ಕೀಳರಿಮೆ ಬಿಟ್ಟು ಸ್ವಾವಲಂಬಿ ಬದುಕು ನಡೆಸಿ
ಮಂಡ್ಯ

ಕೀಳರಿಮೆ ಬಿಟ್ಟು ಸ್ವಾವಲಂಬಿ ಬದುಕು ನಡೆಸಿ

June 25, 2018

ಕೆ.ಆರ್.ಪೇಟೆ:  ವಿಕಲ ಚೇತನರು ಕೀಳರಿಮೆ ಬಿಟ್ಟು ಸರ್ಕಾರ ದಿಂದ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂದು ಗಂಜಿಗೆರೆ ಗ್ರಾಪಂ ಅಧ್ಯಕ್ಷೆ ವೀರಾಜಮ್ಮ ಸಲಹೆ ನೀಡಿದರು.

ತಾಲೂಕಿನ ಗಂಜಿಗೆರೆ ಗ್ರಾಪಂ ವತಿ ಯಿಂದ ಅಂಗವಿಕಲರ ಶೇ. 5ರ ಮೀಸಲು ನಿಧಿ ಅನುದಾನದಲ್ಲಿ 1ಲಕ್ಷ ರೂ. ವೆಚ್ಚದ ಸೋಲಾರ್ ದೀಪಗಳನ್ನು 25 ಅಂಗವಿ ಕಲ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಗ್ರಾಪಂಗೆ ಬರುವ ಎಲ್ಲಾ ಬಗೆಯ ಅನು ದಾನದ ಪೈಕಿ ಶೇ.5ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಸದ್ಬಳಕೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆ ಯಲ್ಲಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮ ಗಳ 25ಮಂದಿ ಅರ್ಹ ವಿಕಲಚೇತನರನ್ನು ಗುರುತಿಸಿ ಸೋಲಾರ್ ದೀಪಗಳನ್ನು ವಿತರಿ ಸÀಲಾಗಿದೆ. ಹಾಗಾಗಿ ಅಂಗವಿಕಲರು ತಮಗೆ ನೀಡಿರುವ ಸೋಲಾರ್ ದೀಪಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ತಮ್ಮ ಕೈಲಾಗುವ ಕೆಲಸ ಮಾಡಬೇಕು ಎಂದು ವಿಕಲಚೇತನರಿಗೆ ಕರೆ ನೀಡಿದರು.
ಇದೇ ವೇಳೆ ಗ್ರಾಪಂ ಉಪಾಧ್ಯಕ್ಷೆ ಮಂಜುಳಮ್ಮ, ಪಿಡಿಓ ಎಚ್.ಎಸ್.ರವಿ ಕುಮಾರ್, ಸದಸ್ಯರಾದ ಪರಮೇಶ್, ವಿಜಯಕುಮಾರ್, ಲೋಕೇಶ್, ಸ್ವಾಮಿ ನಾಯಕ್, ರೇವಣ್ಣಗೌಡ, ಕುಮಾರ್, ಮೀನಾಕ್ಷಿ, ಮಮತಾ, ಹನುಮೇಗೌಡ, ಕಾರ್ಯದರ್ಶಿ ರಘುನಾಥ್ ಮತ್ತಿತರರಿದ್ದರು.

Translate »