ಹಿಂದೂ ಧರ್ಮದ ಉಳಿವಿಗಾಗಿ ಜಾಗೃತರಾಗಿ
ಮಂಡ್ಯ

ಹಿಂದೂ ಧರ್ಮದ ಉಳಿವಿಗಾಗಿ ಜಾಗೃತರಾಗಿ

June 27, 2018

ಮಳವಳ್ಳಿ; ಹಿಂದೂ ಧರ್ಮದ ಏಕತೆ ಮತ್ತು ಉಳಿವಿಗಾಗಿ ನಾವು ಜಾಗೃತರಾಗಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಬಸವರಾಜು ತಿಳಿಸಿದರು.

ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನ ದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಹಿಂದೂಗಳ ಮೇಲಾಗು ತ್ತಿರುವ ಅಕ್ರಮಣಗಳನ್ನು ತಡೆಗಟ್ಟುವುದು ಸೇರಿದಂತೆ ಧರ್ಮದ ಪಾವಿತ್ರ್ಯತೆಗಾಗಿ ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದು ಹಿಂದೂ ಧರ್ಮದ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಹಿಂದೂ ಧರ್ಮದ ರಕ್ಷಣೆಯೇ ನಮ್ಮ ಗುರಿ. ಧರ್ಮವನ್ನು ಹೊಡೆಯುವ, ಹೀನಾಯ ವಾಗಿ ಕಾಣುವ, ದೌರ್ಜನ್ಯ ನಡೆಸುವವರ ವಿರುದ್ಧ ಹೋರಾಡುವ ಅನಿವಾರ್ಯತೆ ಇದೆ. ಈ ದಿಸೆÉಯಲ್ಲಿ ಹಿಂದೂಗಳನ್ನು ಜಾಗೃತರನ್ನಾಗಿಸುವುದು ನಮ್ಮ ಉದ್ದೇಶ ಎಂದರು.

ಸಭೆಯಲ್ಲಿ ಹಾಜರಿದ್ದ ಹಿತ ಚಿಂತಕರ ನಿರ್ಣಯದಂತೆ ಜು.29ರಂದು ವಿಶೇಷ ಗೋ ಪೂಜೆ ಹಮ್ಮಿಕೊಂಡು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಸಮಿತಿಗೆ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿ.ಎನ್.ನಾಗೇಶ್ ಅವರನ್ನು ಅಧ್ಯಕ್ಷರಾಗಿ ಹಾಗೂ ಎಂ.ಎಸ್.ಶ್ರೀಕಂಠಸ್ವಾಮಿ ಅವರನ್ನು ಕಾರ್ಯದರ್ಶಿಯನ್ನಾಗಿ ಹಾಗೂ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ವಿ.ಎನ್. ನಾಗೇಶ್ ಮಾತನಾಡಿ, ದೇಶಪ್ರೇಮ ಎನ್ನುವುದು ಪ್ರತಿಯೊಬ್ಬ ಭಾರತೀಯನ ರಕ್ತದ ಕಣದಲ್ಲೂ ಇದೆ. ವಿಶ್ವ ಹಿಂದೂ ಪರಿಷತ್ ವತಿಯಿಂದ ಹಿಂದೂ ಧರ್ಮಿಯರನ್ನು ಜಾಗೃತಗೊಳಿಸುವ ಕೆಲಸ 90 ವರ್ಷ ದಿಂದ ನಿರಂತರವಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಚಾಮರಾಜನಗರ ಸಂಚಾಲಕ ಸತೀಶ್, ಆರ್‍ಎಸ್‍ಎಸ್ ಸಂಚಾಲಕ ಪ್ರಸಾದ್, ವೆಂಕಟೇಶ್, ರಾಜುಗೌಡ ಸೇರಿದಂತೆ ನೂರಾರು ಹಿತ ಚಿಂತಕರು ಸಭೆಯಲ್ಲಿ ಭಾಗವಹಿಸಿದ್ದರು.

Translate »