ಕಾರಿಗೆ ಗೂಡ್ಸ್ ವಾಹನ ಡಿಕ್ಕಿ: ಮೂವರ ಸಾವು
ಮೈಸೂರು

ಕಾರಿಗೆ ಗೂಡ್ಸ್ ವಾಹನ ಡಿಕ್ಕಿ: ಮೂವರ ಸಾವು

June 3, 2019

ಮಳವಳ್ಳಿ: ಬೊಲೆರೋ ಗೂಡ್ಸ್ ಟೆಂಪೋ ಹಾಗೂ ಈಟಿಯೋಸ್ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತ ಪಟ್ಟು, ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ತಳಗವಾದಿ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದೆ. ತಳಗವಾದಿ ಗ್ರಾಮದ ನಿವಾಸಿ ಜಾನಕಿ (53), ಅಶೋಕ(35) ಹಾಗೂ ದೇವಿಪುರದ ಸೌಭಾಗ್ಯ(46) ಮೃತಪಟ್ಟವರು. ಜಯಶೀಲ (55), ನಾಗರಾಜು(25) ತೀವ್ರ ಗಾಯಗೊಂಡು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಬಾಳೆಎಲೆ ತುಂಬಿಕೊಂಡು ಮಳವಳ್ಳಿಯಿಂದ ಬೆಂಗಳೂರು ಕಡೆಗೆ ಹೋಗು ತ್ತಿದ್ದ ಬೊಲೆರೋ ಗೂಡ್ಸ್ ವಾಹನ ಬೀಗರ ಔತಣ ಮುಗಿಸಿಕೊಂಡು ಮದ್ದೂರು ಕಡೆಯಿಂದ ಬರು ತ್ತಿದ್ದ ಈಟಿಯೋಸ್ ಕಾರಿಗೆ ಡಿಕ್ಕಿ ಹೊಡೆದ ಪರಿ ಣಾಮ ಕಾರಿನಲ್ಲಿದ್ದ ಜಾನಕಿ ಹಾಗೂ ಸೌಭಾಗ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ತೀವ್ರ ಗಾಯ ಗೊಂಡಿದ್ದ ಅಶೋಕ, ಜಯಶೀಲ ಹಾಗೂ ನಾಗರಾಜು ಅವರನ್ನು ಕೆ.ಎಂ.ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾ ಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಶೋಕ ಸಾವನ್ನಪ್ಪಿದ್ದಾರೆ. ಉಳಿದ ಜಯಶೀಲ ಹಾಗೂ ನಾಗರಾಜು ಅವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಿಲಿಸಿಕೊಂಡಿದ್ದಾರೆ.

Translate »