Tag: Kalamandir

ಮಹಿಳಾ ರಾಜಕಾರಣ ಕುರಿತು  ನಾಳೆ ಮೈಸೂರಲ್ಲಿ ಸಂವಾದ
ಮೈಸೂರು

ಮಹಿಳಾ ರಾಜಕಾರಣ ಕುರಿತು  ನಾಳೆ ಮೈಸೂರಲ್ಲಿ ಸಂವಾದ

August 18, 2018

ಮೈಸೂರು:  ಮೈಸೂರಿನ ಕಲಾಮಂದಿರದ ಕಿರುರಂಗಮಂದಿರ ದಲ್ಲಿ ಆ.19ರಂದು ಬೆಳಿಗ್ಗೆ 10ಕ್ಕೆ `ಮಹಿಳೆ-ರಾಜಕಾರಣ-ಹೊಸದಿಕ್ಕು’ `ಚುನಾವಣೆ: ಒಳ ಹೊರಗೆ’ ಕುರಿತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮುಖ್ಯಸ್ಥೆ ಸುಮನಾ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿ ಯಿಂದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ ವಿಚಾರ ಸಂಕಿ ರಣವನ್ನು ಅಂದು ಬೆಳಿಗ್ಗೆ 10ಕ್ಕೆ ಮೈಸೂರು ವಿವಿಯ ರಾಜ್ಯಶಾಸ್ತ್ರ…

ಮನೆಯಂಗಳದಲ್ಲಿ ಎರಡು ಕೃತಿ ಬಿಡುಗಡೆ
ಮೈಸೂರು

ಮನೆಯಂಗಳದಲ್ಲಿ ಎರಡು ಕೃತಿ ಬಿಡುಗಡೆ

July 16, 2018

ಮೈಸೂರು: `ನನ್ನ ರಂಗಭೂಮಿ’ ಮತ್ತು `ರಂಗ ವಿಮರ್ಶೆ ಅಂದು-ಇಂದು’ ಎಂಬ ಎರಡು ಕೃತಿಗಳನ್ನು ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ.ಸಿ.ನಾಗಣ್ಣ ಭಾನುವಾರ ಬಿಡುಗಡೆ ಮಾಡಿದರು. ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಶಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸ್ಥೆಯ ಕೃಷ್ಣ ಜನಮನ ಅವರ ಈ ಎರಡು ಕೃತಿಗಳನ್ನು ಡಾ.ಸಿ.ನಾಗಣ್ಣ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಎದುರಾಗುವ ಅಡ್ಡಿ-ಆತಂಕಗಳನ್ನು ಮೀರಿ ರಂಗಭೂಮಿಯಲ್ಲಿ ಬೆಳೆದಿರುವ ಕೃಷ್ಣ ಜನಮನ 28 ಕೃತಿಗಳನ್ನು ರಚನೆ ಮಾಡಿದ್ದಾರೆ. ಒಬ್ಬ ವ್ಯಕ್ತಿ ಕಥೆ, ಕಾದಂಬರಿ ಸೇರಿದಂತೆ…

