Tag: Environment

ಪಾಲಿಥಿನ್ ಕವರ್ ಬಳಕೆ ಕೈಬಿಡುವಂತೆ ಮನವಿ
ಮೈಸೂರು

ಪಾಲಿಥಿನ್ ಕವರ್ ಬಳಕೆ ಕೈಬಿಡುವಂತೆ ಮನವಿ

December 4, 2020

ಮೈಸೂರು, ಡಿ.3(ಎಸ್‍ಪಿಎನ್)- ನಮ್ಮ ಸುತ್ತ್ತಲಿನ ಪರಿಸರ ಶುದ್ಧವಾಗಿರಬೇಕಾದರೆ ನಗರದ ಜೀವನಶೈಲಿ ಬದಲಾಗಬೇಕು ಎಂದು ರಾಜ್ಯ ವಾಯುಮಾಲಿನ್ಯ ಮಂಡಳಿ ಮೈಸೂರು ಕೇಂದ್ರದ ಉಪ ಪರಿಸರ ಅಧಿಕಾರಿ ಸಬಿಕೆ ನುಬಿಯಾ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಶ್ರೀಗರಿ ಟ್ರಸ್ಟ್ ವತಿಯಿಂದ `ರಾಷ್ಟ್ರೀಯ ಪರಿಸರ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಪ್ರಸ್ತುತ ನಗರ ಪ್ರದೇಶದಲ್ಲಿ ಪಾಲಿಥಿನ್ ಕವರ್, ಕ್ಯಾರಿಬ್ಯಾಗ್ ಅತಿಯಾಗಿ ಬಳಕೆಯಾಗುತ್ತಿದೆ. ಹಾಗಾಗಿ, ತೆಳು ಪಾಲಿಥಿನ್ ಬಳಕೆ…

ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಣಕ್ಕೆ ಮುಂದಾದ ವಿದ್ಯಾರ್ಥಿ ತಂಡ
ಮೈಸೂರು

ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಣಕ್ಕೆ ಮುಂದಾದ ವಿದ್ಯಾರ್ಥಿ ತಂಡ

June 3, 2019

ಮೈಸೂರು: ಪರಿಸರಕ್ಕೆ ಮಾರಕ ವಾಗುವ ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಿಸಲು ವಿದ್ಯಾರ್ಥಿ ತಂಡವೊಂದು ವಿನೂತನ ಕಾರ್ಯಕ್ರಮ ರೂಪಿಸಿದೆ. `ಹಸ್ತಿ’ ಹೆಸರಿನಲ್ಲಿ ವಿದ್ಯಾರ್ಥಿಗಳ ತಂಡವೊಂದು ಸಂಘ ಟಿತವಾಗಿ ಮೈಸೂರಿನ ನಾಗರಿಕರಿಗೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‍ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. `ಹಸ್ತಿ’ ಎಂದರೆ ಸಂಸ್ಕೃತದಲ್ಲಿ ಹಸಿರು ಎಂಬ ಅರ್ಥ ವಿದ್ದು, ಈ ಹೆಸರಿನಲ್ಲಿ ಮೈಸೂರಿನ ಆರ್‍ಐಇ (ಪ್ರಾದೇಶಿಕ ಶಿಕ್ಷಣ ಸಂಸ್ಥೆ) ಆವರಣದ ಡಿಎಂಎಸ್ ಶಾಲೆಯ 12ನೇ ತರಗತಿ ವಿದ್ಯಾರ್ಥಿಗಳಾದ ಎಸ್.ತೇಜಸ್ವಿನಿ ಹಾಗೂ ಶಿವಶಂಕರ್ ಅಂಬೇಡ್ಕರ್ ಮುಂದಾಳತ್ವದಲ್ಲಿ 10ಕ್ಕೂ ಹೆಚ್ಚು ಮಂದಿಯ…

