ಆಪರೇಷನ್ ಕಮಲಕ್ಕೆ ಪ್ರತಿ ಆಪರೇಷನ್ ನಡೆಸಲು ಮೈತ್ರಿ ನಾಯಕರ ಸಿದ್ಧತೆ
ಮೈಸೂರು

ಆಪರೇಷನ್ ಕಮಲಕ್ಕೆ ಪ್ರತಿ ಆಪರೇಷನ್ ನಡೆಸಲು ಮೈತ್ರಿ ನಾಯಕರ ಸಿದ್ಧತೆ

June 3, 2019

ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿ ಆಪರೇ ಷನ್ ನಡೆಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಾಯಕರು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವಾಗಿ ಬಿಜೆಪಿಯ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಕೈ ಕುಲುಕುತ್ತಿರುವ ಫೋಟೋ ವೈರಲ್ ಆಗಿದೆ.

ಬಿಜೆಪಿಯ ಶಿರಗುಪ್ಪ ಶಾಸಕ ಸೋಮಲಿಂಗಪ್ಪ, ಈ ಹಿಂದೆ ಜೆಡಿಎಸ್ ಶಾಸಕರಾಗಿದ್ದು, ಹಾಲಿ ರಾಯ ಚೂರು ನಗರದ ಬಿಜೆಪಿ ಶಾಸಕರಾಗಿ ರುವ ಡಾ.ಶಿವರಾಜ ಪಾಟೀಲ್, ಸುರಪುರ ಶಾಸಕ ರಾಜೂಗೌಡ, ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್ ಅವರೊಂ ದಿಗೆ ಕಾಂಗ್ರೆಸ್ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಕಳೆದ ಹಲವು ದಿನಗಳಿಂದ ಶಾಸಕ ಬಸವರಾಜ್ ದಡೇಸಗೂರ್ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದವು. ಈ ಮಧ್ಯೆ ಅವರು ವೆಂಕಟರಾವ್ ನಾಡ ಗೌಡ ಅವರ ಸಮ್ಮುಖದಲ್ಲಿ ಕುಮಾರ ಸ್ವಾಮಿ ಅವರ ಜೊತೆ ಕೈ ಕುಲುಕುತ್ತಿರುವ ಫೋಟೋ ಶನಿವಾರ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೇವಲ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡರೆ ಸಾಲದು, ಬಿಜೆಪಿ ಶಾಸಕರನ್ನೂ ಸೆಳೆದರೆ ಆಪರೇಷನ್ ಕಮಲಗೆ ತಿರುಗೇಟು ನೀಡಬಹುದು ಎಂಬ ಉದ್ದೇಶದಿಂದ ಮೈತ್ರಿ ನಾಯಕರು ಕಾರ್ಯೋನ್ಮುಖರಾಗಿ ದ್ದಾರೆ ಎಂದು ಹೇಳಲಾಗಿದೆ.

Translate »