ನೀರಾವರಿ ಇಲಾಖೆ ಜಾಗದಲ್ಲಿ ಅಕ್ರಮ ಗಣ ಗಾರಿಕೆ: ಶಾಸಕ ಹರ್ಷವರ್ಧನ್ ದಿಢೀರ್ ಭೇಟಿ
ಮೈಸೂರು

ನೀರಾವರಿ ಇಲಾಖೆ ಜಾಗದಲ್ಲಿ ಅಕ್ರಮ ಗಣ ಗಾರಿಕೆ: ಶಾಸಕ ಹರ್ಷವರ್ಧನ್ ದಿಢೀರ್ ಭೇಟಿ

June 8, 2018

ನಂಜನಗೂಡು: ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮ ಗಣ ಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಶಾಸಕ ಬಿ.ಹರ್ಷವರ್ಧನ್ ಅವರು ಸ್ಥಳಕ್ಕೆ ದಿಢೀರ್ ಭೇಟಿ ನೀಡಿ, 2 ಟಿಪ್ಪರ್, 2 ಹಿಟಾಚಿ ಮತ್ತು ಒಂದು ಟ್ರ್ಯಾಕ್ಟರ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಹರತಲೆ ಗ್ರಾಮದ ಸಮೀಪವಿರುವ ಕಬಿನಿ ಬಲದಂಡೆ ನಾಲೆ ಏರಿಯಲ್ಲಿ ಕೆಲವು ವರ್ಷ ಗಳಿಂದ ನಿರಂತರವಾಗಿ ಕಲ್ಲು ಮಿಶ್ರಿತ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಶಾಸಕರಿಗೆ ಗ್ರಾಮಸ್ಥರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಶಾಸಕರು ಬುಧವಾರ ಸಂಜೆ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದಾಗ ಅಲ್ಲಿ ಜೆಸಿಬಿಗಳಿಂದ ಕಲ್ಲು, ಮಣ್ಣು ತೆಗೆಯುತ್ತಿದ್ದುದು ಕಂಡು ಬಂದಿದೆ. ತಕ್ಷಣವೇ ಶಾಸಕರು, ಪೊಲೀಸರನ್ನು ಕರೆಸಿ ಗಣ ಗಾರಿಕೆಗೆ ಬಳಸುತ್ತಿದ್ದ 2 ಹಿಟಾಚಿ, 2 ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಅನ್ನು ಅವರ ವಶಕ್ಕೆ ಒಪ್ಪಿಸಿದರು.

ಈ ವೇಳೆ ಸ್ಥಳಕ್ಕೆ ನೀರಾವರಿ ಇಲಾಖೆಯ ಕಾರ್ಯ ಪಾಲಕ ಅಭಿಯಂತರ ಮರಿಸ್ವಾಮಿ, ಎಇಇ ಪ್ರೇಮ್ ಕುಮಾರ್ ಧಾವಿಸಿದರು. ನೀರಾವರಿ ಇಲಾಖೆಗೆ ಸೇರಿದ ಆಸ್ತಿಯಾದ ನಾಲೆ ಏರಿಯಲ್ಲಿ ಗಣ ಗಾರಿಕೆ ನಡೆಸಿ, ಖನಿಜಯುಕ್ತ ಮಣ್ಣನ್ನು ಸಾಗಿಸುತ್ತಿರುವುದು ಅಪರಾಧ ವಾಗಿದ್ದು, ಈ ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕ ಹರ್ಷವರ್ಧನ್ ಅವರು ಈ ಸಂಬಂಧ `ಮೈಸೂರು ಮಿತ್ರ’ ಜೊತೆ ಮಾತನಾಡಿ, ಈ ಸ್ಥಳದಲ್ಲಿ ಈಗಾಗಲೇ ಲಕ್ಷಾಂತರ ಲೋಡ್‍ಗಳಷ್ಟು ಖನಿಜ ಯುಕ್ತ ಮಣ್ಣನ್ನು ಅಕ್ರಮವಾಗಿ ತೆಗೆದಿರುವುದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟವಾಗಿದೆ. ಈ ಕುರಿತು ಗಣ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಗಳ ಜೊತೆ ಚರ್ಚಿಸಿದಾಗ ಅವರಿಂದ ಸಮರ್ಪಕ ವಾದ ಉತ್ತರ ಬಂದಿಲ್ಲ. ಈ ಅಕ್ರಮ ಗಣ ಗಾರಿಕೆ ಯಲ್ಲಿ ಇಲಾಖೆಯ ಕೆಲವು ಅಧಿಕಾರಿಗಳು ಶಾಮೀ ಲಾಗಿರುವ ಗುಮಾನಿಯಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಎಂದರು.

ಅಕ್ರಮ ಗಣ ಗಾರಿಕೆಗೆ ಬಳಸುತ್ತಿದ್ದ ಯಂತ್ರ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಗಣ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ನಂಜನಗೂಡು ಗ್ರಾಮಾಂ ತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಜೆ.ಹೆಚ್.ಗಣೇಶ್ ತಿಳಿಸಿದರು.

Translate »