ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲು ಮಾಡಿ ಕೊಳ್ಳಲು ಹಿಂದೇಟು ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಎಸ್‍ಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಕುಂದು ಕೊರತೆ ಸಮಸ್ಯೆ ಆಲಿಕೆ ಕುರಿತ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಗಳ ಜನರ ಹಿತರಕ್ಷಣೆ ಪೊಲೀಸ್ ಇಲಾಖೆಯ ಮುಖ್ಯ ಕರ್ತವ್ಯ ಕೂಡ ಆಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗಿ ದೂರು ದಾಖಲು ಮಾಡಲು ಮುಂದಾದರೆ ವಿಳಂಬ ಮಾಡದೆ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ಪ್ರಕರಣ ದಾಖಲು ಮಾಡಿಕೊಳ್ಳಲು ನಿರಾಕರಿಸುವುದು ಕಂಡು ಬಂದರೆ ಸಂಬಂಧ ಪಟ್ಟವರ ವಿರುದ್ಧ ಇಲಾಖೆ ಗಂಭೀರ ಕ್ರಮ ಜರುಗಿಸಲಿದೆ ಎಂದು ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದರು.
ಪರಿಶಿಷ್ಟರ ಸಮಸ್ಯೆಯು ಸೇರಿದಂತೆ ಯಾವುದೇ ದೂರು ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲು ವಿಳಂಬ ನೀತಿ ಅನುಸರಿಸು ವುದು ಅಥವಾ ನಿರ್ಲಕ್ಷ್ಯ ವಹಿಸುವುದು ಕಂಡು ಬಂದರೆ ನೇರವಾಗಿ ನನ್ನನ್ನೇ ಕಂಡು ದೂರು ನೀಡಬಹುದು. ದೂರವಾಣಿ ಅಥವಾ ಸಂದೇಶ ಮೂಲಕವು ದೂರು ಬಗ್ಗೆ ತಿಳಿಸಿದರೆ ತಾವೇ ಖುದ್ದು ಕ್ರಮ ವಹಿಸಲು ಸೂಚನೆ ನೀಡು ವುದಾಗಿ ಜಿಲ್ಲಾ ಎಸ್‍ಪಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಮುಖಂಡರು, ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ದಲಿತರು ವಾಸಿಸುವ ಕಾಲೋನಿಗಳಲ್ಲಿ ಆಕ್ರಮವಾಗಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡ ಲಾಗುತ್ತಿದೆ ಎಂದು ಗಮನಕ್ಕೆ ತಂದರು.
ಕೆಲ ಭಾಗಗಳಲ್ಲಿ ತಾರತಮ್ಯ ನೀತಿ ಅನು ಸರಿಸಲಾಗುತ್ತಿದೆ, ಯುವ ಜನರಿಗೆ ಉದ್ಯೋಗ ನೀಡಬೇಕು, ಜನಾಂಗದವರಿಗೆ ಎಲ್ಲಾ ಸೌಲಭ್ಯ ಗಳು ಬಳಕೆ ಮಾಡಲು ಅಡ್ಡಿ ಮಾಡಲಾಗುತ್ತಿದೆ. ಚರಂಡಿ ಇತರೆ ಸೌಲಭ್ಯಗಳಿಗೂ ತೊಂದರೆಯಾಗುತ್ತಿದೆ. ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಿದ ಬಳಿಕ ದೂರುದಾರರಿಗೆ ಸ್ವೀಕೃತಿ ನೀಡಬೇಕು ಎಂದು ಗಮನಕ್ಕೆ ತಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಬೇಕು ಪೊಲೀಸ್ ಅಧಿಕಾರಿಗಳು ಇಂತಹ ಸಭೆಯನ್ನು ಏರ್ಪಡಿಸಿದರೆ ಇನ್ನಷ್ಟು ಸ್ಥಳೀಯ ಸಮಸ್ಯೆಗ ಳನ್ನು ನಿವೇದಿಸಿ ಪರಿಹಾರಕ್ಕೆ ಅನುಕೂಲ ವಾಗುತ್ತದೆ ಎಂದು ಮುಖಂಡರು ಸಲಹೆ ಮಾಡಿದರು.
ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಸಭೆಯಲ್ಲಿ ಕೇಳಿಬಂದಿರುವ ಸಲಹೆಗಳನ್ನು ಪರಿಗಣಿಸಲಾಗುವುದು. ಪರಿಶಿಷ್ಠರ ಕಾಯ್ದೆ ಅನುಸಾರ ಕ್ರಮವಹಿಸಲಾಗುವುದು ಎಂದರು.
ಅಬಕಾರಿ ಉಪ ಆಯುಕ್ತರಾದ ನಾಗೇಶ್, ಡಿವೈಎಸ್‍ಪಿ ಜಯಕುಮಾರ್, ಪುಟ್ಟಮಾದಯ್ಯ ಮುಖಂಡರಾದ ಕೆ.ಎಂ. ನಾಗರಾಜು, ಅರಕಲವಾಡಿ ನಾಗೇಂದ್ರ, ಪಿ. ಸಂಘಸೇನ, ದೊಡ್ಡಿಂದುವಾಡಿ ಸಿದ್ದರಾಜು, ಆಲೂರು ನಾಗೇಂದ್ರ, ರಾಮ ಸಮುದ್ರ ಸುರೇಶ್, ಶಿವಣ್ಣ, ಕೃಷ್ಣಯ್ಯ, ಮಾದೇವನಾಯಕ, ಹೊಂಗನೂರು ಕೆಂಪರಾಜು, ಮಾದೇಶ್, ರವಿಕುಮಾರ್, ದೊರೆಸ್ವಾಮಿ ಮತ್ತಿತರರು ಸಭೆಯಲ್ಲಿ ಮಾತನಾಡಿದರು.