ನಾವು ಹಾಳು ಮಾಡಿರುವ ಪರಿಸರವನ್ನು ನಾವೇ ಸರಿಪಡಿಸಬೇಕು
ಮಂಡ್ಯ

ನಾವು ಹಾಳು ಮಾಡಿರುವ ಪರಿಸರವನ್ನು ನಾವೇ ಸರಿಪಡಿಸಬೇಕು

June 25, 2018

ಭಾರತೀನಗರ:  ನಾವು ಹಾಳು ಮಾಡುವ ಪರಿಸರವನ್ನು ನಾವೇ ಸರಿ ಪಡಿಸಬೇಕು ಎಂದು ಕೃಷಿಕ್ ಲಯನ್ ಸಂಸ್ಥೆಯ ಮಹಾಪೋಷಕ ಕೆ.ಟಿ.ಹನು ಮಂತು ತಿಳಿಸಿದರು.ಇಲ್ಲಿನ ಕೃಷಿಕ್ ಲಯನ್ ಸಂಸ್ಥೆ, ಅಂಗನ ವಾಡಿ ಭಾರತೀನಗರ ಇವರ ಆಶ್ರಯದಲ್ಲಿ ಮಹಿಳೆಯರಿಗೆ ಸಸಿ ವಿತರಣೆ, ಸಸಿ ನೆಡುವ ಮತ್ತು ಟೇಬಲ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರದ ಬಗ್ಗೆ ಅಂಗನವಾಡಿ ಮಹಿಳೆ ಯರಿಗೆ ಜಾಗೃತಿ ಮೂಡಿಸಿದರೆ ಒಂದು ಊರಿಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂಬ ಉದ್ದೇಶದಿಂದ ಅಂಗನವಾಡಿಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು.

ಮಹಿಳೆಯರು ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕು. ಮನೆಗೆ ಅಗತ್ಯ ವಸ್ತುಗಳನ್ನು ತರಬೇಕಾದರೆ ಬಟ್ಟೆ ಬ್ಯಾಗ್‍ಗಳನ್ನು ತೆಗೆದು ಕೊಂಡು ಹೋಗಬೇಕು. ಪರಿಸರ ಸ್ನೇಹಿ ಯಾಗಬೇಕಾದರೆ ಸೈಕಲ್ ಬಳಸುವ ಮೂಲಕ ವಾಯುಮಾಲಿನ್ಯ ತಡೆಗಟ್ಟು ವುದರ ಜೊತೆಗೆ ಪರಿಸರ ಸ್ನೇಹಿಯಾಗಿ ಪರಿಸರದ ಜೊತೆಯಲ್ಲಿ ನಾವು ಬೆಳೆಯ ಬೇಕೆಂದು ಸಲಹೆ ನೀಡಿದರು.

ಕೃಷಿಕ್ ಲಯನ್ ಸಂಸ್ಥೆಯ ಕೆ.ಆರ್.ಶಶಿ ಧರ್ ಈಚಗೆರೆ ಮಾತನಾಡಿ, ವಿದ್ಯಾರ್ಥಿ ಗಳು ಹಾಗೂ ಹಳ್ಳಿಗಾಡಿನ ಯುವಕರು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪ್ರಸ್ತುತ ಹವಾಮಾನ ವೈಪರಿತ್ಯಗಳಿಗೆ ಪರಿಸರದ ಲ್ಲಿನ ಏರುಪೇರುಗಳೇ ಕಾರಣ. ಇದನ್ನು ಸಣ್ಣದೆಂದು ಪರಿಗಣಿಸದೇ ದೊಡ್ಡ ಸಮಸ್ಯೆಯ ಆರಂಭವೆಂದು ತಿಳಿದುಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.

ದಿನದಿಂದ ದಿನಕ್ಕೆ ಸಮುದ್ರ ಮಟ್ಟ ಏರು ತ್ತಿರುವುದಕ್ಕೆ ದ್ರುವಗಳಲ್ಲಿ ಮಂಜುಗಡ್ಡೆ ಕರಗಿ ನೀರಾಗುತ್ತಿರುವುದು, ಹೀಗೆ ಕರಗಲು ವಾತಾವರಣದಲ್ಲಿನ ಉಷ್ಣತೆ ಕಾರಣ. ಉಷ್ಣತೆ ಹೆಚ್ಚಾಗಲು ಮರಗಳ ಮಾರಣ ಹೋಮ ಕಾರಣವಾಗಿದ್ದು, ಇವುಗಳೆಲ್ಲ ವನ್ನು ತಡೆಯಬೇಕಾದಲ್ಲಿ ಎಲ್ಲೆಡೆ ಮರಗಿಡಗಳನ್ನು ಬೆಳೆಸಲು ಮುಂದಾಗ ಬೇಕೆಂದು ಹೇಳಿದರು.

ಇದೇ ವೇಳೆ ಕೃಷಿಕ್ ಲಯನ್ಸ್ ಸಂಸ್ಥೆ ವತಿಯಿಂದ ಅಂಗನವಾಡಿಗೆ ಉಚಿತ ಟೇಬಲ್ ವಿತರಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಮಹಿಳೆಯರಿಗೆ ಸಸಿ ವಿತರಣೆ ಮಾಡ ಲಾಯಿತು. ಈ ಸಂದರ್ಭ ಕ್ಷೇತ್ರದ ಮೇಲ್ವಿ ಚಾರಕಿ ಆರ್. ಭಾಗ್ಯ, ಅಂಗನವಾಡಿ ಕಾರ್ಯ ಕರ್ತೆ ಕೆ.ಪಿ.ಮಮತ, ಬಸವರಾಜು, ಶಿವ ಕುಮಾರ್, ಗ್ರಾ.ಪಂ ಸದಸ್ಯ ಕೆ.ಟಿ.ಶ್ರೀನಿವಾಸ್, ಲೋಕೇಶ್, ಕವಿತಾ ಸೇರಿದಂತೆ ಇತರರಿದ್ದರು.

Translate »