ವಕೀಲ ವೃತ್ತಿ ಮಹತ್ವಪೂರ್ಣವಾದದ್ದು: ನ್ಯಾ.ಎಸ್.ಬೋಪಣ್ಣ
ಕೊಡಗು

ವಕೀಲ ವೃತ್ತಿ ಮಹತ್ವಪೂರ್ಣವಾದದ್ದು: ನ್ಯಾ.ಎಸ್.ಬೋಪಣ್ಣ

June 25, 2018

ವಿರಾಜಪೇಟೆ: ವಕೀಲರು ನ್ಯಾಯ ಒದಗಿಸುವಲ್ಲಿ ನ್ಯಾಯಾಧೀಶ ರೊಂದಿಗೆ ಸಹಕರಿಸಬೇಕು. ಇಂದಿನ ಸಮಾಜದಲ್ಲಿ ವಕೀಲ ವೃತ್ತಿ ಮಹತ್ವದಿಂದ ಕೂಡಿದೆ. ನ್ಯಾಯಾಲಯದಲ್ಲಿಯೂ ವಕೀ ಲರ ಪಾತ್ರ ಪ್ರಾಮುಖ್ಯತೆಯನ್ನು ಪಡೆದಿರು ವುದರಿಂದ ಕರ್ತವ್ಯ ನಿಷ್ಠೆಯನ್ನು ಪಾಲಿಸ ಬೇಕು ಎಂದು ರಾಜ್ಯ ಉಚ್ಚ ನ್ಯಾಯಾ ಲಯದ ಹಿರಿಯ ನ್ಯಾಯಮೂರ್ತಿ ಅಜ್ಜಿ ಕುಟ್ಟೀರ ಎಸ್.ಬೋಪಣ್ಣ ಹೇಳಿದರು.

ವಕೀಲ ವೃತ್ತಿಯಲ್ಲಿ 50 ವರ್ಷಗಳನ್ನು ಪೂರೈಸಿದ ಶಾನುಭೋಗರ ಆರ್.ಜಗ ದೀಶ್ ಅವರಿಗೆ ವಿರಾಜಪೇಟೆ ವಕೀಲರ ಸಂಘದಿಂದ ಪಾಲಿಬೆಟ್ಟದ ಕೂರ್ಗ್ ಕ್ಲಿಫ್ ರೆಸಾರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ ಭಾಗವ ಹಿಸಿದ್ದ ನ್ಯಾಯಮೂರ್ತಿ ಬೋಪಣ್ಣ ಅವರು ಜಗದೀಶ್ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಿ ಬಳಿಕ ಮಾತನಾಡುತ್ತ, ಕಾನೂನು ರಕ್ಷಣೆಯ ಜವಾಬ್ದಾರಿ ವಕೀ ಲರ ಮೇಲಿದೆ. ಇತರ ವೃತ್ತಿಗಳಿಗಿಂತ ವಕೀಲ ವೃತ್ತಿ ಭಿನ್ನವಾಗಿದ್ದು, ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕಾರ್ಯ ವಕೀಲ ವೃತ್ತಿಯಲ್ಲಿ ಸೇರಿದೆ. ಕೊಡಗಿನಂತಹ ಸಣ್ಣ ಪಟ್ಟಣ ವಿರಾಜಪೇಟೆಯಲ್ಲಿ ವಕೀಲ ವೃತ್ತಿ ನಡೆಸಿ ಐದು ದಶಕಗಳನ್ನು ಪೂರೈಸಿದ ಜಗದೀಶ್ ಅವರ ಸೇವೆ ಅಮೋಘವಾದ ಸಾಧನೆಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿದ ಎಸ್.ಆರ್. ಜಗದೀಶ್ ಅವರು ತಾವು ವಕೀಲ ವೃತ್ತಿ ಆರಂಭಿಸಲು ಕಾರಣ ಹಾಗೂ 50 ವರ್ಷ ಗಳನ್ನು ಪೂರೈಸಿದ ಕುರಿತು ತಮ್ಮ ಅನು ಭವದ ಮಾಹಿತಿ ನೀಡಿದರು. ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯ ನಾರಾಯಣಾಚಾರ್ಯ ನ್ಯಾಯಾಲಯ ಗಳಲ್ಲಿ ವಕೀಲರ ಪಾತ್ರ ಹಾಗೂ ಕರ್ತವ್ಯ ನಿಷ್ಠೆಯ ಕುರಿತು ತಿಳಿಸಿದರು.

