ವೀರಶೈವ ಲಿಂಗಾಯಿತ ನೌಕರರ ಸಂಘಗಳ ಮಹಾಸಭೆ
ಚಾಮರಾಜನಗರ

ವೀರಶೈವ ಲಿಂಗಾಯಿತ ನೌಕರರ ಸಂಘಗಳ ಮಹಾಸಭೆ

July 30, 2018

ಚಾಮರಾಜನಗರ:  ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘಗಳ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ನಗರದ ಶ್ರೀ ಸಿದ್ಧಮಲ್ಲೇಶ್ವರ ಮುಕ್ತ ಮಠದಲ್ಲಿ ಭಾನುವಾರ ನಡೆಯಿತು.

ಈ ವೇಳೆ ಗೌರವ ಡಾಕ್ಟರೇಟ್ ಪಡೆದ ವಾಟಾಳು ಮಠದ ಶ್ರೀಗಳಾದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರಿಯ ಸಹಕಾರಿಗಳಾದ ಕೋಡಿಮೋಳೆ ರಾಜಶೇಖರ್, ಅರಕಲವಾಡಿ ಬಿ.ಸಿದ್ದಮಲ್ಲಯ್ಯ, ನಿವೃತ್ತ ರಾದ ಸಂಘದ ಸದಸ್ಯರಿಗೆ ಹಾಗೂ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ 70ಕ್ಕೂ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ವಾಟಾಳು ಶ್ರೀಗಳಾದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಸಹಕಾರಿ ಹಾಗೂ ಈ ಸೇವಾ ಸಂಘಗಳು ಒಂದಕ್ಕೊಂದು ಪೈಪೋಟಿ ನಡೆಸುವ ಈ ಸಂದರ್ಭದಲ್ಲಿ ಮೂರು ಸಂಘಗಳ ವಾರ್ಷಿಕ ಮಹಾಸಭೆ ಒಂದೇ ವೇದಿಕೆಯಲ್ಲಿ ನಡೆಯುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ವೀರಶೈವ ಲಿಂಗಾಯಿತ ನೌಕ ರರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಆರ್.ಎಂ.ಸ್ವಾಮಿ ಮಾತನಾಡಿ, ವೀರಶೈವ ಲಿಂಗಾಯಿತ ಸ್ವಾಭಿಮಾನಿಗಳು ಸಮಾಜದಲ್ಲಿ ಬಡ ಹಾಗೂ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಮ್ಮ ನೌಕರರು ಉತ್ತಮ ನೆರವು ನೀಡ ಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸಂಘದ ಉಪಾಧ್ಯಕ್ಷ ಜಗ ದೀಶ್, ಸಂಘಗಳ ಅಧ್ಯಕ್ಷರಾದ ಪರ ಮೇಶ್ವರಪ್ಪ, ಎಲ್.ರೇವಣ್ಣ, ಶಿವಕುಮಾರ ಸ್ವಾಮಿ, ಮುಖಂಡರಾದ ಕೆ.ಎಸ್.ಮಹದೇವ ಸ್ವಾಮಿ, ಸಿದ್ದಮಲ್ಲಪ್ಪ, ಮಹದೇವಸ್ವಾಮಿ, ಕುಮಾರ್, ಜಯಶಂಕರ್, ಜ್ಯೋತಿ, ಹೆಚ್.ಎಂ. ಗುರುಸ್ವಾಮಿ, ಗಂಗಾಧರ, ಬಸವಣ್ಣ, ಪುಷ್ಪಲತಾ, ಆರ್.ಎಸ್.ಪ್ರತಾಪ್, ಸಿದ್ದಪ್ಪ ಇತರರು ಉಪಸ್ಥಿತರಿದ್ದರು. ಎಲ್ಲಾ ಸಂಘಗಳ ಹೆಸರನ್ನು ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಎಂದು ಮರು ನಾಮ ಕರಣ ಮಾಡಲಾಯಿತು. ಈ ವೇಳೆ ಸಭಿಕರು ಚಪ್ಪಾಳೆ ತಟ್ಟಿ ಇದನ್ನು ಅನುಮೋದಿಸಿದರು.

Translate »