ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ಮಿಂಚಿದ ಮಹಿಳಾ ಮಣಿಯರು
ಮೈಸೂರು

ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ಮಿಂಚಿದ ಮಹಿಳಾ ಮಣಿಯರು

June 3, 2019

ಮೈಸೂರು: ಮೈಸೂರಿನ ಜೆ.ಪಿ.ನಗರದ ಅಭ್ಯುದಯ ಮಹಿಳಾ ಸಮಾಜವು ಭಾನುವಾರ ಆಯೋ ಜಿಸಿದ್ದ ಚಾಮುಂಡಿಬೆಟ್ಟ ಮೆಟ್ಟಿಲು ಹತ್ತುವ ಸ್ಪರ್ಧೆಯಲ್ಲಿ ಹಲವಾರು ಮಹಿಳೆಯರು ಪಾಲ್ಗೊಂ ಡಿದ್ದಾರಾದರೂ, ಯುವತಿಯರ ವಿಭಾಗದಲ್ಲಿ ಓಟಗಾರ್ತಿ ತಿಪ್ಪವ್ವ ಸಣ್ಣಕ್ಕಿ 13 ನಿಮಿಷ ಹಾಗೂ ಹಿರಿಯರ ವಿಭಾಗದ ಸ್ಪರ್ಧೆ ಯಲ್ಲಿ ಗೃಹಿಣಿ ಸೌಮ್ಯ 17 ನಿಮಿಷದಲ್ಲಿ ಬೆಟ್ಟ ಹತ್ತುವ ಮೂಲಕ ಗಮನ ಸೆಳೆದರು.

ಅಭ್ಯುದಯ ಮಹಿಳಾ ಸಮಾಜ 25ನೇ ವಾರ್ಷಿಕೋತ್ಸವದ(ಬೆಳ್ಳಿ ಹಬ್ಬ) ಹಿನ್ನೆಲೆ ಯಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಚಾಮುಂಡಿಬೆಟ್ಟದ ಮೆಟ್ಟಲು ಹತ್ತುವ ಸ್ಪರ್ಧೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. 20-30 ವರ್ಷ ಹಾಗೂ 31ರಿಂದ 41 ವರ್ಷ ದೊಳಗೆ 2 ವಿಭಾಗದಲ್ಲಿ ಸ್ಪರ್ಧೆ ನಡೆಸ ಲಾಯಿತು. 20-30 ವರ್ಷದೊಳಗಿನವರ ವಿಭಾಗದಲ್ಲಿ 13 ನಿಮಿಷದಲ್ಲಿಯೇ ಬೆಟ್ಟದ 1008 ಮೆಟ್ಟಿಲುಗಳನ್ನು ಹತ್ತಿದ ಓಟಗಾರ್ತಿ ತಿಪ್ಪವ್ವ ಸಣ್ಣಕ್ಕಿ ಮೊದಲ ಬಹುಮಾನ ಪಡೆ ದರೆ, ಅರ್ಚನಾ ದ್ವಿತೀಯ, ದಿವ್ಯ ತೃತೀಯ, ರನಿತಾ ಮತ್ತು ತೇಜಸ್ವಿನಿ 4 ಮತ್ತು 5ನೇ ಸ್ಥಾನ ಪಡೆದುಕೊಂಡರು. 31-41 ವರ್ಷದ ವಿಭಾಗದಲ್ಲಿ 17 ನಿಮಿಷದಲ್ಲೇ ಗೃಹಿಣಿ ಸೌಮ್ಯ ಬೆಟ್ಟವನ್ನೇರಿ ಪ್ರಥಮ ಸ್ಥಾನ ಪಡೆದು ಕೊಂಡರೆ, ವಿದ್ಯಾ ದ್ವಿತೀಯ, ಆಶಾ ನಾಗ ರಾಜು ತೃತೀಯ, ಪ್ರತಿಮಾ, ದೀಪಿಕಾ 4 ಮತ್ತು 5ನೇ ಸ್ಥಾನ ಪಡೆದು ಗಮನ ಸೆಳೆದರು. ಎರಡೂ ವಿಭಾಗದಲ್ಲೂ ಪ್ರಥಮ ಬಹುಮಾನಕ್ಕೆ 3 ಸಾವಿರ ರೂ ನಗದು, 2ನೇ ಸ್ಥಾನಕ್ಕೆ 2 ಸಾವಿರ, 3ನೇ ಸ್ಥಾನಕ್ಕೆ 1 ಸಾವಿರ, 4 ಮತ್ತು 5ನೇ ಸ್ಥಾನ ಪಡೆದವ ರಿಗೆ ತಲಾ ಐನೂರು ರೂಪಾಯಿ ಬಹು ಮಾನವಾಗಿ ನೀಡಲಾಯಿತು.

ಬೆಟ್ಟ ಹತ್ತಿದ ಅಭ್ಯುದಯ ಮಹಿಳಾ ಸಮಾಜ ಸದಸ್ಯರಾದ ಮಂಜುಳಾ ಪ್ರಥಮ, ಲತಾ ಜಗದೀಶ್ ದ್ವಿತೀಯ ಹಾಗೂ ಪುಷ್ಪಾ ಲತಾ ತೃತೀಯ ಸ್ಥಾನ ಪಡೆದುಕೊಂಡರು, ಇವರಿಗೆ ಶಾಸಕ ಎಸ್.ಎ.ರಾಮದಾಸ್ ನೇತೃತ್ವದ ಆಸರೆ ಸಂಸ್ಥೆಯಿಂದ ಎರಡು ಸಾವಿರ, 1 ಸಾವಿರ, ಐನೂರು ರೂಗಳನ್ನು ಕ್ರಮವಾಗಿ ವಿತರಿಸಲಾಯಿತು. ಅಲ್ಲದೆ ಮಂದಗತಿಯಲ್ಲಿ ಬೆಟ್ಟ ಹತ್ತಿದ 55 ವರ್ಷ ಮೇಲ್ಪಟ್ಟ ಲೀಲಾ ವಿಶ್ವನಾಥ್ ಹಾಗೂ ಚೆನ್ನಮ್ಮ ಅವರಿಗೂ 500 ರೂ. ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಇದಕ್ಕೂ ಮುನ್ನ ಬೆಟ್ಟ ಹತ್ತುವ ಸ್ಪರ್ಧೆಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಜೆ.ಪಿ.ನಗರದಲ್ಲಿರುವ ಮಹಿಳಾ ಸಂಘವು ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿ ಕೊಂಡಿದೆ. ಬೆಳ್ಳಿ ಹಬ್ಬ ಆಚರಣೆ ಮಾಡು ತ್ತಿರುವುದು ಸಂತೋಷದ ಸಂಗತಿ. ಈ ನಿಟ್ಟಿನಲ್ಲಿ ಇನ್ನುಷ್ಟು ಸಾಮಾಜಿಕ ಕಾರ್ಯ ಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿ ದರು. ಈ ಸಂದರ್ಭದಲ್ಲಿ ಅಭ್ಯುದಯ ಮಹಿಳಾ ಸಮಾಜದ ಅಧ್ಯಕ್ಷೆ ಸುಶೀಲ್ ನಾಗರಾಜು, ಕಾರ್ಯದರ್ಶಿ ಶೈಲಜಾ ಮಹಾದೇವ, ಗೌರವಾಧ್ಯಕ್ಷೆ ಲೋಕೇಶ್ವರಿ ಬಳ್ಳಯ್ಯ ಸೇರಿದಂತೆ ಮತ್ತಿತರರಿದ್ದರು.

Translate »