ಮಾಲಿನ್ಯ ತಡೆಯಿಂದ ಮಾತ್ರ ಮನುಕುಲಕ್ಕೆ ಉಳಿಗಾಲ
ಮಂಡ್ಯ

ಮಾಲಿನ್ಯ ತಡೆಯಿಂದ ಮಾತ್ರ ಮನುಕುಲಕ್ಕೆ ಉಳಿಗಾಲ

August 8, 2018

ಭಾರತೀನಗರ: ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ ತಡೆಗಟ್ಟಿ ದರೆ ಮಾತ್ರ ಮನುಕುಲಕ್ಕೆ ಉಳಿಗಾಲ ಎಂದು ಕೃಷಿಕ್ ಲಯನ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಪರಿಸರ ಪ್ರೇಮಿ ಕೆ.ಟಿ.ಹನುಮಂತು ತಿಳಿಸಿದರು.

ಇಲ್ಲಿನ ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ಶಾಲೆ ಆವರಣದಲ್ಲಿ ಮಂಗಳ ವಾರ ಪರಿಸರ ಜಾಗೃತಿ ವೇದಿಕೆಯಿಂದ ನಡೆದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಶಾಲೆಗೆ ಗಿಡ ಕೊಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ದಿನಾ ಚರಣೆಯನ್ನು ಜೂ.5 ರಂದು ಮಾತ್ರ ಆಚರಿಸದೆ ಪ್ರತಿ ದಿನವೂ ಪರಿಸರ ದಿನ ಆಚರಿಸಬೇಕೆಂದು ಮನವಿ ಮಾಡಿದರು.

ಪರಿಸರ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್ ಮಾತನಾಡಿ, ತಂದೆ-ತಾಯಿ, ವೈದ್ಯರ , ಪ್ರೇಮಿಗಳ ದಿನಾ ಚರಣೆ ಆಚರಿಸುವಂತೆ ಪರಿಸರ ದಿನಾಚರಣೆ ಆಚರಿಸಬೇಡಿ. ಪ್ರತಿ ದಿನವೂ ಪರಿಸರ ದಿನಾಚರಣೆ ಆಚರಿಸಿದಾಗ ಮಾತ್ರ ನಮ್ಮ ಪರಿಸರ ಸಮೃದ್ಧಿ ಕಾಣಲು ಸಾಧ್ಯ ಎಂದರು.

ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಡುವ ಮೂಲಕ ರಾಜ್ಯದಲ್ಲಿ ಆರೂವರೆ ಕೋಟಿ ಗಿಡಗಳನ್ನು ಬೆಳಸ ಬಹುದು. ಇದು ಒಬ್ಬರು, ಇಬ್ಬರಿಂದ ಮಾಡುವ ಕೆಲಸವಲ್ಲ, ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಇದ್ದರೆ ಮಾತ್ರ ಸಾಧ್ಯ ಎಂದರು.

ಪರಿಸರ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಜೈಭೀಮ್ ಶಿವಲಿಂಗಯ್ಯ ಮಾತನಾಡಿದರು. ಇದೇ ವೇಳೆ ಪರಿಸರ ಜಾಗೃತಿ ವೇದಿಕೆ ಯಿಂದ ಶಾಲಾ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಗೌತಮ ಬುದ್ದ, ಡಾ.ಬಿ.ಆರ್.ಅಂಬೇಡ್ಕರ್, ಸುಭಾಷ್‍ಚಂದ್ರ ಬೋಸ್, ಲಾಲ್‍ಬಹದ್ದೂರ್‍ಶಾಸ್ತ್ರಿ ಸೇರಿ ದಂತೆ ದೇಶದ ಮಹನೀಯರ ಹೆಸರಿ ನಲ್ಲಿ ಗಿಡಗಳನ್ನು ನೆಡಲಾಯಿತು.

ವೇದಿಕೆಯಲ್ಲಿ ಶಾಲೆ ಸಂಸ್ಥಾಪಕ ಎ.ಎಸ್. ಬೋರೇಗೌಡ, ಮುಖ್ಯಶಿಕ್ಷಕಿ ನಂದಿನಿ, ಪರಿಸರ ಜಾಗೃತಿ ವೇದಿಕೆ ಉಪಾಧ್ಯಕ್ಷ ಶಂಕರೇ ಗೌಡ, ಪ್ರಧಾನ ಕಾರ್ಯದರ್ಶಿ ರಾಮ ಚಂದ್ರು, ನಂದೀಶ್, ಪದಾಧಿಕಾರಿಗಳಾದ ಅನುಪಮ ಸತೀಶ್, ರಮ್ಯ, ಯೋಗೇಶ್, ಶಿವಲಿಂಗು(ಸಿದ್ದು), ಬಲ್ಲೇಗೌಡ, ಶಿವಲಿಂಗೇ ಗೌಡ ಸೇರಿದಂತೆ ಇತರರಿದ್ದರು.

Translate »