ಮಾಲಿನ್ಯ ತಡೆಯಿಂದ ಮಾತ್ರ ಮನುಕುಲಕ್ಕೆ ಉಳಿಗಾಲ
ಮಂಡ್ಯ

ಮಾಲಿನ್ಯ ತಡೆಯಿಂದ ಮಾತ್ರ ಮನುಕುಲಕ್ಕೆ ಉಳಿಗಾಲ

August 8, 2018

ಭಾರತೀನಗರ: ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ ತಡೆಗಟ್ಟಿ ದರೆ ಮಾತ್ರ ಮನುಕುಲಕ್ಕೆ ಉಳಿಗಾಲ ಎಂದು ಕೃಷಿಕ್ ಲಯನ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಪರಿಸರ ಪ್ರೇಮಿ ಕೆ.ಟಿ.ಹನುಮಂತು ತಿಳಿಸಿದರು. ಇಲ್ಲಿನ ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ಶಾಲೆ ಆವರಣದಲ್ಲಿ ಮಂಗಳ ವಾರ ಪರಿಸರ ಜಾಗೃತಿ ವೇದಿಕೆಯಿಂದ ನಡೆದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಶಾಲೆಗೆ ಗಿಡ ಕೊಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ದಿನಾ ಚರಣೆಯನ್ನು ಜೂ.5 ರಂದು ಮಾತ್ರ ಆಚರಿಸದೆ ಪ್ರತಿ ದಿನವೂ ಪರಿಸರ ದಿನ ಆಚರಿಸಬೇಕೆಂದು ಮನವಿ…

ಚೆನ್ನಿಪುರದಮೋಳೆ ಶಾಲೆಯಲ್ಲಿ ಮರಗಿಡಗಳ ಹುಟ್ಟುಹಬ್ಬ ಆಚರಣೆ
ಚಾಮರಾಜನಗರ

ಚೆನ್ನಿಪುರದಮೋಳೆ ಶಾಲೆಯಲ್ಲಿ ಮರಗಿಡಗಳ ಹುಟ್ಟುಹಬ್ಬ ಆಚರಣೆ

July 31, 2018

ಚಾಮರಾಜನಗರ:  ಸಮೀಪದ ಚೆನ್ನಿಪುರದ ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ 2ನೇ ವರ್ಷದ ಗಿಡ ಮರಗಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಗಿಡಗಳ ಹುಟ್ಟುಹಬ್ಬದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಶಾಲೆಯನ್ನು ಶುಚಿಗೊಳಿಸಿ ಗಿಡಮರಗಳಿಗೆ ದೀಪಾಲಂಕಾರ ಹೂವಿನ ಆಲಂಕಾರ ಮಾಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಗಣ್ಯರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಪತ್ರಕರ್ತ ಎಸ್.ಎಂ.ನಂದೀಶ್ ಮಾತನಾಡಿ, ಇಂದಿನ ದಿನಗಳಲ್ಲಿ ಸಿನಿಮಾ ನಟರು ಹಾಗೂ ವೈಯಕ್ತಿಕವಾಗಿ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ವಾಡಿಕೆಯಾಗಿದೆ. ನಮಗೆ ಉಸಿರಾಡಲು ಶುದ್ಧ ಗಾಳಿ ನೀಡುವ…

ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ
ಕೊಡಗು

ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ

July 30, 2018

ವಿರಾಜಪೇಟೆ:  ಪರಿಸರದಿಂದ ಗಾಳಿ ಬೆಳಕು ಅಹಾರಗಳನ್ನು ಪಡೆದು ಕೊಳ್ಳುವ ನಾವು ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿ ಯೊಬ್ಬರ ಕರ್ತವ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬೇಟೋಳಿ, ಹಾಗೂ ಬಾಳುಗೋಡು ಏಕಲವ್ಯ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ವಸತಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ”ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ,…

