ಪ್ರವಾಹ ಸೃಷ್ಟಿಸಿದ ಜೀವನದಿ ಕಾವೇರಿ
ಹಾಸನ

ಪ್ರವಾಹ ಸೃಷ್ಟಿಸಿದ ಜೀವನದಿ ಕಾವೇರಿ

August 18, 2018

ರಾಮನಾಥಪುರ: ಜೀವ ನದಿ ಕಾವೇರಿಯು 3ನೇ ದಿನವೂ ಅಪಾಯದ ಮಟ್ಟ ಮೀರಿ ಹರಿಯು ತ್ತಿರುವ ಪರಿಣಾಮ ಪ್ರವಾಹ ಸೃಷ್ಟಿಯಾಗಿದೆ. ಪಟ್ಟಣ ಸೇರಿದಂತೆ ನದಿ ಪಾತ್ರದ ಗ್ರಾಮಗಳು ಜಲಾ ವೃತವಾಗಿದ್ದು, ನೀರಿನ ರಭಸಕ್ಕೆ ಮನೆಗಳು ಕುಸಿದಿವೆ. ಜಮೀನುಗಳಲ್ಲಿ ನೀರು ನುಗ್ಗಿ ಪ್ರಮುಖ ಬೆಳೆ ಭತ್ತ ಸೇರಿದಂತೆ ಇನ್ನಿತರೆ ಫಸಲು ನಾಶವಾಗಿದೆ. ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಸ್ಥಳಾಂ ತರ ಕಾರ್ಯ ಭರದಿಂದ ಸಾಗಿದೆ.

ತೆಪ್ಪಗಳ ಮೂಲಕ ಸ್ಥಳಾಂತರ: ಪಟ್ಟಣ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ರಸ್ತೆ, ಐ.ಬಿ ಸರ್ಕಲ್, ಸೇರಿದಂತೆ ವಿವಿಧೆಡೆಯ ನದಿ ದಂಡೆ ಸ್ಥಳೀಯರನ್ನು ಸುರಕ್ಷತಾ ಪ್ರದೇಶಗಳಿಗೆ ಸ್ಥಳಾಂ ತರಿಸುವ ಕಾರ್ಯ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಸ್ಥಳಾಂತರ ಕಾರ್ಯ ಭರದಿಂದ ಸಾಗಿದ್ದು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿದಂತೆ ಕಂದಾಯ ಇಲಾಖಾಧಿಕಾರಿಗಳು ಸ್ಥಳಾಂ ತರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ನಿರಾಶ್ರಿತರೂ ಸೇರಿದಂತೆ ಸರಕು, ಸಾಮಾನುಗಳನ್ನು ತೆಪ್ಪಗಳ ಸಹಾಯದಿಂದ ಸ್ಥಳಾಂತರಿಸಲಾಗುತ್ತಿದೆ.
ಸಾಕಷ್ಟು ಮನೆಗಳು ಕುಸಿತ: ಪಟ್ಟಣದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, ಐ.ಬಿ ಸರ್ಕಲ್‍ನಲ್ಲಿದ್ದ ಸುಮಾರು 70 ಮನೆಗಳಿಗೆ ಪ್ರವಾಹದಿಂದ ನೀರು ನುಗ್ಗಿದ ಪರಿಣಾಮ 30 ಹೆಚ್ಚು ಮನೆಗಳು ಕುಸಿದಿವೆ. ಉಳಿದ ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಪ್ರವಾಹದಿಂದ ರಾಮೇಶ್ವರಸ್ವಾಮಿ ದೇಸ್ಥಾನದ ಸುತ್ತ ಇದ್ದ 45ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಅಗಸ್ತ್ಯೇಶ್ವರಸ್ವಾಮಿ, ಪಟ್ಟಾಭಿರಾಮಸ್ವಾಮಿ, ಕಸ್ತೂರ ಬಾ ರಸ್ತೆ ಸೇರಿ ದಂತೆ ಇತರೆಡೆಯ ಸುಮಾರು 150 ಮನೆ ಗಳಿಗೆ ನೀರು ನುಗ್ಗಿದ್ದು, 60ಕ್ಕೂ ಹೆಚ್ಚು ಮನೆಗಳು ನೀರಿನ ರಭಸಕ್ಕೆ ಕುಸಿಯಲಾರಂಭಿಸಿವೆ.

