ಶ್ರೀಸಣ್ಣಕ್ಕಿರಾಯಸ್ವಾಮಿ ಕುಂಭಾಭಿಷೇಕ
ಮಂಡ್ಯ

ಶ್ರೀಸಣ್ಣಕ್ಕಿರಾಯಸ್ವಾಮಿ ಕುಂಭಾಭಿಷೇಕ

June 27, 2018

ಭಾರತೀನಗರ: ಇಲ್ಲಿನ ದೊಡ್ಡ ರಸಿನಕೆರೆ ಶ್ರೀಸಣ್ಣಕ್ಕಿರಾಯಸ್ವಾಮಿ ದೇವಾ ಲಯದ 5ನೇ ವರ್ಷದ ಕುಂಭಾಭಿಷೇಕ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಬೆಂಗಳೂರಿನ ರಾಜಶೇಖರ್ ದೀಕ್ಷಿತ್ ಹಾಗೂ ರಘು ಶರ್ಮಾ ಅವರ ನೇತೃತ್ವ ದಲ್ಲಿ ಬೆಳಿಗ್ಗೆ 7 ಗಂಟೆಗೆ ವೇದಿಕಾರ್ಚನೆ, ಮೂಲದೇವರಿಗೆ ಉಪಚಾರ ಪೂಜೆ, ಪಂಚಾ ಮೃತ ಅಭಿಷೇಕ, ರುದ್ರಾಭಿಷೇಕ, ಶ್ರೀಗಣ ಹೋಮ, ಶ್ರೀರುದ್ರಹೋಮ, ಮಹಾ ಪೂರ್ಣಾಹುತಿ ಜರುಗಿತು. ಶ್ರೀಸಣ್ಣಕ್ಕಿರಾಯ ಬಸವನನ್ನು ಹೂವಿ ನಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ರಾತ್ರಿವರೆಗೂ ಭಕ್ತಾದಿಗಳು ಸ್ವಾಮಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ನೂತನವಾಗಿ ನಿರ್ಮಿಸಿರುವ ಪ್ರಸಾದದ ಕೊಠಡಿ ಹಾಗೂ ಉಗ್ರಾಣ ಕೊಠಡಿಯೂ ಉದ್ಘಾಟಿಸಲಾಯಿತು. ಸುಮಾರು 5 ಸಾವಿರ ಕ್ಕೂ ಹೆಚ್ಚು ಭಕ್ತಾದಿ ಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Translate »