ಮೃತ ಶಿವಣ್ಣ ಕುಟುಂಬಕ್ಕೆ ಸಚಿವರಿಂದ ಸಾಂತ್ವನ
ಮಂಡ್ಯ

ಮೃತ ಶಿವಣ್ಣ ಕುಟುಂಬಕ್ಕೆ ಸಚಿವರಿಂದ ಸಾಂತ್ವನ

June 27, 2018

ಪಾಂಡವಪುರ: ಇತ್ತೀಚೆಗೆ ಮೃತಪಟ್ಟ ತಾಲೂಕಿನ ಸಣಬ ಗ್ರಾಮದ ಜೆಡಿಎಸ್ ಮುಖಂಡ ಶಿವಣ್ಣ ಅವರ ಮನೆಗೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಮೃತರ ಪತ್ನಿ ಜಯ ಲಕ್ಷ್ಮಿ ಹಾಗೂ ಕುಟುಂಬದವರಿಗೆ ಸಾಂತ್ವ್ವನ ಹೇಳಿದರು.

ನಂತರ ಮಾತನಾಡಿದ ಅವರು, ಶಿವಣ್ಣ ನವರ ಅಕಾಲಿಕ ಮರಣ ನನಗೆ ವೈಯುಕ್ತಿಕ ವಾಗಿ ನೋವುಂಟು ಮಾಡಿದೆ. ಶಿವಣ್ಣ ನಮ್ಮ ಪಕ್ಷದ ಮುಖಂಡ ಎನ್ನುವುದಕ್ಕಿಂತ ನಮ್ಮ ಮನೆಯ ಮಗನಂತಿದ್ದರು. ಸದಾ ನಮ್ಮ ಕುಟುಂಬದೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿದ್ದ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಶಿವಣ್ಣ ಅವರು ಅಪಘಾತದಲ್ಲಿ ಮೃತಪಟ್ಟ ವಿಷಯ ಕೇಳುತ್ತಿದ್ದಂತೆಯೇ ನನ್ನ ಮನಸ್ಸಿಗೆ ಅತೀವ ನೋವುಂಟಾಯಿತು. ಆದರೆ ನನಗೆ ಮುಖ್ಯಮಂತ್ರಿಗಳ ಜೊತೆ ತುರ್ತು ಸಭೆ ಇದ್ದ ಕಾರಣ ಅವರ ಅಂತ್ಯಕ್ರಿಯೆಗೆ ಬರಲು ಸಾಧ್ಯವಾಗಲಿಲ್ಲ ಎಂದರು.

ಮೃತ ಶಿವಣ್ಣನವರ ಕುಟುಂಬಕ್ಕೆ ನಾವು ಆಸರೆಯಾಗಿದ್ದು, ಅವರ ಮಕ್ಕಳಾದ ಶಿವಶ್ರೀ ಮತ್ತು ಶಿವಂತ್ ಅವರ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊತ್ತು ಕೊಂಡು ಅವರು ಎಲ್ಲಿವರೆಗೆ ಓದುತ್ತಾರೋ ಅಲ್ಲಿವರೆಗೆ ವಿದ್ಯಾಭ್ಯಾಸ ಮಾಡಿಸುವ ಜವಾಬ್ದಾರಿ ನಮ್ಮದು, ನಿಮ್ಮ ಕುಟುಂಬದೊಂದಿಗೆ ಸದಾ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಈ ಸಂದರ್ಭ ಜೆಡಿಎಸ್ ಎಸ್‍ಸಿ/ಎಸ್‍ಟಿ ಘಟಕದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಶ್ರೀನಿವಾಸ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮ ಕೃಷ್ಣೇಗೌಡ(ಆರ್‍ಕೆ), ತಾಲೂಕು ಅಧ್ಯಕ್ಷ ಬೊಮ್ಮರಾಜು, ಯೋಗೇಶ್, ಜೆಡಿಎಸ್ ಮುಖಂಡ ಚನ್ನಕೃಷ್ಣ, ಬಲರಾಮು, ನಾಗಣ್ಣ, ಎಲ್.ಐ.ಸಿ.ಕಾಂತರಾಜು, ಕುಮಾರ ಸೇರಿದಂತೆ ಹಲವರಿದ್ದರು.

Translate »