ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ
ಚಾಮರಾಜನಗರ

ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ

June 8, 2018

ಗುಂಡ್ಲುಪೇಟೆ: ಅಪಘಾತದಲ್ಲಿ ಮೃತನಾದ ಕಾಂಗ್ರೆಸ್ ಕಾರ್ಯ ಕರ್ತ ಶಿವಮೂರ್ತಿ ಸಾವಿಗೂ, ಬಿಜೆಪಿ ಮುಖಂಡರಿಗೂ ಯಾವುದೇ ಸಂಬಂಧ ವಿಲ್ಲ. ಕಾಂಗ್ರೆಸ್ ಮುಖಂಡರು ವಿನಾಕಾರಣ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎನ್. ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆ ದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಿಂದುಳಿದ ವರ್ಗದ ಮತದಾರರು ಈ ಬಾರಿ ಬಿಜೆಪಿಯನ್ನು ಬೆಂಬ ಲಿಸಿದ್ದು, ಇವರನ್ನು ಭೀತಿಗೊಳಿಸುವ ಸಲು ವಾಗಿ ಕಾಂಗ್ರೆಸ್ ಮುಖಂಡರು ನಿರಾ ಧಾರ ಆರೋಪ ಮಾಡುವ ಮೂಲಕ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.

ಕಳೆದ 25 ವರ್ಷಗಳಿಂದ ತಾಲೂಕಿನ ಆಡಳಿತ ನಡೆಸಿದ ಕಾಂಗ್ರೆಸಿಗರನ್ನು ಮನೆಗೆ ಕಳುಹಿಸಲು ಈ ಬಾರಿ ಹಿಂದುಳಿದ ವರ್ಗ ಗಳ ಮತದಾರರು ನಿರ್ಧಾರ ಮಾಡಿದರು. ಅವರಲ್ಲಿ ಅಭದ್ರತೆ ಹಾಗೂ ಭೀತಿ ಮೂಡಿ ಸುವ ಸಲುವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಂಗಳ ಪ್ರಣಯ್ ಮಾತನಾಡಿ, ತಾಲೂಕಿನ ತೆರಕ ಣಾಂಬಿ ಬಳಿ ತ್ರಿಯಂಭಕಪುರ ಗ್ರಾಮದ ಯುವಕ ಶಿವಮೂರ್ತಿ ಅಪಘಾತದಲ್ಲಿ ಮೃತಪಟ್ಟಿರುವುದಕ್ಕೆ ರಾಜಕೀಯ ಬಣ್ಣ ಬಳಿಯಲಾಗಿದೆ. ಈ ಘಟನೆ ಬಗ್ಗೆ ಬಿಜೆಪಿ ಖಂಡನೆ ವ್ಯಕ್ತಪಡಿಸಿದೆ. ಅಲ್ಲದೆ ಗ್ರಾಮಕ್ಕೆ ಶಾಸಕ ಸಿ.ಎಸ್.ನಿರಂಜನಕುಮಾರ್ ತೆರಳಿ ಮೃತನ ಅಂತಿಮ ದರ್ಶನ ಪಡೆದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿ ಪೆÇಲೀಸರಿಗೆ ಸೂಚನೆ ನೀಡಿದ್ದಾರೆ.

ಆದರೆ ಮೃತನ ಅಂತ್ಯಕ್ರಿಯೆಯಲ್ಲೂ ಭಾಗವಹಿಸದ ಕಾಂಗ್ರೆಸ್ ಮುಖಂಡರು ಸಾರ್ವಜನಿಕರನ್ನು ಮತ್ತು ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾ ನೂತನ ಶಾಸಕರಿಗೆ ಕೆಟ್ಟ ಹೆಸರು ತರಲು ಪ್ರತಿ ಭಟನೆ ನಡೆಸಿದ್ದಾರೆ. ಇನ್ನಾದರೂ ಇವರು ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳದಿದ್ದರೆ ಇವರ 25 ವರ್ಷಗಳ ಕಾಲದ ದುರಾಚಾರಗಳನ್ನು ಬಯಲಿಗೆಳೆಯ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾದ ಗೋವಿಂದರಾಜನ್, ರಮೇಶ್, ಚೂಡಾ ಮಾಜಿ ಅಧ್ಯಕ್ಷ ಎಸ್.ಬಾಲಸುಬ್ರ ಹ್ಮಣ್ಯ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಣಯ್, ತಾಲೂಕು ಅಧ್ಯಕ್ಷ ನಂದೀಶ್, ಮುಖಂಡ ರಾದ ಬಸವರಾಜು, ಎಸ್.ಸಿ.ಮಂಜುನಾಥ್, ಲೋಕೇಶ್, ನಾಗೇಶ್, ಹೊರೆಯಾಲಕೃಷ್ಣ, ಶ್ರೀಕಂಠೇಗೌಡ, ನಾಗರಾಜು ಮತ್ತಿತರಿದ್ದರು.

Translate »