ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಕ್ಕೆ ಖಂಡನೆ
ಕೊಡಗು

ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಕ್ಕೆ ಖಂಡನೆ

July 30, 2018

ಸೋಮವಾರಪೇಟೆ: ಕೊಡ್ಲಿ ಪೇಟೆ ಪೆಟ್ರೋಲ್ ಬಂಕ್ ಬಳಿ ನಡೆದ ಪತ್ರಿಭಟನೆಗೆ ಸಂಬಂಧಿಸಿದಂತೆ ಅಮಾಯಕರ ಮೇಲೆ ಜಾತಿನಿಂದನೆ ಮೊಕದ್ದಮೆ ದಾಖಲಿಸಿರುವುದು ಖಂಡನೀಯ ಎಂದು ಜಯಕರ್ನಾಟಕ ಸಂಘಟ ನೆಯ ತಾಲೂಕು ಅಧ್ಯಕ್ಷ ಸಿ.ಬಿ.ಸುರೇಶ್ ಶೆಟ್ಟಿ ಹೇಳಿದ್ದಾರೆ.

ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಪಡದೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಮಾಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದ್ದಾರೆ. ಜಯಕರ್ನಾಟಕ ಸಂಘಟನೆ ರಾಜ ಕೀಯ ರಹಿತವಾಗಿದ್ದು, ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾ ಬರುತ್ತಿದೆ. ಸಾರ್ವಜನಿಕರ ಮನವಿ ಮೇರೆಗೆ ನಮ್ಮ ಸಂಘಟನೆಯ ಕೆಲ ಸದಸ್ಯರು, ಬಂಕ್‍ನಲ್ಲಿ ಪೆಟ್ರೋಲ್‍ಗೆ ನೀರು ಮಿಶ್ರಿತವಾಗಿರುವ ಬಗ್ಗೆ ಸಕಾರಣವನ್ನು ಕೇಳಿದ್ದಕ್ಕೆ, ಅಲ್ಲಿನ ಕೆಲಸಗಾರರು ದೂರು ನೀಡಿದ್ದಾರೆ. ಆದರೆ ಪೊಲೀಸರು ತನಿಖೆ ಮಾಡದೆ ಜಾತಿನಿಂದನೆ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ ಎಂದರು. ಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ರಂಗಸ್ವಾಮಿ, ಪ್ರ.ಕಾರ್ಯ ದರ್ಶಿ ರಫೀಕ್, ನಗರಾಧ್ಯಕ್ಷ ದೊರೆ, ಯುವ ಘಟಕದ ಕಾರ್ಯದರ್ಶಿ ನಿತೀನ್ ಇದ್ದರು.

Translate »