ವಿರಾಜಪೇಟೆ: ಮನುಷ್ಯನ ಬದುಕಿಗೆ ಪರಿಸರವು ಪರಿಪೂರ್ಣತೆಯನ್ನು ನೀಡುತ್ತಿರುವ ಕಾರಣದಿಂದಾಗಿ ಪರಿಸರವನ್ನು ಸಂರಕ್ಷಿಸುವ ಕರ್ತವ್ಯ ಮನುಷ್ಯನಿಗೆ ಇದೆಯೆಂದು ಹಿರಿಯ ಪರಿಸರ ತಜ್ಞ ಡಾ. ಎಸ್.ವಿ.ನರಸಿಂಹನ್ ಹೇಳಿದ್ದಾರೆ.
ವಿರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಸ್ವಾಮಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಹೊಂಬೆಳಕು” ಮಾಸಿಕ ತತ್ವ ಚಿಂತನ ಗೋಷ್ಠಿಯ 178ನೇ ಕಿರಣದಲ್ಲಿ “ಪರಿಸರ ಗೀತೆಗಳು, ಒಂದು ರೂಪಕ” ಎಂಬ ವಿಷಯದ ಬಗ್ಗೆ ಗೀತೆಗಳ ಪ್ರಸ್ತುತಿ ಕಾರ್ಯಕ್ರಮದ ನಿರೂಪಕರಾಗಿ ಮಾತನಾಡಿದ ನರಸಿಂಹನ್, “ಭೂಮಿಯಲ್ಲಿ ಲಕ್ಷಾಂತರ ವರ್ಷಗಳಿಂದ ಪರಿಸರವನ್ನು ಅನುಭವಿಸುತ್ತಾ ಬದುಕುತ್ತಿ ರುವ ಮನುಷ್ಯ ಎಂಬ ಜೀವಿ ಈ ಭೂಮಿ ಯಲ್ಲಿ ಬದುಕಲು ತಾನು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದರ ಬಗ್ಗೆ ಅವಲೋಕನ ನಡೆಸಬೇಕಾಗಿದೆ. ಮನುಷ್ಯ ತನ್ನ ಸ್ವಾರ್ಥ ಕ್ಕೋಸ್ಕರ ಪರಿಸರದ ಮೇಲೆ ನಿರಂತರ ಕ್ರೌರ್ಯವೆಸಗುತ್ತಿದ್ದಾನೆ. ಇತರ ಎಲ್ಲ ಸೃಷ್ಟಿಗಳಿಗಿಂತ ಮನುಷ್ಯ ಪರಿಸರದ ಸಂರ ಕ್ಷಣೆಗೆ ಅತಿ ಹೆಚ್ಚು ಹೊಣೆಗಾರನಾಗಿದ್ದಾನೆ.
ಕಾರಣವೇನೆಂದರೆ, ಪರಿಸರವನ್ನು ಉಳಿಸ ಬೇಕೆಂಬ ಪ್ರಜ್ಞೆ ಮನುಷ್ಯನಿಗೆ ಇರುತ್ತದೆಂಬ ಮತ್ತು ಪ್ರಕೃತಿಯ ಅತಿದೊಡ್ಡ ಗ್ರಾಹಕ ಮನುಷ್ಯನೇ ಆಗಿದ್ದಾನೆ. ಮಾತ್ರವಲ್ಲ, ಮುಂದಿನ ಪೀಳಿಗೆಗೆ ನೆಮ್ಮದಿಯ ಬದುಕಿಗೆ ಸ್ವಚ್ಛ-ಸುಂದರ ಪ್ರಕೃತಿ ಅಗತ್ಯವಾಗಿದೆ. ಭಾರತೀಯ ಸಂಸ್ಕøತಿಯಲ್ಲಿ ಭೂಮಿಗೆ ತಾಯಿಯ ಸ್ಥಾನವಿದೆ. ಆದರೆ, ಮನುಷ್ಯನ ಅನಗತ್ಯ ಹಸ್ತಕ್ಷೇಪದಿಂದಾಗಿ ಭೂಮಿಯ ಮೇಲಿನ ಬದುಕು ದುಸ್ತರವಾಗಿದೆ ಎಂದರು.
ನಿರ್ಮಲಾ ಗೋಪಾಲಕೃಷ್ಣ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿರಾಜ ಪೇಟೆಯ ಡಾ. ಎಂ.ವಿ.ದೀಪಕ್, ಕೇರಳದ ಕಾಲಡಿಯ ಸೈಂಟ್ ಗ್ರಿಗೋರಿ ಯಸ್ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಎಸ್.ಸುಪ್ರೀತ ಮತ್ತು ಡಾ. ಆಯುಷ್ ಎಂ.ಡಿ ಇವರು ಹೆಸ ರಾಂತ ಕಲಾವಿದೆ ಡಾ. ಹೆಚ್.ಆರ್. ಲೀಲಾವತಿ ವಿರಚಿತ ಪರಿಸರ ಗೀತೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನಮ್ಮ ದೇಶದ ಸಂಸ್ಕøತಿ ಪ್ರಕೃತಿಗೆ ಪೂರಕವಾದ ಸಂಸ್ಕøತಿಯಾಗಿದೆ. ಭಾರತೀಯರಾದ ನಾವು ಭೂಮಿಗೆ ತಾಯಿಯ ಸ್ಥಾನವನ್ನು ನೀಡಿದ್ದೇವೆ.
ಓರ್ವ ತಾಯಿಯ ಎಲ್ಲಾ ಗುಣಗಳು ಭೂಮಿ ಹೊಂದಿಕೊಂಡಿದೆ. ಮನುಷ್ಯನ ಎಲ್ಲಾ ವಿಧದ ದೌರ್ಜನ್ಯವನ್ನು ಭೂಮಿಯು ಸಹಿಸುತ್ತಾ ಬಂದಿದೆ ಎಂಬುದು ವಿಶೇಷ. ಮನುಷ್ಯರನ್ನು ಹೊರತುಪಡಿಸಿ ದೇವನ ಸೃಷ್ಟಿಗಳೆಲ್ಲವೂ ಪರಸ್ಪರ ಜವಾ ಬ್ದಾರಿಕೆಯಿಂದ ಕೆಲಸ ನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತೇವೆ. ಆದುದರಿಂದಲೇ ಪ್ರಕೃತಿಯು ಸ್ವಲ್ಪ ಮಟ್ಟಿಗಾದರೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದೆ. ಇತರ ಸೃಷ್ಟಿಗಳಿಗೆ ಹೋಲಿಸಿದಲ್ಲಿ ಪ್ರಕೃತಿಗೆ ಮನುಷ್ಯನ ಕೊಡುಗೆ ನಗಣ್ಯ. ಸ್ವಚ್ಛವಾದ ಮನಸ್ಸಿನೊಂದಿಗೆ ಸ್ವಚ್ಛ ಪರಿಸರಕ್ಕಾಗಿ ಪರಿಶ್ರಮಿಸಲು ನಾವು ಪಣ ತೊಡಬೇಕಾ ಗಿದೆ ಎಂದರು. ಸಿಂಧು ಸ್ವಾಗತಿಸಿದರು. ಭೀಮಯ್ಯ ನಿರೂಪಿಸಿದರು.