ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಣಕ್ಕೆ ಮುಂದಾದ ವಿದ್ಯಾರ್ಥಿ ತಂಡ
ಮೈಸೂರು

ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಣಕ್ಕೆ ಮುಂದಾದ ವಿದ್ಯಾರ್ಥಿ ತಂಡ

June 3, 2019

ಮೈಸೂರು: ಪರಿಸರಕ್ಕೆ ಮಾರಕ ವಾಗುವ ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಿಸಲು ವಿದ್ಯಾರ್ಥಿ ತಂಡವೊಂದು ವಿನೂತನ ಕಾರ್ಯಕ್ರಮ ರೂಪಿಸಿದೆ. `ಹಸ್ತಿ’ ಹೆಸರಿನಲ್ಲಿ ವಿದ್ಯಾರ್ಥಿಗಳ ತಂಡವೊಂದು ಸಂಘ ಟಿತವಾಗಿ ಮೈಸೂರಿನ ನಾಗರಿಕರಿಗೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‍ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ.

`ಹಸ್ತಿ’ ಎಂದರೆ ಸಂಸ್ಕೃತದಲ್ಲಿ ಹಸಿರು ಎಂಬ ಅರ್ಥ ವಿದ್ದು, ಈ ಹೆಸರಿನಲ್ಲಿ ಮೈಸೂರಿನ ಆರ್‍ಐಇ (ಪ್ರಾದೇಶಿಕ ಶಿಕ್ಷಣ ಸಂಸ್ಥೆ) ಆವರಣದ ಡಿಎಂಎಸ್ ಶಾಲೆಯ 12ನೇ ತರಗತಿ ವಿದ್ಯಾರ್ಥಿಗಳಾದ ಎಸ್.ತೇಜಸ್ವಿನಿ ಹಾಗೂ ಶಿವಶಂಕರ್ ಅಂಬೇಡ್ಕರ್ ಮುಂದಾಳತ್ವದಲ್ಲಿ 10ಕ್ಕೂ ಹೆಚ್ಚು ಮಂದಿಯ ತಂಡ ಮೈಸೂರು ನಗರದಲ್ಲಿ ಉಚಿತ ವಾಗಿ ಬಟ್ಟೆ ಬ್ಯಾಗ್‍ಗಳನ್ನು ವಿತರಿಸಲು ಯೋಜನೆ ರೂಪಿಸಿದೆ.

ಇದರ ಮೊದಲ ಕಾರ್ಯಕ್ರಮಕ್ಕೆ ಮೈಸೂರಿನ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆ ಬಳಿ ಭಾನುವಾರ ಚಾಲನೆ ನೀಡಲಾಯಿತು. ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್, ಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರು ಮಾರುಕಟ್ಟೆ ಬಂದಿದ್ದ ಗ್ರಾಹಕರಿಗೆ ಈ ಬಟ್ಟೆ ಬ್ಯಾಗ್‍ಗಳನ್ನು ವಿತರಣೆ ಮಾಡುವ ಮೂಲಕ ವಿದ್ಯಾರ್ಥಿ ತಂಡದ ಕಳಕಳಿಯ ಅಭಿಯಾನಕ್ಕೆ ಚಾಲನೆ ನೀಡಿದರು. ಮಾರುಕಟ್ಟೆ ಬಳಿ ಸ್ಟ್ಯಾಂಡ್‍ವೊಂದನ್ನು ಹಾಕಿದ್ದು, ಅದರಲ್ಲಿ ಬಟ್ಟೆ ಬ್ಯಾಗ್‍ಗಳನ್ನು ಹಾಕಲಾಗಿದೆ. ಬ್ಯಾಗ್‍ಗಳಿ ಲ್ಲದೇ ಮಾರುಕಟ್ಟೆಗೆ ಬಂದವರು ಪ್ಲಾಸ್ಟಿಕ್ ಬ್ಯಾಗ್ ಆಶ್ರಯಿ ಸದೇ ಈ ಬಟ್ಟೆ ಬ್ಯಾಗ್‍ಗಳನ್ನು ಉಚಿತ ವಾಗಿ ಬಳಸಿಕೊಳ್ಳ ಬಹುದು. ಬಳಕೆ ಮಾಡಿದ ಬಳಿಕ ಮತ್ತೆ ಅದೇ ಸ್ಟ್ಯಾಂಡ್‍ಗೆ ಬ್ಯಾಗ್‍ಗಳನ್ನು ಹಾಕಬಹುದು. ಇಂದಿನ ಕಾರ್ಯಕ್ರಮ ದಲ್ಲಿ 200 ಬ್ಯಾಗ್‍ಗಳನ್ನು ವಿತರಣೆ ಮಾಡಿದ್ದೇವೆ. 100 ಬ್ಯಾಗ್ ಗಳನ್ನು ಸ್ಟ್ಯಾಂಡಿನಲ್ಲಿ ಹಾಕಿದ್ದೇವೆ. ಪ್ರಾಯೋಜಕತ್ವದ ಮೂಲಕ ಬ್ಯಾಗ್‍ಗಳನ್ನು ಸಂಗ್ರಹಿಸಲಿದ್ದೇವೆ. ಇಂದು ವಿತರಿಸಿದ ಬ್ಯಾಗ್ ಗಳು ತಲಾ ಒಂದಕ್ಕೆ 15 ರೂ. ಬೆಲೆ ಇದ್ದು, ಇದನ್ನು ನಮಗೆ ಮಳಿಗೆಯೊಂದರ ಮಾಲೀಕರು ಕೇವಲ 5 ರೂ. ನೀಡಿ ದ್ದಾರೆ. ಮುಂದಿನ ದಿನಗಳಲ್ಲೂ ಪ್ರಾಯೋಜಕತ್ವದ ಮೂಲಕ ಬ್ಯಾಗ್‍ಗಳನ್ನು ಪೂರೈಸಲಿದ್ದೇವೆ. ಹಳೆ ಸೀರೆ ಬಳಸಿಕೊಂಡು ಬ್ಯಾಗ್‍ಗಳನ್ನು ಸಿದ್ಧಪಡಿಸಿ ವಿತರಿಸುವ ಉದ್ದೇಶಿತ ಯೋಜ ನೆಯೂ ನಮ್ಮ ಮುಂದಿದೆ ಎಂದು ವಿವರಿಸಿದರು.

Translate »