ಪ್ಲಾಸ್ಟಿಕ್ ಕೈ ಚೀಲಗಳ ನಿಷೇಧಕ್ಕೆ ಆಗ್ರಹ
ಮಂಡ್ಯ

ಪ್ಲಾಸ್ಟಿಕ್ ಕೈ ಚೀಲಗಳ ನಿಷೇಧಕ್ಕೆ ಆಗ್ರಹ

June 27, 2018

ಮಂಡ್ಯ:  ಮಹಾರಾಷ್ಟ್ರ ಮಾದರಿ ಯಲ್ಲಿ ಪ್ಲಾಸ್ಟಿಕ್ ಕೈ ಚೀಲಗಳನ್ನು ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಿ ವಕೀಲರು ಜಿಲ್ಲಾಧಿಕಾರಿ ಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅಖಿಲ ಭಾರತ ವಕೀಲರ ಸಂಘದ ಮಂಡ್ಯ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಟಿ.ವಿಶ್ವನಾಥ್ ಮತ್ತು ಪದಾಧಿಕಾರಿಗಳು ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಮನವಿ ನೀಡಿ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗಿದ್ದು, ಪರಿಸರ ಮತ್ತು ಜೀವ ಸಂಕುಲಗಳಿಗೆ ಅತ್ಯಂತ ಕೆಟ್ಟ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಅನ್ನು ನಿಷೇಧಿಸ ಬೇಕೆಂದು ಒತ್ತಾಯಿಸಿದರು.

ಮಹಾರಾಷ್ಟ್ರ ಸರ್ಕಾರವು ಪ್ಲಾಸ್ಟಿಕ್ ಕೈ ಚೀಲಗಳ ಉತ್ಪಾದನೆ, ಬಳಕೆ, ಸಂಗ್ರಹ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ರುವುದು ಸೂಕ್ತ ಕ್ರಮವಾಗಿದೆ. ರಾಜ್ಯಾದ್ಯಾಂತ ಸದರಿ ಪ್ಲಾಸ್ಟಿಕ್ ಕೈ ಚೀಲಗಳ ಬಳಕೆ ಮಾಡಿದ ಸಂದರ್ಭದಲ್ಲಿ ಮೊದಲನೇ ಅಪರಾಧಕ್ಕೆ 5ಸಾವಿರ ರೂ. ದಂಡ, 2ನೇ ಅಪರಾಧಕ್ಕೆ 10 ಸಾವಿರ ರೂ. ದಂಡ, 3ನೇ ಬಾರಿ ಅಪ ರಾಧಕ್ಕೆ 25 ಸಾವಿರ ರೂ. ದಂಡ ಮತ್ತು 3 ತಿಂಗಳ ಜೈಲುವಾಸವನ್ನು ನೀಡಬಹುದಾದ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದ್ದು, ಕರ್ನಾಟಕ ರಾಜ್ಯ ಸರ್ಕಾರವೂ ಇಂತಹ ಕಾನೂನುನ್ನು ಜಾರಿಗೆ ತಂದರೂ ಪರಿಣಾಮ ಕಾರಿಯಾಗಿ ಜಾರಿಯಾಗಿಲ್ಲ ಎಂದು ತಿಳಿಸಿದರು.
ಕರ್ನಾಟಕ ಪರಿಸರ ಮತ್ತು ಜೈವಿಕ ಚಕ್ರದ ಸಂರಕ್ಷಣೆಯ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಕೈ ಚೀಲಗಳ ಉತ್ಪಾದನೆ, ಮಾರಾಟ, ಸಂಗ್ರಹ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಲು ಆಗ್ರಹಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Translate »