ಸಿಎಂ ಹೆಚ್‍ಡಿಕೆಯಿಂದ ಜನಪರ ಬಜೆಟ್ ಮಂಡನೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಸಿಎಂ ಹೆಚ್‍ಡಿಕೆಯಿಂದ ಜನಪರ ಬಜೆಟ್ ಮಂಡನೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

June 27, 2018

ಮೇಲುಕೋಟೆ:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೂರ್ಣ ಪ್ರಮಾಣದ ಜನಪರ ಬಜೆಟ್ ಮಂಡಿಸುವುದು 100ಕ್ಕೆ 200ರಷ್ಟು ಖಚಿತ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳವಾರ ಮೇಲುಕೋಟೆ ಶ್ರೀಚೆಲುವ ನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಮಾಧ್ಯಮಗಳು ಈ ಬಗ್ಗೆ ಗೊಂದಲ ಸೃಷ್ಠಿಸಿವೆ ಎಂದ ಸಚಿವರು, ಬಜೆಟ್‍ನಲ್ಲಿ ರೈತರ ಸಾಲಮನ್ನಾ ಘೋಷಣೆಯಾಗಲಿದೆ. ಪಕ್ಷ ಹಿಂದೆ ವಾಗ್ದಾನ ಮಾಡಿದಂತೆ ರೈತಪರ ಮತ್ತು ಜನಪರ ಕೆಲಸಗಳನ್ನು ಮಾಡಲಿದೆ. ಕೇಂದ್ರ ಸರ್ಕಾರ ನೇಮಿಸಿದ ಕಾವೇರಿ ನಿರ್ವಾ ಹಣಾ ಮಂಡಳಿಗೆ ಕರ್ನಾಟಕದ ವತಿಯಿಂದ ಇಬ್ಬರು ಸದಸ್ಯರನ್ನು ನೇಮಕ ಮಾಡ ಲಾಗಿದೆ. ಕಾವೇರಿ ನೀರು ಹಂಚಿಕೆ ನಿರ್ವಹಣೆ ಯಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯ ಆಗದಂತೆ ಸಮ್ಮಿಶ್ರ ಸರ್ಕಾರ ನಿಗಾ ವಹಿಸಲಿದ್ದು, ಈ ಭಾಗದ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 2 ಬಾರಿ ಭೇಟಿಯಾದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮತ್ತು ಸರ್ಕಾರಕ್ಕೆ ಸಹಕಾರ ನೀಡುವ ಸಂಬಂಧ ಪ್ರಧಾನಿ ಮೋದಿ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಇದಕ್ಕೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ. ಮಾಜಿ ಪ್ರದಾನಿ ದೇವೇಗೌಡರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಪಾರ ಗೌರವ ಹೊಂದಿದ್ದಾರೆ. ರೈತಪರ ಕಾಳಜಿಯಿಂದ ಕೇಳುವ ಭೇಟಿಗೆ ತಕ್ಷಣ ಅವಕಾಶ ದೊರೆಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದರು.

ಪೂರ್ಣಕುಂಭ ಸ್ವಾಗತ: ಚೆಲುವನಾರಾ ಯಣಸ್ವಾಮಿ ದೇವಾಲಯಕ್ಕೆ ಆಗಮಿಸಿದ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಸಾಂಪ್ರದಾಯದಂತೆ ದೇವಾಲಯದ ವತಿ ಯಿಂದ ಪೂರ್ಣಕುಂಭ ಸ್ವಾಗತ ನೀಡಲಾ ಯಿತು. ದೇವಾಲಯದ ಇಓ ನಂಜೇಗೌಡ, ಆಡಳಿತಾಧಿಕಾರಿ ಎಸಿ ಯಶೋದ, ತಹಶೀ ಲ್ದಾರ್ ಹನುಮಂತರಾಯಪ್ಪ ಹಾಗೂ ದೇವಾಲಯದ ಸ್ಥಾನೀಕರು ಮತ್ತು ಅರ್ಚಕರು ಹಾಜರಿದ್ದು ಬರಮಾಡಿ ಕೊಂಡರು.