ದೇಗುಲಗಳೂ ಜಲಮಯ: ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರ ಜೊತೆಗೆ ಹಾರಂಗಿ ಜಲಾಶಯದಿಂದ ಹೆಚ್ಚು ನೀರು ಬಿಟ್ಟಿದ್ದರಿಂದ ಪ್ರವಾಹ ಸಂಭವಿಸಿದೆ. ಕಾವೇರಿ ನದಿ ದಂಡೆಯಲ್ಲಿ ರುವ ಲಕ್ಷಣೇಶ್ವರಸ್ವಾಮಿ, ಅಗಸ್ತ್ಯೇಶ್ವರಸ್ವಾಮಿ ರಾಮೇ ಶ್ವರಸ್ವಾಮಿ, ವರದಾನು ಬಸವೇಶ್ವರ, ಚಿಕ್ಕಮ್ಮ ದೇವಾ ಲಯಗಳು ಕಾವೇರಿ ನದಿ ನೀರಿನಿಂದ ಜಲಾವೃತ ಗೊಂಡಿರುವುದು ತೀವ್ರ ಆತಂಕ ಸೃಷ್ಟಿಸಿದೆ.

ಗಂಜಿ ಕೇಂದ್ರ ವ್ಯವಸ್ಥೆ: ಪಟ್ಟಣ ಸೇರಿದಂತೆ, ಕೇರಳಾಪುರ, ಬಸವಪಟ್ಟಣ, ಕಟ್ಟೇಪುರ, ರುದ್ರಪಟ್ಟಣ ಮುಂತಾದ ಕಡೆಗಳಲ್ಲಿನ ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯಗಳು, ಸಾರ್ವಜನಕರ ಸಮುದಾಯ ಭವನಗಳಲ್ಲಿ ನಿರಾಶ್ರಿತರಿಗೆ ಆಶ್ರಯಕ್ಕೆ ಗಂಜಿ ಕೇಂದ್ರಗಳನ್ನು ತೆರೆದಿದ್ದು, ನಿರಾಶ್ರಿತರಿಗೆ ಊಟೋಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ.
ಗದ್ದೆ, ತೋಟಗಳು ಜಲಾವೃತ: ಸಮೀಪದ ಕಟ್ಟೇ ಪುರ ಕೃಷ್ಣರಾಜ ಅಣೆಕಟ್ಟೆಯ ಸುತ್ತಲು ಸುಮಾರು 10 ಸಾವಿರ ಎಕರೆ ಗದ್ದೆ ಪ್ರದೇಶ ಸಂಪೂರ್ಣ ಜಲಾವೃತವಾಗಿದ್ದು, ಭತ್ತದ ಬೆಳೆ ನಾಶವಾಗಿದೆ. ಅಲ್ಲದೆ ತೆಂಗು, ಅಡಿಕೆ, ಬಾಳೆ ತೋಟಗಳಿಗೆ ನೀರು ನುಗ್ಗಿ ಕೋಟ್ಯಾಂತ ರೂ ನಷ್ಟ ಸಂಭವಿಸಿದೆ.

ಶಾಸಕರು, ಅಧಿಕಾರಿಗಳ ದಂಡು: ಪ್ರವಾಹ ಪೀಡಿತರ ರಕ್ಷಣೆಗಾಗಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳ ದಂಡೆ ಹಾಜರಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ರಾಹುಲ್‍ಕುಮಾರ್, ಡಿವೈಎಸ್ಪಿ ಶಶಿಧರ್, ತಹಶೀಲ್ದಾರ್ ನಂದೀಶ್, ಎಸ್‍ಐ ರಾಜಣ್ಣ, ಉಪತಹಶೀಲ್ದಾರ್, ಇಓ ಯಶಂತ್, ಪಿಡಿಓ ವಿಜಯಕುಮಾರ್, ವಿಸಿ ಚಂದ್ರು ಆರ್‍ಐ ಸ್ವಾಮಿ, ಮೀನುಗಾರಿಕೆ ಇಲಾಖೆ ಕುಮಾರ ಸ್ವಾಮಿ, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ರಂಗನಾಥ್, ತಾಲೂಕು ಅಧಿಕಾರಿ ದೀನೇಶ್ ಅನಂದ್, ಇನ್ನಿತರೆ ಕಂದಾಯ ಇಲಾಖೆ ಸಿಬ್ಬಂದಿ ತುರ್ತು ಕಾರ್ಯಗಳನ್ನು ಕೈಗೊಂಡು ತೊಂದರೆಗೊಳಗಾದವರಿಗೆ ಅಗತ್ಯ ನೆರವು, ಮೂಲ ಸೌಕರ್ಯ ಕಲ್ಪಿಸುತ್ತಿದ್ದಾರೆ.

Translate »