ಸಮಾರಂಭವನ್ನುದ್ದೇಶಿಸಿ ಸೋಮವಾರ ಪೇಟೆ ವಕೀಲರ ಸಂಘದ ಅಧ್ಯಕ್ಷ ಅಭಿ ಮನ್ಯುಕುಮಾರ್, ವಿರಾಜಪೇಟೆಯ ಹಿರಿಯ ವಕೀಲರುಗಳಾದ ಎಂ.ಕೆ.ಪೂವಯ್ಯ, ಬಿ.ಸಿ. ಸುಬ್ಬಯ್ಯ, ಸಿ.ಸಿ.ಸೋಮಯ್ಯ, ಎನ್.ಜಿ. ಕಾಮತ್, ಐ.ಆರ್.ಪ್ರಮೋದ್, ನಿಖಿಲ್ ರಾಮಮೂರ್ತಿ, ಸಿಂಧೂರ ಸ್ವಾಮಿ, ಅನುಪಮ ಮುಂತಾದವರು ಮಾತನಾಡಿದರು.

ಕೊಡಗಿನ ಹಿರಿಯ ವಕೀಲರು, ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಅವರು ಮಾತನಾಡಿ, ಇಂದು ವಕೀಲರ ಒಕ್ಕೂಟದಿಂದ ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನದ ರಕ್ಷಣೆಯಾಗಬೇಕಾಗಿದೆ. ಸಂವಿಧಾನದಡಿಯಲ್ಲಿ ಬರುವ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳ ಪೈಕಿ ನ್ಯಾಯಾಂಗ ಜನತೆಗೆ ನ್ಯಾಯ ವಿತರಿಸಲು ದೇಶದ ಅತಿ ದೊಡ್ಡ ಅಸ್ತ್ರವಾಗಿದೆ. ನ್ಯಾಯಾಂ ಗದ ಮೇಲೆ ದೇಶದ ಜನತೆ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ನ್ಯಾಯಾಂಗ ದಿಂದ ಜನತೆಗೆ ನ್ಯಾಯದ ಪ್ರತಿಪಾದನೆ ಯಾಗಲಿದೆ. ಆದ್ದರಿಂದ ನ್ಯಾಯಾಂಗ ದೇಶದ ಲ್ಲಿಯೇ ಪಾವಿತ್ರ್ಯತೆಯನ್ನು ಹೊಂದಿದ್ದು, ದೇಶದ ವಕೀಲರೆಲ್ಲರೂ ಒಮ್ಮತವಾಗಿ ಪ್ರಜಾಪ್ರಭು ತ್ವದ ರಕ್ಷಣೆಗೆ ಮುಂದಾಗಬೇಕು ಎಂದರು.

ವೇದಿಕೆಯಲ್ಲಿ ಶಾಂತಾ ಜಗದೀಶ್, ವಕೀಲರ ಸಂಘದ ಅಧ್ಯಕ್ಷ ಮಾಳೇಟಿರ ನಂಜಪ್ಪ ಉಪಸ್ಥಿತರಿದ್ದರು. ಅತಿಥಿಗಳಾಗಿ ವಿರಾಜಪೇಟೆ ಸಮುಚ್ಚಯ ನ್ಯಾಯಾಲ ಯದ ಎರಡನೇ ಜಿಲ್ಲಾ ಮತ್ತು ಸೆಷನ್ಸ ನ್ಯಾಯಾಧೀಶರಾದ ಬಿ.ಜಿ.ರಾಧಾ, ವಿರಾಜ ಪೇಟೆ ನ್ಯಾಯಾಧೀಶರುಗಳಾದ ಶಿವಾ ನಂದ ಲಕ್ಷ್ಮಣ್ ಅಂಚಿ, ಡಿ.ಆರ್.ಜಯ ಪ್ರಕಾಶ್, ಬಿ.ಕೆ.ಮನು, ಪೊನ್ನಂಪೇಟೆ ನ್ಯಾಯಾ ಲಯದ ಮೋಹನ್ ಗೌಡ ಹಾಜರಿದ್ದರು.

ವಕೀಲರ ಸಂಘದ ಕಾರ್ಯದರ್ಶಿ ಬಿ.ಬಿ.ಮಾದಪ್ಪ, ಎನ್.ಸಿಂಧೂರ ಸ್ವಾಮಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎಂ.ಎಸ್.ವೆಂಕಟೇಶ್ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.

Translate »