- ಮೋದಿಯವರ ಮೇಲೆ ಪ್ರಭಾವ ಬಳಸಿ ರಾಜ್ಯದ ಜನತೆ ಹಿತ ಕಾಪಾಡಲಿ
- ಹೆಚ್‍ಡಿಕೆ ನಮ್ ಸಿಎಂ ಎನ್ನೋ ಜಮೀರ್ ಹೇಳಿಕೆಯಲ್ಲಿ ತಪ್ಪೇನಿದೆ: ಸಿಆರ್‍ಎಸ್
ಮಂಡ್ಯ: ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಲವು ದಶಕ ಗಳಿಂದ ನೆನೆಗುದಿಗೆ ಬಿದ್ದಿರುವ ಕಾವೇರಿ ವಿವಾದವನ್ನು ಬಗೆಹರಿಸಲು ನೀರಾವರಿ ತಜ್ಞರೆನಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಎನ್.ಚಲುವರಾಯ ಸ್ವಾಮಿ ಹೇಳಿದರು.
ನಗರಸಭೆ ಅಧ್ಯಕ್ಷ ದಿವಂಗತ ಹೊಸಹಳ್ಳಿ ಬೋರೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಲು ನಗರಕ್ಕಿಂದು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಯಿಂದ ರಾಜ್ಯದ ಜನತೆಗೆ ಉಂಟಾಗಬಹು ದಾದ ಬಹುದೊಡ್ಡ ಅನಾಹುತವನ್ನು ತಪ್ಪಿ ಸಲು ದೇವೇಗೌಡರಿಂದ ಮಾತ್ರ ಸಾಧ್ಯ. ನೀರಾವರಿ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿ ರುವ ಅವರು ತಮ್ಮ ಪ್ರಭಾವವನ್ನು ಕೇಂದ್ರ ಸರ್ಕಾರದ ಮೇಲೆ ಬಳಸಿ ರಾಜ್ಯದ ಜನತೆಗೆ ಅನುಕೂಲ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರ ರಾಜ್ಯದ ಲ್ಲಿದ್ದರೆ ಇಷ್ಟೊತ್ತಿಗಾಗಲೇ ದೇವೇಗೌಡರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿ ಯಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ದೇವೇಗೌಡರ ಸಲಹೆ ಪಡೆದು ಸಮಸ್ಯೆ ಬಗೆಹರಿಸಲಿದ್ದಾರೆಂಬ ವಿಶ್ವಾಸ ತಮ್ಮದಾ ಗಿದೆ ಎಂದು ಪ್ರಶ್ನೆಯೊಂದಕ್ಕೆ ಜಾಣ ಪ್ರತಿಕ್ರಿಯೆ ನೀಡಿದರು.
ರಾಜ್ಯದ ಜನತೆಯ ಅನುಕೂಲಕ್ಕೆ ತಕ್ಕಂತೆ ಕಾವೇರಿ ನೀರನ್ನು ಬಿಡುಗಡೆ ಮಾಡುವ ಅಧಿಕಾರ ಸದ್ಯದ ಪರಿಸ್ಥಿತಿಯಲ್ಲಿಲ್ಲ. 4 ರಾಜ್ಯದ ಅಧಿಕಾರಿಗಳ ವಿವೇಚನೆಯಿಂದ ಕಾವೇರಿ ನಿರ್ವಹಣಾ ಮಂಡಳಿ ಕೆಲಸ ಮಾಡಲಿದೆ. ಇಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರತಿ ನಿಧಿಗಳು ಇರುವುದಿಲ್ಲ. ಹಾಗಾಗಿ ಕಾವೇರಿ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವ ಶಕ್ತಿ ದೇವೇ ಗೌಡರಿಗೆ ಮಾತ್ರ ಇದೆ ಎಂದು ಪರೋಕ್ಷವಾಗಿ ಗೌಡರಿಗೆ ಟಾಂಗ್ ನೀಡಿದರು.
6 ಕೋಟಿ ಜನರ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಕಾವೇರಿ ವಿವಾದವನ್ನು ಬಗೆಹರಿಸುವ ಸಾಮಥ್ರ್ಯ ಹೊಂದಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ ಸರ್ಕಾರ ನಡೆಯುತ್ತಿದ್ದು, ಮೋದಿಯವರ ಮೇಲೆ ರಾಜಕೀಯ ಹಿಡಿತ ಹೊಂದಿರುವ ದೇವೇಗೌಡರಿಗೆ ಕಾವೇರಿ ವಿವಾದ ಬಗೆಹರಿ ಸುವುದು ದೊಡ್ಡ ವಿಚಾರವೇನಲ್ಲ. ರೈತರು ಹಾಗೂ ನದಿ ವಿವಾದವನ್ನು ಚೆನ್ನಾಗಿ ಅರಿತಿರುವ ಮಾಜಿ ಪ್ರಧಾನಿಗಳು ರಾಜ್ಯದ ಜನತೆಯ ಹಿತ ಕಾಪಾಡಲಿದ್ದಾರೆ ಎಂದರು.
ಹೆಚ್‍ಡಿಕೆ ನಮ್ ಸಿಎಂ ಅಂದ ಜಮೀರ್ ಹೇಳಿಕೆಯಲ್ಲಿ ತಪ್ಪೇನಿದೆ: ಜಮೀರ್ ಹೆಚ್ಡಿಕೆ ಯನ್ನು ನಮ್ಮ ಸಿಎಂ ಎಂದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಚಲುವ ರಾಯಸ್ವಾಮಿ, ಮೀಡಿಯಾದವರನ್ನು ನಿಭಾಯಿಸಲು ಕೋರ್ಸ್ ತೆಗೆದುಕೊಳ್ಳಬೇಕು. ಆದರೆ ಜಮೀರಣ್ಣ ‘ಕೋರ್ಸ್’ ಪಡೆದಿಲ್ಲ. ಸೀದಾ ಸೀದಾ ಮಾತನಾಡುತ್ತಾರೆ. ಮಾಧ್ಯಮ ದವರನ್ನು ಅರ್ಥಮಾಡಿಕೊಳ್ಳಲು ಜಮೀರ್ ಅಹಮದ್‍ಗೆ ಕಷ್ಟವಾಗುತ್ತಿದೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಶಿಸ್ತಿನ ಪಕ್ಷ ಕಾಂಗ್ರೆಸ್, ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ದ್ದಾರೆ. ಜಮೀರ್ ಕುಮಾರಸ್ವಾಮಿ ಕ್ಯಾಬಿ ನೆಟ್‍ನಲ್ಲಿ ಸಚಿವರು ಕೂಡ ಆಗಿದ್ದಾರೆ. ಹಾಗಾಗಿ ಜಮೀರ್ ಅವರು ಕುಮಾರ ಸ್ವಾಮಿ ಅವರನ್ನು ನಮ್ಮ ಮುಖ್ಯಮಂತ್ರಿ ಎಂದು ಹೇಳಲೇಬೇಕು. ಬೇರೆ ಹೇಳಲು ಸಾಧ್ಯವೇ ಎಂದು ಅವರು ಹೇಳಿದರು.