ಕಲಾ ಮಂದಿರ ಮುಂಭಾಗ ಕೃತಕ ಜಲಪಾತಕ್ಕೆ ಚಾಲನೆ
ಮೈಸೂರು

ಕಲಾ ಮಂದಿರ ಮುಂಭಾಗ ಕೃತಕ ಜಲಪಾತಕ್ಕೆ ಚಾಲನೆ

July 13, 2018

ಮೈಸೂರು:  ಸಾಂಸ್ಕೃತಿಕ ಕೇಂದ್ರ ಬಿಂದು ಕಲಾಮಂದಿರದ ಮುಂಭಾಗ ನೂತನವಾಗಿ ನಿರ್ಮಿಸಿರುವ ಕೃತಕ ಜಲಪಾತ ಕಲಾ ರಸಿಕರನ್ನು ತನ್ನತ್ತ ಸೆಳೆಯುತ್ತಿದ್ದು, ಗುರುವಾರ ಉದ್ಘಾಟನೆಗೊಂಡಿತು. ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ವ್ಯವಸ್ಥಾಪಕ ನಿರ್ದೇಶಕ ಜಗನ್ಮೋಹನ್ ರಾವ್ ಅವರು ಕೃತಕ ಜಲಪಾತವನ್ನು ಉದ್ಘಾಟಿಸಿದರು. ನಂತರ ಕಿರುರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ವ್ಯವಸ್ಥಾಪಕ ನಿರ್ದೇಶಕ ಜಗನ್ಮೋಹನ್ ರಾವ್ ಮಾತನಾಡಿ, ಕಳೆದ ವರ್ಷ ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ಸಿಎಸ್‍ಆರ್ ನಿಧಿಯಿಂದ ನವೋದಯ ಶಾಲೆಗಳ ಅಭಿವೃದ್ಧಿಗೆ 1.40 ಕೋಟಿ ರೂ….

ನನ್ನ ರಂಗಭೂಮಿ ಮತ್ತು ರಂಗ ವಿಮರ್ಶೆ ಅಂದು-ಇಂದು ಕೃತಿ ಬಿಡುಗಡೆ ಸಮಾರಂಭ
ಮೈಸೂರು

ನನ್ನ ರಂಗಭೂಮಿ ಮತ್ತು ರಂಗ ವಿಮರ್ಶೆ ಅಂದು-ಇಂದು ಕೃತಿ ಬಿಡುಗಡೆ ಸಮಾರಂಭ

July 10, 2018

ಮೈಸೂರು:  ಮೈಸೂರಿನ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಜನಮನ ರಚನೆಯ `ನನ್ನ ರಂಗಭೂಮಿ’ ಮತ್ತು `ರಂಗ ವಿಮರ್ಶೆ ಅಂದು-ಇಂದು’ ಕೃತಿಗಳ ಬಿಡುಗಡೆ ಸಮಾರಂಭ ಹಾಗೂ `ನನ್ನ ರಂಗಭೂಮಿ’ ವಿಷಯವನ್ನು ಒಳಗೊಂಡ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಜು. 15 ರಂದು ಬೆಳಿಗ್ಗೆ 10.30 ಗಂಟೆಗೆ ಕಲಾಮಂದಿರದ ಮನೆಯಂಗಳ ವೇದಿಕೆಯಲ್ಲಿ ಏರ್ಪಡಿಸಲಾಗಿದೆ. ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಸಿ. ನಾಗಣ್ಣ ಕೃತಿಗಳನ್ನು ಬಿಡುಗಡೆ ಮಾಡುವರು. ಡಾ. ಎಚ್.ಕೆ. ರಾಮನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ…

ಚಾರ್ವಾಕ ಕಥಾ ನಾಟಕೋತ್ಸವ
ಮೈಸೂರು

ಚಾರ್ವಾಕ ಕಥಾ ನಾಟಕೋತ್ಸವ

July 1, 2018

ಮೈಸೂರು: ಕಲಾಮಂದಿರದ ಕಿರು ರಂಗಮಂದಿರದಲ್ಲಿ ಚಾರ್ವಾಕ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 2ರಂದು ಆರಂಭವಾಗುವ ನಾಟಕೋತ್ಸವದ ಅಂಗವಾಗಿ ವೈಚಾರಿಕ ಚಿಂತನೆ ಮತ್ತು ಚಿಂತಕರ ಕಗ್ಗೊಲೆ ಎಂಬ ವಿಚಾರ ಸಂಕಿರಣವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧು ಸೂದನ್ ಅವರು ಉದ್ಘಾಟಿಸಲಿದ್ದು, ವಿಚಾರವಾದಿ ಪ್ರೊ.ಕಾಳೇಗೌಡ ನಾಗವಾರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯವಾದಿ ಹೆಚ್. ಮೋಹನ್‍ಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪರಿ ವರ್ತನಾ ಪತ್ರಿಕಾ ಸಂಪಾದಕ ಡಾ. ಕೃಷ್ಣಮೂರ್ತಿ ಚಮರಂ, ವಿಚಾರವಾದಿ ಮಲ್ಕುಂಡಿ ಮಹದೇವಸ್ವಾಮಿ…