ಪರಿಸರ ಸಂರಕ್ಷಣೆ ಜೊತೆಗೆ ಉತ್ತಮ ಫಲಿತಾಂಶದತ್ತ ಗಮನಹರಿಸಲು ಕಿವಿಮಾತು
ಮೈಸೂರು

ಪರಿಸರ ಸಂರಕ್ಷಣೆ ಜೊತೆಗೆ ಉತ್ತಮ ಫಲಿತಾಂಶದತ್ತ ಗಮನಹರಿಸಲು ಕಿವಿಮಾತು

July 22, 2018

ಮೈಸೂರು:  ಮೈಸೂರಿನ ಡಿ.ಬನುಮಯ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶನಿವಾರ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, `ಬಲಿಷ್ಠ ಭಾರತ-ಹಸಿರು ಭಾರತ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂವಾದ ನಡೆಸಿ, ಪರಿಸರ ಸಂರಕ್ಷಣೆಯೊಂದಿಗೆ ಹತ್ತನೇ ತರಗತಿಯ ಫಲಿತಾಂಶ ಉತ್ತಮಗೊಳಿಸಲು ಪೂರ್ವ ತಯಾರಿಯ ಬಗ್ಗೆ ಸಲಹೆ ನೀಡಿದರು. ಕೆ.ಆರ್.ಕ್ಷೇತ್ರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಿಸುವುದರೊಂದಿಗೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ `ಬಲಿಷ್ಠ ಭಾರತ-ಹಸಿರು ಭಾರತ’ ಕಾರ್ಯಕ್ರಮದಡಿ ಪ್ರತಿ ಶನಿವಾರ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸುತ್ತಿರುವ ಶಾಸಕ ಎಸ್.ಎ.ರಾಮದಾಸ್, ಇಂದು ಡಿ.ಬನುಮಯ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ನಾಲ್ಕನೆ ಕಾರ್ಯಕ್ರಮದಲ್ಲಿ…

ನೈಸರ್ಗಿಕ ಸಂಪತ್ತು ರಕ್ಷಣೆ ಮೂಲಭೂತ ಕರ್ತವ್ಯ  ಜಿಲ್ಲಾ ನ್ಯಾಯಾಧೀಶರಾದ ಜಿ.ಬಸವರಾಜ
ಚಾಮರಾಜನಗರ

ನೈಸರ್ಗಿಕ ಸಂಪತ್ತು ರಕ್ಷಣೆ ಮೂಲಭೂತ ಕರ್ತವ್ಯ  ಜಿಲ್ಲಾ ನ್ಯಾಯಾಧೀಶರಾದ ಜಿ.ಬಸವರಾಜ

July 20, 2018

ಚಾಮರಾಜನಗರ:  ಅಮೂಲ್ಯವಾದ ನೈಸರ್ಗಿಕ ಸಂಪತ್ತಿನ ಬಗ್ಗೆ ಕಾಳಜಿ ವಹಿಸಿ ಪರಿಸರ ಸಂರಕ್ಷಿಸುವುದು ಪ್ರತಿ ಯೊಬ್ಬರ ಮೂಲಭೂತ ಕರ್ತವ್ಯವೂ ಆಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ತಿಳಿಸಿದರು. ನಗರದ ಹೊರವಲಯದಲ್ಲಿರುವ ಕರಿವರದರಾಜನ ಬೆಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಓಡಿಪಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವೃಕ್ಷ ಕ್ರಾಂತಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. ಉತ್ತಮ ಪರಿಸರವಿದ್ದರೆ ಮಾನವ ಪ್ರಾಣಿಸಂಕುಲಗಳ ಜೀವಕ್ಕೂ ಸುರಕ್ಷತೆ ಇರುತ್ತದೆ. ಪರಿಸರ ನಾಶವಾದರೆ…

