ರಾಮನಾಥಪುರ: ಜೀವ ನದಿ ಕಾವೇರಿಯು 3ನೇ ದಿನವೂ ಅಪಾಯದ ಮಟ್ಟ ಮೀರಿ ಹರಿಯು ತ್ತಿರುವ ಪರಿಣಾಮ ಪ್ರವಾಹ ಸೃಷ್ಟಿಯಾಗಿದೆ. ಪಟ್ಟಣ ಸೇರಿದಂತೆ ನದಿ ಪಾತ್ರದ ಗ್ರಾಮಗಳು ಜಲಾ ವೃತವಾಗಿದ್ದು, ನೀರಿನ ರಭಸಕ್ಕೆ ಮನೆಗಳು ಕುಸಿದಿವೆ. ಜಮೀನುಗಳಲ್ಲಿ ನೀರು ನುಗ್ಗಿ ಪ್ರಮುಖ ಬೆಳೆ ಭತ್ತ ಸೇರಿದಂತೆ ಇನ್ನಿತರೆ ಫಸಲು ನಾಶವಾಗಿದೆ. ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಸ್ಥಳಾಂ ತರ ಕಾರ್ಯ ಭರದಿಂದ ಸಾಗಿದೆ. ತೆಪ್ಪಗಳ ಮೂಲಕ ಸ್ಥಳಾಂತರ: ಪಟ್ಟಣ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ರಸ್ತೆ, ಐ.ಬಿ ಸರ್ಕಲ್, ಸೇರಿದಂತೆ ವಿವಿಧೆಡೆಯ…