ವಿದ್ವಾನ್ ಆನಂದಾಳ್ವಾರ್ ನೇತೃತ್ವದಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ಯೊಂದಿಗೆ ಸಚಿವ ಸಿ.ಎಸ್.ಪುಟ್ಟರಾಜುರನ್ನು ದೇವಾಲಯಕ್ಕೆ ಕರೆತರಲಾಯಿತು. ಈ ವೇಳೆ ಕಾಡೇನಹಳ್ಳಿ ರಾಮಚಂದ್ರು, ಎಸ್‍ಇಟಿ ಸಮೂಹ ಸಂಸ್ಥೆಯ ಅಧ್ಯಕ್ಷ ಶಿವನಂಜೇಗೌಡ, ಗ್ರಾಪಂ ಅಧ್ಯಕ್ಷ ನಾರಾಯಣಭಟ್, ಸದಸ್ಯ ಅವ್ವ ಗಂಗಾ ಧರ್, ಮುಖಂಡರಾದ ಬಾಲಕೃಷ್ಣ, ಎಂ.ಬಿ. ಶ್ರೀನಿವಾಸ್, ಪುಟ್ಟಣ್ಣ, ಚಂದ್ರು, ಆನಂದ್, ಶಶಿಕುಮಾರ್ ಮತ್ತಿತರರು ಭಾಗವಹಿಸಿ ದ್ದರು. ಗ್ರಾಪಂ, ಸಂಸ್ಕøತ ಸಂಶೋಧನಾ ಸಂಸ್ಥೆ, ಗುರುಶನೇಶ್ವರ ದೇವಸ್ಥಾನಗಳಲ್ಲಿ ಅಭಿನಂದಸಲಾಯಿತು.

ಮೇಲುಕೋಟೆ ಅಭಿವೃದ್ಧಿಗೆ ಪ್ರಾಧಿಕಾರ ರಚನೆ

ಪ್ರಖ್ಯಾತ ಶ್ರೀವೈಷ್ಣವ ಕ್ಷೇತ್ರವಾದ ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲಾಗುತ್ತದೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಚೆಲುವನಾರಾಯಣನ ಕ್ಷೇತ್ರವನ್ನು ಭಕ್ತ ಸ್ನೇಹಿಯಾಗಿ ವಿಶ್ವಪ್ರಸಿದ್ಧ ಸುಸಜ್ಜಿತ ಪ್ರವಾಸಿ ತಾಣವನ್ನಾಗಿ ರೂಪಿಸಲು ಯೋಜನೆ ರೂಪಿಸಲಾಗಿದ್ದು ಕಾಮಗಾರಿ ಶೀಘ್ರ ಕಾರ್ಯಾರಂಭವಾಗಲಿದೆ. ಇದರ ಜೊತೆಗೆ ಕೆರೆ ತೊಣ್ಣೂರನ್ನೂ ಅಭಿವೃದ್ಧಿ ಪಡಿಸಲಾಗುತ್ತದೆ. ಮೇಲು ಕೋಟೆಯ ಪಂಚಕಲ್ಯಾಣ ಹಾಗೂ ಎಲ್ಲಾ ಕೊಳ ಗಳನ್ನು ಸಣ್ಣ ನೀರಾವರಿ ಇಲಾಖೆಯಿಂದ ಜೀರ್ಣೋದ್ಧಾರ ಮಾಡಲಾಗುತ್ತದೆ. ಬಳಿ ಘಟ್ಟ ಮತ್ತು ಜಕ್ಕನಹಳ್ಳಿ ಗ್ರಾಪಂ ರೈತರ ಅನುಕೂಲಕ್ಕಾಗಿ 25 ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆ ಅನುಷ್ಠಾನಗೊಳಿಸ ಲಾಗುತ್ತದೆ. ಇದೇ ವೇಳೆ ಹೊಸಕೆರೆಯ ಸಂಗ್ರಹ ಸಾಮುಥ್ರ್ಯ ಹೆಚ್ಚಿಸಿ ಪ್ರವಾಸಿ ತಾಣವಾಗಿ ಪರಿವರ್ತಿಸಲಾಗುತ್ತದೆ ಎಂದರು.

Translate »