ಮಡಿಕೇರಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದು ಒಂದು ವರ್ಷ ಆಗಿದ್ದು, ಈ ಒಂದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಸರಕು ಮತ್ತು ಸೇವಾ ತೆರಿಗೆ ವಿಭಾಗದ ಜಂಟಿ ಆಯುಕ್ತ ರವಿಕಿರಣ ಅವರು ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರಕು ಮತ್ತು ಸೇವೆ ತೆರಿಗೆ ಎಂಬುದು ವಾಣಿಜ್ಯೋದ್ಯಮಿ ಗಳು, ವ್ಯಾಪಾರಸ್ಥರು ಇತರರ ಮೇಲೆ ನಂಬಿಕೆ…