ಮಹಿಳಾ ರಾಜಕಾರಣ ಕುರಿತು  ನಾಳೆ ಮೈಸೂರಲ್ಲಿ ಸಂವಾದ
ಮೈಸೂರು

ಮಹಿಳಾ ರಾಜಕಾರಣ ಕುರಿತು  ನಾಳೆ ಮೈಸೂರಲ್ಲಿ ಸಂವಾದ

August 18, 2018

ಮೈಸೂರು:  ಮೈಸೂರಿನ ಕಲಾಮಂದಿರದ ಕಿರುರಂಗಮಂದಿರ ದಲ್ಲಿ ಆ.19ರಂದು ಬೆಳಿಗ್ಗೆ 10ಕ್ಕೆ `ಮಹಿಳೆ-ರಾಜಕಾರಣ-ಹೊಸದಿಕ್ಕು’ `ಚುನಾವಣೆ: ಒಳ ಹೊರಗೆ’ ಕುರಿತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮುಖ್ಯಸ್ಥೆ ಸುಮನಾ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿ ಯಿಂದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ ವಿಚಾರ ಸಂಕಿ ರಣವನ್ನು ಅಂದು ಬೆಳಿಗ್ಗೆ 10ಕ್ಕೆ ಮೈಸೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಉಮಾಪತಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಹಿಳೆ ಮತ್ತು ರಾಜಾಕಾರಣ ವಿಷಯ ಕುರಿತು ಮಾಜಿ ಸಚಿವೆ ಬಿ.ಟಿ.ಲಲಿತನಾಯಕ್, ಹೊಸ ದಿಕ್ಕು ವಿಷಯದ ಕುರಿತು ರೈತ ಸಂಘದ ನಂದಿನಿ ಜಯರಾಮ್ ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 12ಕ್ಕೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನೀತಾ ವೀರಪ್ಪಗೌಡ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ರಿಹಾನಬಾನು, ಜಿ.ಪಂ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹಾಗೂ ಇನ್ನಿತರರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು. ಬಳಿಕ ಸಮತಾಗೀತೆ ಹಾಗೂ ಬೀದಿ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಇದೇ ವೇಳೆ ಸಮತಾ ವೇದಿಕೆ ಮುಖ್ಯಸ್ಥೆ ರತಿರಾವ್ ಮಾತನಾಡಿ, ಈ ಉಪನ್ಯಾಸ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸುತ್ತಿದ್ದು, ಶಿವಮೊಗ್ಗ, ಕೊಪ್ಪಳ, ಧಾರವಾಡ ಮತ್ತು ಹೊಸಕೋಟೆ ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯಕ್ರಮ ನಡೆದಿವೆ. ಅಕ್ಟೋಬರ್ ತಿಂಗಳಿನಲ್ಲಿ ಬೆಳಗಾಂನಲ್ಲಿ ರಾಜ್ಯ ಮಟ್ಟದ ಸಂವಾದ ಏರ್ಪಡಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಒಡನಾಡಿ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶು, ಒಕ್ಕೂಟದ ಸರಸ್ವತಿ, ಲತಾ ಕೆ.ಬಿಂದಪ್ಪ ಉಪಸ್ಥಿತರಿದ್ದರು.

Translate »