ಯುಪಿಎಸ್‍ಸಿ ಪರೀಕ್ಷೆಗೆ 3487 ಮಂದಿ ಹಾಜರು
ಮೈಸೂರು

ಯುಪಿಎಸ್‍ಸಿ ಪರೀಕ್ಷೆಗೆ 3487 ಮಂದಿ ಹಾಜರು

June 3, 2019

ಮೈಸೂರು: ಭಾನುವಾರ ನಡೆದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೈಸೂರಿನ 16 ಪರೀಕ್ಷಾ ಕೇಂದ್ರಗಳಲ್ಲಿ 3487 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.

ಯುಪಿಎಸ್‍ಸಿ ಸಂಸ್ಥೆಯು ಐಎಎಸ್, ಐಪಿಎಸ್, ಐಎಫ್‍ಎಸ್, ಐಆರ್‍ಎಸ್ ಸೇರಿ ದಂತೆ ಇನ್ನಿತರ ನಾಗರಿಕ ಸೇವಾ ಇಲಾಖೆ ಗಳಲ್ಲಿ ಖಾಲಿ ಇರುವ 896 ಹುದ್ದೆಗಳಿಗೆ ಮೈಸೂರು ಸೇರಿದಂತೆ ದೇಶದ 72 ನಗರ ಗಳಲ್ಲಿ ಇಂದು ಏಕಕಾಲಕ್ಕೆ ಪೂರ್ವಭಾವಿ ಪರೀಕ್ಷೆಯನ್ನು ಆಯೋಜಿಸಿತ್ತು. ಮೈಸೂರು ಜಿಲ್ಲೆಯಲ್ಲಿ 6238 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ನೋಂದಣಿ ಮಾಡಿಕೊಂಡಿದ್ದರು.

ಇದಕ್ಕಾಗಿ ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜು, ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಪದವಿ ಪೂರ್ವ ಕಾಲೇಜು, ಯುವರಾಜ ಕಾಲೇಜು, ಮರಿ ಮಲ್ಲಪ್ಪ ಶಿಕ್ಷಣ ಸಂಸ್ಥೆ, ಮಹಾರಾಣಿ ಪದವಿ ಪೂರ್ವ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜು, ಸೆಂಟ್ ಜೋಸೆಫ್ ಶಾಲೆ, ಡಿ. ಬನುಮಯ್ಯ ಕಾಲೇಜು, ಸೆಂಟ್ ಮೆಥಾ ಯಿಸ್ ಪ್ರೌಢಶಾಲೆ, ಕೇಂದ್ರೀಯ ವಿದ್ಯಾ ಲಯ, ಸೆಂಟ್ ಜೋಸೆಫ್ ಪ್ರೌಢಶಾಲೆ ಬನ್ನಿಮಂಟಪ ಸೇರಿದಂತೆ 16 ಪರೀಕ್ಷಾ ಕೇಂದ್ರಗಳನ್ನು ತೆರೆದು 200 ಮೀ. ವಿಸ್ತೀರ್ಣ ದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿತ್ತು.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪರೀಕ್ಷಾ ಕೇಂದ್ರದ ಬಳಿ ಜೆರಾಕ್ಸ್ ಸೆಂಟರ್ ತೆರೆ ಯುವುದನ್ನು ನಿರ್ಬಂಧಿಸಲಾಗಿತ್ತು.

ಇಂದು 2 ಪತ್ರಿಕೆಗಳ ಪರೀಕ್ಷೆ ಜರು ಗಿತು. ಬೆಳಿಗ್ಗೆ 9.30ರಿಂದ 11.30ರವರೆಗೆ ಮೊದಲ ಪೇಪರ್ (ಸಾಮಾನ್ಯ) ಪರೀಕ್ಷೆ ನಡೆಯಿತು. ಇದರಲ್ಲಿ 2751 ವಿದ್ಯಾರ್ಥಿ ಗಳು ಗೈರು ಹಾಜರಾದರೆ, 3487 ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾಗಿದ್ದರು. ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆದ 2ನೇ ಪೇಪರ್ (ವಿಷಯಾಧಾರಿತ) ಪರೀಕ್ಷೆಯಲ್ಲಿ 3414 ವಿದ್ಯಾರ್ಥಿಗಳು ಹಾಜರಾದರೆ, 2824 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು 16 ಪರೀಕ್ಷಾ ಕೇಂದ್ರಗಳನ್ನು ಮೂರು ರೂಟ್‍ಗಳಾಗಿ ವಿಂಗಡಿಸ ಲಾಗಿತ್ತು. ಪ್ರತೀ ಒಂದು ಪರೀಕ್ಷಾ ಕೇಂದ್ರ ಗಳಿಗೂ ತಲಾ ಒಬ್ಬೊಬ್ಬರು ವೀಕ್ಷಕರನ್ನು ನಿಯೋಜಿಸಲಾಗಿತ್ತು. ಯುಪಿಎಸ್‍ಸಿ ಯಿಂದ ವೀಕ್ಷಕರಾಗಿ ಸುಶೀಲ್ ಕುಮಾರ್ ಎಂಬುವರು ಆಗಮಿಸಿದ್ದರು. ಪರೀಕ್ಷಾ ಉಸ್ತು ವಾರಿಯನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ನೋಡಿಕೊಂಡರೆ, ನೋಡಲ್ ಅಧಿಕಾರಿಯಾಗಿ ಕಾಲೇಜು ಶಿಕ್ಣಣ ಇಲಾಖೆ ಜಂಟಿ ನಿರ್ದೇಶಕ ಆರ್. ಮುಗೇಶಪ್ಪ ಕರ್ತವ್ಯ ನಿರ್ವಹಿಸಿದರು.

Translate »