ಹಳೆಗನ್ನಡ ಸಾಹಿತ್ಯಕ್ಕೆ ರಾಜರು, ಕವಿಗಳ ಕೊಡುಗೆ ಅನನ್ಯ; ಹೆಚ್‍ಡಿಡಿ
ಹಾಸನ

ಹಳೆಗನ್ನಡ ಸಾಹಿತ್ಯಕ್ಕೆ ರಾಜರು, ಕವಿಗಳ ಕೊಡುಗೆ ಅನನ್ಯ; ಹೆಚ್‍ಡಿಡಿ

June 25, 2018

ಶ್ರವಣಬೆಳಗೊಳ: ಹಳೆಗನ್ನಡ ಸಾಹಿತ್ಯಕ್ಕೆ ಹಿಂದೆ ರಾಜಮಹಾರಾಜರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದು, ಪಂಪ, ರನ್ನ ಹಾಗೂ ಇತರ ಕವಿಗಳು ಶ್ರಮಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನುಡಿದರು.

ಜೈನಕಾಶಿ ಶ್ರವಣಬೆಳಗೊಳದ ಚಾವುಂಡ ರಾಯ ಸಭಾಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾ ರಕ ಸ್ವಾಮೀಜಿ ಸಾನಿಧ್ಯ ಹಾಗೂ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಶಾಲೆಗಳಲ್ಲಿ ಇದ್ದ ಹಳೆಗನ್ನಡದ ಪ್ರೀತಿ ಇಂದು ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.

ಸ್ವಸ್ತಿಶ್ರೀಗಳು ಶ್ರೀಕ್ಷೇತ್ರದಲ್ಲಿ ಅನೇಕ ಸಮ್ಮೇಳಗಳನ್ನು ಆಯೋಜಿಸುತ್ತಾ ಬಂದಿದ್ದು, ಅದರ ಹೊಣೆಯನ್ನು ಸ್ವತಃ ತೆಗೆದು ಕೊಂಡು ಆಗಮಿಸುವ ಲಕ್ಷಾಂತರ ಜನಕ್ಕೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ರಚಿಸಿರುವ ಪುಸ್ತಕವು ಹಳೆಗನ್ನಡದ ನಿಘಂಟಿನ ರೂಪದಂತಿದ್ದು, ಅವರು ರಚಿಸಿರುವ ಹಲವು ಕೃತಿಗಳು ಯುವ ಸಾಹಿತಿಗಳಿಗೆ ದಾರಿ ದೀಪವಾಗಿದೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್‍ನಿಂದ ಹಲವಾರು ಕಾರ್ಯಕ್ರಮ ಗಳನ್ನು ಅವರು ಯಶಸ್ವಿಯಾಗಿ ನೆರವೇರಿಸಿ ದ್ದಾರೆ. ಇದು ಅವರ ಕನ್ನಡದ ಮೇಲಿನ ಅಭಿಮಾನವನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ಶಾಲೆಗಳಲ್ಲಿ ಹಳಗನ್ನಡ ಕುರಿತ ಸಂಶೋಧನೆಗಳು ನಡೆಯುತ್ತಿಲ್ಲ. ಶಿಕ್ಷಕರು ಮಕ್ಕಳಿಗೆ ನಮ್ಮ ಸಂಸ್ಕೃತಿಯ ಕುರಿತು ತಿಳಿಸಬೇಕಾಗಿದೆ. ಇದರಿಂದ ನಮ್ಮ ಸಾಹಿತ್ಯ ಶ್ರೀಮಂತವಾಗು ತ್ತದೆ. ವಿದ್ಯಾರ್ಥಿಗಳು ಹಳ್ಳಿಗಳ ಪರಿಸರ ದಲ್ಲಿ ಬೆಳೆದು ಸಾಹಿತ್ಯ ಜ್ಞಾನ ಪಡೆಯಬೇಕು. ಕನ್ನಡದ ಕೆಲಸಗಳನ್ನು ಹೆಮ್ಮೆಯಿಂದ ಮಾಡಬೇಕು. ಅಲ್ಲದೆ ಕನ್ನಡಿಗರೊಬ್ಬರು ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಹೆಚ್.ಡಿ.ದೇವೇಗೌಡರು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಮ್ಮೇಳನಕ್ಕೆ ಆಗಮಿಸಿದ ವಿಶೇಷ ಅಹ್ವಾನಿತರು ಶ್ರೀ ಭಗ ವಾನ್ ಬಾಹುಬಲಿ ಸ್ವಾಮಿಗೆ ಅಭಿಷೇಕ ಮಾಡಿದರು. ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ.ಷ.ಶೆಟ್ಟರ್, ಹಿರಿಯ ವಿದ್ವಾಂಸ ರಾದ ಡಾ.ಹಂಪ ನಾಗರಾಜಯ್ಯ, ಹಿರಿಯ ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಾಹಿತಿ ಕೆ.ವೈ.ನಾರಾಯಣಸ್ವಾಮಿ, ಶಾಸಕ ಸಿ.ಎನ್.ಬಾಲಕೃಷ್ಣ, ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ನಾ.ಮಂಜೇಗೌಡ ಹಳೆಗನ್ನಡ ಸಾಹಿತಿಗಳಿದ್ದರು.

Translate »