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಕೊಡಗು

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

July 10, 2018

ವಿರಾಜಪೇಟೆ:  ಮನುಷ್ಯನ ಬದುಕಿಗೆ ಪರಿಸರವು ಪರಿಪೂರ್ಣತೆಯನ್ನು ನೀಡುತ್ತಿರುವ ಕಾರಣದಿಂದಾಗಿ ಪರಿಸರವನ್ನು ಸಂರಕ್ಷಿಸುವ ಕರ್ತವ್ಯ ಮನುಷ್ಯನಿಗೆ ಇದೆಯೆಂದು ಹಿರಿಯ ಪರಿಸರ ತಜ್ಞ ಡಾ. ಎಸ್.ವಿ.ನರಸಿಂಹನ್ ಹೇಳಿದ್ದಾರೆ. ವಿರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಸ್ವಾಮಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಹೊಂಬೆಳಕು” ಮಾಸಿಕ ತತ್ವ ಚಿಂತನ ಗೋಷ್ಠಿಯ 178ನೇ ಕಿರಣದಲ್ಲಿ “ಪರಿಸರ ಗೀತೆಗಳು, ಒಂದು ರೂಪಕ” ಎಂಬ ವಿಷಯದ ಬಗ್ಗೆ ಗೀತೆಗಳ ಪ್ರಸ್ತುತಿ ಕಾರ್ಯಕ್ರಮದ ನಿರೂಪಕರಾಗಿ ಮಾತನಾಡಿದ ನರಸಿಂಹನ್, “ಭೂಮಿಯಲ್ಲಿ ಲಕ್ಷಾಂತರ ವರ್ಷಗಳಿಂದ ಪರಿಸರವನ್ನು ಅನುಭವಿಸುತ್ತಾ ಬದುಕುತ್ತಿ ರುವ ಮನುಷ್ಯ…

ನಾವು ಹಾಳು ಮಾಡಿರುವ ಪರಿಸರವನ್ನು ನಾವೇ ಸರಿಪಡಿಸಬೇಕು
ಮಂಡ್ಯ

ನಾವು ಹಾಳು ಮಾಡಿರುವ ಪರಿಸರವನ್ನು ನಾವೇ ಸರಿಪಡಿಸಬೇಕು

June 25, 2018

ಭಾರತೀನಗರ:  ನಾವು ಹಾಳು ಮಾಡುವ ಪರಿಸರವನ್ನು ನಾವೇ ಸರಿ ಪಡಿಸಬೇಕು ಎಂದು ಕೃಷಿಕ್ ಲಯನ್ ಸಂಸ್ಥೆಯ ಮಹಾಪೋಷಕ ಕೆ.ಟಿ.ಹನು ಮಂತು ತಿಳಿಸಿದರು.ಇಲ್ಲಿನ ಕೃಷಿಕ್ ಲಯನ್ ಸಂಸ್ಥೆ, ಅಂಗನ ವಾಡಿ ಭಾರತೀನಗರ ಇವರ ಆಶ್ರಯದಲ್ಲಿ ಮಹಿಳೆಯರಿಗೆ ಸಸಿ ವಿತರಣೆ, ಸಸಿ ನೆಡುವ ಮತ್ತು ಟೇಬಲ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರದ ಬಗ್ಗೆ ಅಂಗನವಾಡಿ ಮಹಿಳೆ ಯರಿಗೆ ಜಾಗೃತಿ ಮೂಡಿಸಿದರೆ ಒಂದು ಊರಿಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂಬ ಉದ್ದೇಶದಿಂದ ಅಂಗನವಾಡಿಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿ…

ಮೈಸೂರಲ್ಲಿ ಪರಿಸರ ಜಾಗೃತಿ ಸಮಾವೇಶ
ಮೈಸೂರು

ಮೈಸೂರಲ್ಲಿ ಪರಿಸರ ಜಾಗೃತಿ ಸಮಾವೇಶ

June 18, 2018

ಮೈಸೂರು: ನಾವು ಸೇವಿಸುವ ಗಾಳಿ, ನೀರು, ಆಹಾರ ಗುಣಮಟ್ಟದಿಂದ ಕೂಡಿರ ಬೇಕಾದರೆ, ರಾಸಾಯನಿಕ ಮುಕ್ತ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರ ಶುದ್ಧ ಹಸಿರು ವಲಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಟಿ.ಮಹದೇವಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಪಕ್ಕದಲ್ಲಿರುವ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಪರಿಸರ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ `ಪರಿಸರ ಜಾಗೃತಿ ಸಮಾವೇಶ ಮತ್ತು ಸ್ಮರಣೀಯರ ನುಡಿನಮನ’ ಕಾರ್ಯಕ್ರಮದಲ್ಲಿ…

1 2
Translate »