾಗತಿಸಿದರು. ವಸತಿ ಶಾಲೆಯ ಪ್ರಾಧ್ಯಾಪಕ ಸಿ.ಎಸ್. ಪ್ರಸನ್ನ ಕುಮಾರ್ ನಿರೂಪಿಸಿದರೆ. ಬಿ.ಟಿ. ಪುನಿತ್ ಕುಮಾರ್ ವಂದಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಗೀತೆಗಳು ಹಾಗೂ ಭಾಷಣ ಕಾರ್ಯ ಕ್ರಮ ಏರ್ಪಡಿಸಲಾಗಿತ್ತು.

ಬಳಿಕ ವಸತಿ ಶಾಲೆಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ನೀಡಿದ್ದ ಗಿಡಗಳನ್ನು ಅತಿಥಿಗಳು, ವಿದ್ಯಾರ್ಥಿಗಳು, ಸ್ವ ಸಹಾಯ ಸಂಘ, ಒಕ್ಕೂಟದ ಸದಸ್ಯರುಗಳು ಗಿಡಗಳ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Translate »