ನನ್ನ ರಂಗಭೂಮಿ ಮತ್ತು ರಂಗ ವಿಮರ್ಶೆ ಅಂದು-ಇಂದು ಕೃತಿ ಬಿಡುಗಡೆ ಸಮಾರಂಭ
ಮೈಸೂರು

ನನ್ನ ರಂಗಭೂಮಿ ಮತ್ತು ರಂಗ ವಿಮರ್ಶೆ ಅಂದು-ಇಂದು ಕೃತಿ ಬಿಡುಗಡೆ ಸಮಾರಂಭ

July 10, 2018

ಮೈಸೂರು:  ಮೈಸೂರಿನ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಜನಮನ ರಚನೆಯ `ನನ್ನ ರಂಗಭೂಮಿ’ ಮತ್ತು `ರಂಗ ವಿಮರ್ಶೆ ಅಂದು-ಇಂದು’ ಕೃತಿಗಳ ಬಿಡುಗಡೆ ಸಮಾರಂಭ ಹಾಗೂ `ನನ್ನ ರಂಗಭೂಮಿ’ ವಿಷಯವನ್ನು ಒಳಗೊಂಡ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಜು. 15 ರಂದು ಬೆಳಿಗ್ಗೆ 10.30 ಗಂಟೆಗೆ ಕಲಾಮಂದಿರದ ಮನೆಯಂಗಳ ವೇದಿಕೆಯಲ್ಲಿ ಏರ್ಪಡಿಸಲಾಗಿದೆ.

ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಸಿ. ನಾಗಣ್ಣ ಕೃತಿಗಳನ್ನು ಬಿಡುಗಡೆ ಮಾಡುವರು. ಡಾ. ಎಚ್.ಕೆ. ರಾಮನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ ನಿರ್ದೇಶಕ ಪ್ರೊ. ಎಚ್.ಎಸ್. ಉಮೇಶ್ `ನನ್ನ ರಂಗಭೂಮಿ’ ವಿಷಯ ಕುರಿತು ಮಾತನಾಡುವರು. `ರಂಗಭೂಮಿಯ ನನ್ನ ಸೈದ್ಧಾಂತಿಕ ನೋಟ’ ವಿಷಯ ಕುರಿತು ರಂಗ ನಿರ್ದೇಶಕ ಪ್ರೊ. ಎಸ್.ಆರ್. ರಮೇಶ್ ಮಾತನಾಡಲಿದ್ದಾರೆ. `ನನ್ನ ರಂಗ ಚಟುವಟಿಕೆಯ ಆಯ್ಕೆ’ ಕುರಿತು ರಂಗ ಚಿಂತಕ ಗಂಗಾಧರಸ್ವಾಮಿ ಮಾತನಾಡಲಿದ್ದಾರೆ.

`ನನ್ನ ರಂಗಭೂಮಿ’ ವಿಚಾರ ಕುರಿತು ರಾಜಶೇಖರ ಕದಂಬ, ನಾ. ನಾಗಚಂದ್ರ, ಗೋವಿಂದೇಗೌಡ, ಪ್ರೊ. ಸಿ.ವಿ. ಶ್ರೀಧರಮೂರ್ತಿ, ಮೈಮ್ ರಮೇಶ್, ಶ್ರೀಮತಿ ಹರಿಪ್ರಸಾದ್, ಪ್ರಭುಸ್ವಾಮಿ ಮಳಿಮಠ್, ನಾರಾಯಣಶೆಟ್ಟಿ, ಶ್ರೀಮತಿ ಗೀತಾ ಮೋಂದಡ್ಕ, ರಂಗಸ್ವಾಮಿ, ಉದಯಕುಮಾರ್, ಶ್ರೀಮತಿ ಇಂದಿರಾ, ಡಾ. ಪಾಶ್ರ್ವನಾಥ್, ಎಸ್. ರಾಮನಾಥ್, ಸಂಗಾಪುರ ನಾಗರಾಜ್, ರಂಗಧಾಮಯ್ಯ, ಯು.ಎಸ್. ರಾಮಣ್ಣ, ಶ್ರೀಮತಿ ಮೀನಾ ಮೈಸೂರು, ಶ್ರೀಮತಿ ಶೀಲಾ ಗಂಗಾಧರಸ್ವಾಮಿ, ಸುರೇಶ್ ಬಾಬು, ಮೋಹನ್‍ದಾಸ್, ನಾಗೇಂದ್ರ, ಸುಬ್ಬುನರಸಿಂಹ, ರಮೇಶ್ ಬಾಬು, ಎನ್. ಹರೀಶ್, ಪ್ರೊ. ಭದ್ರಪ್ಪ ಹೆನ್ಲಿ, ತಿಪ್ಪಣ್ಣ, ಮಂಜು ಆರ್. ಉಪಾಧ್ಯಾಯ, ಡಿ. ನಾಗೇಂದ್ರ ಕುಮಾರ್, ಎನ್. ಧನಂಜಯ, ಶ್ರೀಮತಿ ದಿನಮಣ ಬಿ.ಎಸ್., ಕು. ನಾಗರತ್ನ, ನಾಗಭೂಷಣ್, ಚಿದಾನಂದ ಸೊರಬ, ನಾಗರಾಜು ಬಿಜಿಕೆರೆ, ಬಿ. ರಾಜೇಶ್, ಮತ್ತಿ ಮೋಹನ್‍ರಾಜ್, ಬೆನಕ ನಾಗರಜು, ರಾಜೇಶ್ ತಲಕಾಡು, ಶ್ರೀಧರ್, ಜಯಶ್ರೀ ಹೆಗ್ಗಡೆ, ಯೋಗಾನಂದ, ಪ್ರಶಾಂತ್, ರವಿಪ್ರಸಾದ್, ಸಿದ್ದರಾಜು ಸಂವಾದ ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9844427129 ಅನ್ನು ಸಂಪರ್ಕಿಸಬಹುದು.

Translate »