ಮೈಸೂರು: ಮೈಸೂರಿನ ಕಲಾಮಂದಿರದಲ್ಲಿ ಜೂ.10ರಂದು ಸಂಜೆ 4 ಗಂಟೆಗೆ ಶಿವಮೊಗ್ಗದ ನಾಟ್ಯಶ್ರೀ ಯಕ್ಷಗಾನ ಕಲಾ ತಂಡದಿಂದ `ಶ್ರೀಕೃಷ್ಣ ಕಥಾ’ ಹಾಗೂ `ಮಾರುತಿ ಪ್ರತಾಪ’ ಪೌರಾಣ ಕ ಯಕ್ಷಗಾನ ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿದ್ವಾನ್ ದತ್ತಮೂರ್ತಿ ಭಟ್ ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂಗೋಷ್ ಹೆಗ್ಡೆ, ಉದ್ಯಮಿ ಜಿ.ಎಂ.ಹೆಗಡೆ ಇನ್ನಿತರರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹೆಸರಾಂತ ಯಕ್ಷಗಾನ ಕಲಾವಿದರು ಮುಮ್ಮೇಳ ಮತ್ತು ಹಿಮ್ಮೇಳ ದಲ್ಲಿ ಭಾಗವಹಿಸ ಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಪ್ರಶಾಂತ್ ಭಟ್, ಸಂದೀಪ್ ಭಟ್ ಇದ್ದರು.