ರಾಜ್ಯದಲ್ಲೇ ಎಪಿಎಂಸಿ ಎಳನೀರು ಮಾರುಕಟ್ಟೆ ನಂಬರ್ ಒನ್
ಮಂಡ್ಯ

ರಾಜ್ಯದಲ್ಲೇ ಎಪಿಎಂಸಿ ಎಳನೀರು ಮಾರುಕಟ್ಟೆ ನಂಬರ್ ಒನ್

June 27, 2018

ಮದ್ದೂರು:  ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ 1.5ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಎಪಿಎಂಸಿ ಅಧ್ಯಕ್ಷ ಕುದರಗುಂಡಿ ನಾಗೇಶ್, ಉಪಾಧ್ಯಕ್ಷೆ ಮಮತಾ ಶಂಕರೇಗೌಡ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿಯೇ ಎಪಿಎಂಸಿ ಎಳನೀರು ಮಾರುಕಟ್ಟೆ ನಂಬರ್ ಒನ್ ಆಗಿದೆ. ಈ ಹಿಂದೆ ಮಾರುಕಟ್ಟೆಯ ರಸ್ತೆ ಸಂಪೂರ್ಣ ಹಾಳಾಗಿ ಧೂಳುಮಯವಾಗಿತ್ತು. ಪ್ರತಿನಿತ್ಯ ವಹಿವಾಟಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ 1.5ಕೋಟಿ ರೂ. ಬಿಡುಗಡೆಗೊಂಡು ಗುಣಮಟ್ಟದ ರಸ್ತೆ ನಿರ್ಮಾಣವಾಗುತ್ತಿದೆ ಎಂದರು.

ಈ ಸಂದರ್ಭ ಎಪಿಎಂಸಿ ನಿರ್ದೇಶಕರಾದ ಕರಿಯಪ್ಪ, ಮಹೇಂದ್ರ, ಎಪಿಎಂಸಿ ಕಾರ್ಯದರ್ಶಿ ಪ್ರಭು, ಸಹಾಯಕ ಕಾರ್ಯದರ್ಶಿ ನಾಗೇಶ್, ಕಲೀಲ್ ಹಾಜರಿದ್ದರು.

Translate »