ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧ

April 6, 2021

ಮೈಸೂರು,ಏ.5(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರನ್ನು ಮತ್ತಷ್ಟು ಸುಂದರಗೊಳಿಸುವುದರೊಂದಿಗೆ ಪರಿಸರ ಮಾಲಿನ್ಯ ತಡೆ ಗಟ್ಟುವ ನಿಟ್ಟಿನಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆ ನಿಷೇ ಧಿಸಲಾಗಿದ್ದು, ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಸೇರಿ ದಂತೆ ಪರಿಸರಕ್ಕೆ ಮಾರಕ ವಾದ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮೈಸೂರು ನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯಾದ್ಯಂತ ಏ.5ರಿಂದ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆ ನಿಷೇಧಿಸಿ, ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪರ್ಯಾಯವಾಗಿ ಜಿಲ್ಲೆಯ 8 ಲಕ್ಷ ಮನೆಗಳಿಗೆ ತಲಾ ಎರಡರಂತೆ 16 ಲಕ್ಷ ಬಟ್ಟೆ ಬ್ಯಾಗ್ ವಿತರಣೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ ಸಂಜೀ ವಿನಿ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಕಾರ್ಯಕರ್ತೆ ಯರು ಬಟ್ಟೆ ಬ್ಯಾಗ್ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಪ್ರತಿದಿನ 40 ಸಾವಿರ ಬ್ಯಾಗ್‍ಗಳ ತಯಾರಾಗುತ್ತಿದ್ದು, ಒಂದು ವಾರದಲ್ಲಿ ಮೈಸೂರು ನಗರದಲ್ಲಿ ಮನೆ ಮನೆಗೆ ಉಚಿತವಾಗಿ ಬಟ್ಟೆ ಬ್ಯಾಗ್ ವಿತರಿಸಲಾಗುತ್ತದೆ. ಮುಂದಿನ 45 ದಿನದಲ್ಲಿ ಜಿಲ್ಲೆ ಯಲ್ಲಿರುವ 8 ಲಕ್ಷ ಮನೆಗಳಿಗೂ 5 ಮತ್ತು 10 ಕೆಜಿ ಸಾಮಥ್ರ್ಯದ ಬಟ್ಟೆ ಬ್ಯಾಗ್ ವಿತರಿಸಲಾಗುತ್ತದೆ. ಆದರೆ ಅಂಗಡಿ, ಮಳಿಗೆಗಳಲ್ಲಿ ಪ್ಲಾಸ್ಟಿಕ್ ಕವರ್ ಸೇರಿದಂತೆ ಇನ್ನಿತರ ಪ್ಲಾಸ್ಟಿಕ್ ವಸ್ತು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇಂದಿನಿಂದಲೇ ಪ್ಲಾಸ್ಟಿಕ್ ನಿಷೇಧ ನಿಯಮ ಜಾರಿಗೆ ಬಂದಿದೆ ಯಾದರೂ ಇಂದು ಪ್ಲಾಸ್ಟಿಕ್ ವಿರುದ್ದ ಯಾವುದೇ ಕಾರ್ಯಾಚರಣೆ ನಡೆಸಲಿಲ್ಲ. ಪಾಲಿಕೆ ಸಿಬ್ಬಂದಿಗೆ ಕಡ್ಡಾಯ ಕೋವಿಡ್ ಪರೀಕ್ಷೆಗೆ ಸೂಚನೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೋವಿಡ್-19 ನಿಯಂತ್ರಣ ಹಾಗೂ ಲಸಿಕೆ ಹಾಕುವ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪರಿಣಾಮ ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧ ಸಂಬಂಧ ಮುಂದಿನ ಕ್ರಮದ ವಿಷಯವೇ ಪ್ರಸ್ತಾಪವಾಗಲಿಲ್ಲ. ಆದರೆ ಇಂದು ಬೆಳಿಗ್ಗೆ ದೇವರಾಜ ಮಾರುಕಟ್ಟೆ, ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಸಂತೇಪೇಟೆ, ಶಿವರಾಂಪೇಟೆ ಸೇರಿದಂತೆ ಇನ್ನಿತರೆಡೆಗಳಲ್ಲಿ ಪಾಲಿಕೆ ಆರೋಗ್ಯ ಮತ್ತು ಪರಿಸರ ಅಭಿಯಂತರ ನೇತೃತ್ವದ ತಂಡ ಅಂಗಡಿಗಳ ಮಾಲೀಕರು ಹಾಗೂ ವ್ಯಾಪಾರಿ ಗಳಿಗೆ ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧದ ಬಗ್ಗೆ ಅರಿವು ಮೂಡಿಸಿದರು.

ಇನ್ನೆರಡು ದಿನದಲ್ಲಿ ಮೈಸೂರಲ್ಲಿ ಪ್ಲಾಸ್ಟಿಕ್ ಬ್ಯಾಗ್, ಕವರ್ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರೂಪುರೇಷೆ ಸಿದ್ಧ ಪಡಿಸಲಾಗಿದೆ. ಈಗಾಗಲೇ ಕೆಲವು ವ್ಯಾಪಾರಿಗಳು ಮನೆ, ಸೆಲ್ಲರ್ ಮತ್ತು ಗೋದಾಮಿನಲ್ಲಿ ಪ್ಲಾಸ್ಟಿಕ್ ದಾಸ್ತಾನು ಮಾಡಿರುವ ಮಾಹಿತಿ ಕಲೆ ಹಾಕಿದ್ದಾರೆ. ಸಂಗ್ರಹಿಸಿರುವ ಅಪಾಯಕಾರಿ ಪ್ಲಾಸ್ಟಿಕ್ ವಸ್ತುಗಳನ್ನು ಸ್ವಯಂಪ್ರೇರಣೆಯಿಂದ ಪಾಲಿಕೆ ವಶಕ್ಕೆ ನೀಡಲು ಅವಕಾಶ ಕಲ್ಪಿಸಲು ಪಾಲಿಕೆ ಅಧಿಕಾರಿಗಳು ಉದ್ದೇಶಿಸಿದ್ದಾರೆ. ನೀಡಿದ ಕಾಲಾವಕಾಶದಲ್ಲಿ ವ್ಯಾಪಾರಿಗಳು ತಮ್ಮ ಬಳಿ ಇರುವ ಪ್ಲಾಸ್ಟಿಕ್ ನೀಡದೆ ಬಳಕೆಗೆ ಮುಂದಾ ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ, ಟ್ರೇಡ್ ಲೈಸನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Translate »