ಪಾರಂಪರಿಕ ತಿನಿಸು ನೆನಪಿಸಿದ ಕೊಡವ ತೀನಿ ನಮ್ಮೆ
ಕೊಡಗು

ಪಾರಂಪರಿಕ ತಿನಿಸು ನೆನಪಿಸಿದ ಕೊಡವ ತೀನಿ ನಮ್ಮೆ

July 30, 2018

ಮಡಿಕೇರಿ:  ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಕೊಡವ ತೀನಿ ನಮ್ಮೆ ಕಾರ್ಯಕ್ರಮ ನಗರದ ಕೊಡವ ಸಮಾಜದಲ್ಲಿ ನಡೆಯಿತು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ನಡೆದ ಕೊಡವ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳು ಮೇಳೈಸಿದವು. ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಉದ್ದೇಶ ದಿಂದ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಸಲುವಾಗಿ ಪೈಪೋಟಿ ಹಾಗೂ ಪ್ರದರ್ಶನ ಎಂಬ ಎರಡು ಪ್ರತ್ಯೇಕ ವಿಭಾಗದಲ್ಲಿ ಕಾರ್ಯಕ್ರಮ ನಡೆಯಿತು.

ವಿವಿಧ ಬಗೆಯ ಹಿಟ್ಟು ಅಂದರೆ ಪುಟ್ಟ್, ಸಾರು ಅಂದರೆ ಕರಿ, ಮಾಂಸದ ಸಾರಾದ ಯರ್ಚಿ ಕರಿ, ಪಜ್ಜಿ ಹಾಗೂ ಪಾರ ಅಂದರೆ ಉಪ್ಪಿನ ಕಾಯಿಯನ್ನು ತಯಾರಿಸಿಟ್ಟು ತೀನಿ ಕಾರ್ಯಕ್ರಮಕ್ಕೆ ಮಹಿಳೆಯರು ರಂಗು ತುಂಬಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಇಂದಿನ ಯುವ ಜನತೆಗೆ ಹಿಂದಿನ ಕಾಲದ ತಿನಿಸು ಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಕಾಲ ಬದಲಾದಂತೆ ಫಾಸ್ಟ್ ಫುಡ್ ಜೀವನಕ್ಕೆ ಒಗ್ಗಿ ಕೊಂಡಿದ್ದಾರೆ. ಅದರಂತೆಯೇ ಖಾಯಿಲೆಗಳು ಕೂಡ ಚಿಕ್ಕವಯಸ್ಸಿನಿಂದಲೇ ಆರಂಭ ವಾಗುತ್ತಿದೆ. ಹಾಗಾಗಿ ಮನೆಯ ಸುತ್ತ ಮುತ್ತ, ತೋಟಗಳಲ್ಲಿ ಸಿಗುವ ತರಕಾರಿ ಹಾಗೂ ಹಣ್ಣುಗಳಲ್ಲಿ ತಯಾರಿಸಿದ ಅಡುಗೆ ಸೇವಿಸಿದರೆ ಯಾವುದೇ ಖಾಯಿಲೆಗೆ ತುತ್ತಾಗುವುದಿಲ್ಲ ಎಂದರು.

ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿ, ಕೊಡವರು ಆಯಾ ಋತು ವಿಗೆ ತಕ್ಕಂತೆ ಹಲವಾರು ತಿನಿಸುಗಳನ್ನು ತಯಾರಿಸುತ್ತಾರೆ ಎಂದರು.

ಕೊಡವ ಅಕಾಡೆಮಿಯಿಂದ ಪೊಂಗುರಿ ಪುಸ್ತಕದ 3 ತಿಂಗಳ ಸಂಚಿಕೆಯನ್ನು ಬಿಡು ಗಡೆಗೊಳಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಹಿಂದಿನ ಪದ್ಧತಿ ಗಳನ್ನು ಮತ್ತೊಮ್ಮೆ ನೆನಪು ಮಾಡುವ ಹಾಗೂ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಇಂತಹದೊಂದು ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೊಡವ ಸಮಾಜ ಒಕ್ಕೂಟ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಮಾತನಾಡಿ, ಹಲವಾರು ಕಡೆ ಗಳಲ್ಲಿ ಈ ರೀತಿಯ ಆಚರಣೆಗಳು ನಡೆ ಯುತ್ತಿದೆ. ಆದರೆ ಮಡಿಕೇರಿಯಲ್ಲಿ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ನಡೆ ಯುತ್ತಿರುವುದು ಶ್ಲಾಘನೀಯವೆಂದರು. ಸಮಾಜ ಸೇವಕಿ ಬಾಚಮಂಡ ಗೌರಮ್ಮ ಮಾದಮ್ಮಯ ಮಾತನಾಡಿ, ಕೊಡಗಿನ ಆಚಾರ-ವಿಚಾರ, ಸಂಸ್ಕøತಿಯನ್ನು ಎಲ್ಲರೂ ಅನುಸರಿಸಿಕೊಂಡು ಹೋಗಬೇಕು. ಹಿಂದಿನ ಕಾಲದವರಂತೆ ನಾಟಿ ಔಷಧಿ ಯನ್ನು ಹೆಚ್ಚಾಗಿ ಬಳಸಬೇಕು ಎಂದರು.

ಇದೇ ಸಂದರ್ಭ ಕೊಡವ ಸಾಂಪ್ರದಾಯಿಕ ಅಡುಗೆ ಪದ್ಧತಿ, ಪದಾರ್ಥ, ಬಳಸುವ ಸಾಮಗ್ರಿ ಸೇರಿದಂತೆ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮ ವನ್ನು ನಡೆಸಲಾಯಿತು. ಸ್ಪರ್ಧಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

Translate »