ಕಾವ್ಯದ ಮೂಲಕ ಅಮಾನವೀಯತೆ ವಿರುದ್ಧ ಹೋರಾಡಿದ ಮುಳ್ಳೂರು ನಾಗರಾಜ
ಮೈಸೂರು

ಕಾವ್ಯದ ಮೂಲಕ ಅಮಾನವೀಯತೆ ವಿರುದ್ಧ ಹೋರಾಡಿದ ಮುಳ್ಳೂರು ನಾಗರಾಜ

June 3, 2019

ಮೈಸೂರು: ಸಾಹಿತಿ ಮುಳ್ಳೂರು ನಾಗರಾಜ ಅವರು ಅಪಮಾನ, ಹಸಿವು, ಅಭದ್ರತೆ, ಅಮಾನವೀಯತೆ ವಿರುದ್ಧ ಕಾವ್ಯದ ಮೂಲಕ ದನಿ ಎತ್ತಿ ಹೋರಾಡಿದ ಹೋರಾಟಗಾರ ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರ ಕಿರುರಂಗ ಮಂದಿರದಲ್ಲಿ ರಂಗವಾಹಿನಿ, ನೆಲೆ ಹಿನ್ನೆಲೆ, ರಾಮಮನೋಹರ ಲೋಹಿಯಾ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮುಳ್ಳೂರು ನಾಗರಾಜ ರಾಜ್ಯಮಟ್ಟದ 9ನೇ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಳ್ಳೂರು ನಾಗರಾಜ ಬಹು ದೊಡ್ಡ ಪ್ರಭಾವಶಾಲಿ ಲೇಖಕರಾಗಿರಲಿಲ್ಲ. ಅಂದಂ ದಿನ ಊಟಕ್ಕೂ ಯಾವುದಾದರೂ ಹಾಸ್ಟೆಲ್ ಆಶ್ರಯಿಸುತ್ತಿದ್ದ ದಲಿತಪರ ಹೋರಾಟಗಾರ. ಆ ಕಾಲಕ್ಕೆ ಅವರ ಹೋರಾಟ ಅಗತ್ಯವಿತ್ತು. ಬೆಂಬಲವೂ ಇಲ್ಲ, ಹಣವೂ ಇಲ್ಲದ ಸ್ಥಿತಿ ಯಲ್ಲಿ ಅವರ ಹೋರಾಟ ನಡೆದಿತ್ತು. ಕಾವ್ಯದ ಮೂಲಕವೇ ಹೋರಾಟ ನಡೆಸಿದವರು. ಆಕ್ರೋಶವನ್ನು ಕಾವ್ಯದ ಮೂಲಕ ಸಾಧ್ಯ ಮಾಡಬಹುದು ಎಂದು ತೋರಿಸಿದರು.

ಅವರು ಬೆಳಗಬೇಕಾದಷ್ಟು ಬೆಳಗಲಿಲ್ಲ. ಆದರೆ ಉರಿಯಬೇಕಾದಷ್ಟು ಉರಿದರು. ಇತರರಿಗೆ ಬೆಳಕು ನೀಡಿದರು. ಇಂದಿನ ಯುವಜನರು ಮುಳ್ಳೂರರ ಕಾವ್ಯವನ್ನು ಓದಬೇಕು ಎಂದು ಹೇಳಿದರು.

ಮೌಲ್ಯಗಳು ಕಳೆದುಹೋದ ಸ್ಥಿತಿಯಲ್ಲಿ ರುವ ನಾವು ಬದುಕಿನ ನಂಬಿಕೆಗಿಂತ ಆಡಂ ಬರಗಳೇ ಹೆಚ್ಚುತ್ತಿವೆ. ಕಿರೀಟಕ್ಕೆ ಸಿಕ್ಕಿಸುವ ಗರಿಗಳೇ ಮುಖ್ಯವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೇವಲ ಮಾರುಕಟ್ಟೆ ಭಾಷೆಯಾಗಿರುವ ಇಂಗ್ಲಿಷ್ ಎದುರು ಕನ್ನಡ ಭಾಷೆ, ಸಾಹಿತ್ಯ ಮಂಡಿಯೂರಿ ಕುಳಿತಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಶೇಖರ ಕೋಟಿ ಪತ್ರಿಕೋದ್ಯ ಮದ ಮೂಲಕ ಹೋರಾಟ ನಡೆಸಿದರು. ಸಣ್ಣ ಸಣ್ಣ ಜನರ ಆಶಯಗಳಿಗೆ ದನಿಯಾಗಿ ದ್ದರು. ಸಮಾಜವಾದಿ ಹೋರಾಟದ ಹಿನ್ನೆಲೆಯಲ್ಲಿ ಹೋರಾಡಿದರು ಎಂದರು.

ಶಿವಮೊಗ್ಗದ ಕವಿ ಎನ್.ರವಿಕುಮಾರ್ ಅವರಿಗೆ ಮುಳ್ಳೂರು ನಾಗರಾಜ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಕವಯತ್ರಿ ಡಾ.ಧರಣೀದೇವಿ ಮಾಲಗತ್ತಿ, ನಂಜಿಲ್ಲದ ಸಮಾಜ ನಿರ್ಮಾಣ ಸುಲಭದ ಮಾತಲ್ಲ. ನಂಜಿಲ್ಲದ ಸಮಾಜ ನಿರ್ಮಿಸಲು ಜನಾಭಿಪ್ರಾಯ ರೂಪಿಸುವುದು ಅಗತ್ಯ. ನಂಜಿಲ್ಲದ ಸಮಾಜ ಸ್ಥಾಪನೆಗೆ, ಸಾಮಾ ಜಿಕ ಆರೋಗ್ಯಕ್ಕೆ ಸಾಹಿತ್ಯ ಚಿಕಿತ್ಸೆಯನ್ನು ಸಾಹಿತಿ ನೀಡಬೇಕು ಎಂದರು. ಕೃತಿ ಕುರಿತು ಮೈಸೂರು ವಿವಿ ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ. ಆನಂದ್ ಮಾತನಾಡಿದರು. ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ (ಜನ್ನಿ) ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋ ದ್ಯಮಿ ರವಿ ಕೋಟಿ, ರಂಗಕರ್ಮಿ ಕೆ.ಆರ್. ಗೋಪಾಲಕೃಷ್ಣ, ಪತ್ರಕರ್ತ ಮುಳ್ಳೂರು ರಾಜು, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರ ಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕೆಂಪನಪುರ, ಸಂಚಾಲಕ ರೂಬಿನ್ ಸಂಜಯ್ ಇನ್ನಿತರರಿದ್ದರು.

Translate »