ಪಾಲಿಥಿನ್ ಕವರ್ ಬಳಕೆ ಕೈಬಿಡುವಂತೆ ಮನವಿ
ಮೈಸೂರು

ಪಾಲಿಥಿನ್ ಕವರ್ ಬಳಕೆ ಕೈಬಿಡುವಂತೆ ಮನವಿ

December 4, 2020

ಮೈಸೂರು, ಡಿ.3(ಎಸ್‍ಪಿಎನ್)- ನಮ್ಮ ಸುತ್ತ್ತಲಿನ ಪರಿಸರ ಶುದ್ಧವಾಗಿರಬೇಕಾದರೆ ನಗರದ ಜೀವನಶೈಲಿ ಬದಲಾಗಬೇಕು ಎಂದು ರಾಜ್ಯ ವಾಯುಮಾಲಿನ್ಯ ಮಂಡಳಿ ಮೈಸೂರು ಕೇಂದ್ರದ ಉಪ ಪರಿಸರ ಅಧಿಕಾರಿ ಸಬಿಕೆ ನುಬಿಯಾ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಶ್ರೀಗರಿ ಟ್ರಸ್ಟ್ ವತಿಯಿಂದ `ರಾಷ್ಟ್ರೀಯ ಪರಿಸರ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಪ್ರಸ್ತುತ ನಗರ ಪ್ರದೇಶದಲ್ಲಿ ಪಾಲಿಥಿನ್ ಕವರ್, ಕ್ಯಾರಿಬ್ಯಾಗ್ ಅತಿಯಾಗಿ ಬಳಕೆಯಾಗುತ್ತಿದೆ. ಹಾಗಾಗಿ, ತೆಳು ಪಾಲಿಥಿನ್ ಬಳಕೆ ನಿಷೇಧಿಸಲಾಗಿದೆ. ಆದರೂ ವರ್ತಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತೆಳುವಾದ ಕವರ್, ಕ್ಯಾರಿಬ್ಯಾಗ್ ಬಳಸುತ್ತಿರು ವುದು ಬೇಸರದ ಸಂಗತಿ. ಸಾರ್ವಜನಿಕರು ಪರಿಸರದ ಮೇಲೆ ಪರಿಣಾಮ ಬೀರುವ ಪಾಲಿಥಿನ್ ಕವರ್ ಬಳಕೆಯನ್ನು ಸ್ವಯಂಪ್ರೇರಿತರಾಗಿ ಕಡಿಮೆ ಮಾಡಬೇಕು ಎಂದರು.

ಕಳೆದ 4 ತಿಂಗಳಿಂದ ಕೊರೊನಾ ಸೋಂಕು ಹೆಚ್ಚಾಗಿದ್ದ ವೇಳೆ ಪಿಪಿಇ ಕಿಟ್ ತ್ಯಾಜ್ಯ ವಿಲೇ ವಾರಿ ಕಷ್ಟವಾಗಿತ್ತು. ಹಾಗಿದ್ದೂ ಸರ್ಕಾರದ ಮಾರ್ಗಸೂಚಿಯಂತೆ ಪಿಪಿಇ ಕಿಟ್ ತ್ಯಾಜ್ಯವನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡಲಾಗಿದೆ ಎಂದರು. ಈ ವೇಳೆ ಹಿರಿಯ ಬರಹಗಾರ ಸಿ.ಮಹೇ ಶ್ವರನ್, ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷೆ ಹೆಚ್.ಎಲ್.ಯಮುನಾ, ಗುರುಪವನಸುತ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಿವಣ್ಣಾಚಾರ್, ಮಹೇಶ್ ಇದ್ದರು.

Translate »