ಇಂದಿನಿಂದ ಮೂರು ದಿನ `ಪಾಶ್ರ್ವ ಸಂಗೀತ’
ಮೈಸೂರು

ಇಂದಿನಿಂದ ಮೂರು ದಿನ `ಪಾಶ್ರ್ವ ಸಂಗೀತ’

June 29, 2018

ಮೈಸೂರು: ನಗರದ ಕಲಾಮಂದಿರದ ಆವರಣದಲ್ಲಿರುವ ನೂತನ ಕಿರು ರಂಗಮಂದಿರದಲ್ಲಿ ಜೂನ್ 29ರಿಂದ ಜುಲೈ 1ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ರಂಗವಲ್ಲಿ ತಂಡದಿಂದ ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ “ಪಾಶ್ರ್ವಸಂಗೀತ” ನಾಟಕವು ಮರುಪ್ರದರ್ಶನಗೊಳ್ಳಲಿದೆ. ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ್ ಈ ನಾಟಕದ ನಿರ್ದೇಶಕರು. 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಅಂದಿನ ಕಾಲದ ಅದ್ಭುತ ಹಾಡುಗಳು, ಸಂಗೀತ ನಮ್ಮನ್ನು ಬೇರೊಂದು…

ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ್’ ನಾಟಕ ಪ್ರದರ್ಶನ
ಮೈಸೂರು

ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ್’ ನಾಟಕ ಪ್ರದರ್ಶನ

June 15, 2018

ಮೈಸೂರು: ನಾಲ್ವಡಿ ಸೋಶಿಯಲ್, ಕಲ್ಚರಲ್ ಅಂಡ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ’ ನಾಟಕ ಪ್ರದರ್ಶನವನ್ನು ಜೂ.16ರಂದು ಆಯೋಜಿಸಲಾಗಿದೆ ಎಂದು ಲೇಖಕಿ ನಂದಾ ಹಳೆಮನೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಳೆಮನೆಯ ಅಂಗಳದಲ್ಲಿ ಬೆಳಕೆರೆಯ ನೆನಪು’ ಶೀರ್ಷಿಕೆ ಯಡಿ ಲಿಂಗದೇವರು ಹಳೆಮನೆ ಹಾಗೂ ಇತ್ತೀಚೆಗೆ ನಿಧನರಾದ ರಂಗಾಯಣ ಕಲಾವಿದ ಮಂಜುನಾಥ ಬೆಳಕೆರೆ ಸ್ಮರಣಾರ್ಥ `ಶರೀಫ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಅಂದು ಸಂಜೆ 6.30ಕ್ಕೆ…

ಜೂ.10ರಂದು ಶ್ರೀಕೃಷ್ಣ ಕಥಾ, ಮಾರುತಿ ಪ್ರತಾಪ ಯಕ್ಷಗಾನ
ಮೈಸೂರು

ಜೂ.10ರಂದು ಶ್ರೀಕೃಷ್ಣ ಕಥಾ, ಮಾರುತಿ ಪ್ರತಾಪ ಯಕ್ಷಗಾನ

June 8, 2018

ಮೈಸೂರು: ಮೈಸೂರಿನ ಕಲಾಮಂದಿರದಲ್ಲಿ ಜೂ.10ರಂದು ಸಂಜೆ 4 ಗಂಟೆಗೆ ಶಿವಮೊಗ್ಗದ ನಾಟ್ಯಶ್ರೀ ಯಕ್ಷಗಾನ ಕಲಾ ತಂಡದಿಂದ `ಶ್ರೀಕೃಷ್ಣ ಕಥಾ’ ಹಾಗೂ `ಮಾರುತಿ ಪ್ರತಾಪ’ ಪೌರಾಣ ಕ ಯಕ್ಷಗಾನ ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿದ್ವಾನ್ ದತ್ತಮೂರ್ತಿ ಭಟ್ ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂಗೋಷ್ ಹೆಗ್ಡೆ, ಉದ್ಯಮಿ ಜಿ.ಎಂ.ಹೆಗಡೆ ಇನ್ನಿತರರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹೆಸರಾಂತ ಯಕ್ಷಗಾನ ಕಲಾವಿದರು ಮುಮ್ಮೇಳ…

Translate »