ಮೈಸೂರು

ಇಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಸಿಯಾಚಿನ್‍ಗೆ ಭೇಟಿ

June 3, 2019

ನವದೆಹಲಿ: ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಅವರು ಜಗ ತ್ತಿನ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ಗೆ ಸೋಮವಾರ ಭೇಟಿ ನೀಡಿ, ಪಾಕಿಸ್ತಾನದೊಂದಿಗೆ ಗಡಿ ಹಂಚಿ ಕೊಂಡಿರುವ ಅಲ್ಲಿನ ಭದ್ರತಾ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಈ ಭೇಟಿ ವೇಳೆ ರಕ್ಷಣಾ ಸಚಿವರ ಜತೆಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಕ್ಷಣಾ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ಈ ಬಗ್ಗೆ ಸರಕಾರದ ಮೂಲಗಳು ಖಚಿತಪಡಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಿಯಾಚಿನ್‍ನಲ್ಲಿ ಹೇಗೆ ಸೇನೆಯು ವಾಯು ಬಲದ ನೆರವಿನೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ರಾಜನಾಥ್ ಸಿಂಗ್ ಅವರಿಗೆ ವಿವರಣೆ ನೀಡಲಾಗುತ್ತದೆ. ನಾರ್ಥನ್ ಆರ್ಮಿ ಕಮ್ಯಾಂಡರ್ ಲೆ. ಜನರಲ್ ರಣ್ಬೀರ್ ಸಿಂಗ್, 14 ಕಾರ್ಪ್ಸ್ ಕಮ್ಯಾಂಡರ್ ಮತ್ತು ಕಾರ್ಗಿಲ್ ಯುದ್ಧದ ‘ಹೀರೋ’ ಲೆ.ಜನರಲ್ ವೈ.ಕೆ.ಜೋಶಿ ಅವರು ಭದ್ರತಾ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಸಮುದ್ರ ಮಟ್ಟಕ್ಕಿಂತ ಇಪ್ಪತ್ಮೂರು ಸಾವಿರ ಅಡಿ ಎತ್ತರದಲ್ಲಿ ಇರುವ ಈ ಪ್ರದೇಶದಲ್ಲಿ ಉಸಿರಾಟ ನಡೆಸುವುದೂ ಕಷ್ಟ. ಅಂಥ ಸ್ಥಳದಲ್ಲಿ ಭಾರತೀಯ ಸೇನೆಯು ಬ್ರಿಗೇಡ್ ಅನ್ನು ನೇಮಿಸಿದೆ.

Translate »