ಮಡುವಿನಕೋಡಿ ಸೊಸೈಟಿಗೆ ಮಮತಾ ಅಧ್ಯಕ್ಷೆ
ಮಂಡ್ಯ

ಮಡುವಿನಕೋಡಿ ಸೊಸೈಟಿಗೆ ಮಮತಾ ಅಧ್ಯಕ್ಷೆ

June 25, 2018

ಕೆ.ಆರ್.ಪೇಟೆ: ತಾಲೂಕಿನ ಮಡವಿನಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಮಮತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷ ಎಂ.ಬಿ.ಶ್ರೀನಿವಾಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಮಮತಾ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಧಿಕಾರಿ ಜಗದೀಶ್ ಮಮತ ಅವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಅನುರಾಧ, ಅಕ್ಕಿಹೆಬ್ಬಾಳು ಸೊಸೈಟಿ ಸಿಇಓ ಸತೀಶ್ ಕಾರ್ಯ ನಿರ್ವ ಹಿಸಿದರು. ಸಂಘದ ಉಪಾಧ್ಯಕ್ಷ ಎಂ.ಡಿ. ಲಕ್ಷಣ್‍ಗೌಡ, ನಿರ್ದೇಶಕರಾದ ಆರ್. ನಾಗೇಶ್, ಎಂ.ವಿ.ಜಯರಾಮೇಗೌಡ, ಎಂ.ಜೆ. ಯೋಗೇಶ್, ಪ್ರಶಾಂತ್, ಎನ್.ಚಂದ್ರ ಶೇಖರ್, ಜಯಮ್ಮ, ಅಶೋಕ್, ಪ್ರಕಾಶ್ ಮತ್ತು ಮಡವಿನಕೋಡಿ ಗ್ರಾಪಂ ಉಪಾ ಧ್ಯಕ್ಷ ಪ್ರವೀಣ್ ಸೇರಿದಂತೆ ಹಲವರು ನೂತನ ಅಧ್ಯಕ್ಷೆಯನ್ನು ಅಭಿನಂದಿಸಿದರು.

ಬಳಿಕ ನೂತನ ಅಧ್ಯಕ್ಷೆ ಮಮತಾ ಮಾತನಾಡಿ, ಸಹಕಾರಿ ಸಂಘದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ರೈತರು ಖಾಸಗಿಯವರ ಬಳಿ ಸಾಲ ಮಾಡು ವುದನ್ನು ನಿಲ್ಲಿಸಿ ಸಹಕಾರಿ ಸಂಘಗಳಲ್ಲಿ ಸಾಲ ಪಡೆದುಕೊಳ್ಳಬೇಕು. ರೈತರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಬೇಕು ಎಂದರು.

Translate »