ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಗೆಲುವಿನ ವಿಶ್ವಾಸ
ಮೈಸೂರು

ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಗೆಲುವಿನ ವಿಶ್ವಾಸ

June 8, 2018

ತಿ.ನರಸೀಪುರ:  ಸಮಾನ ವೇತನ ಸೇರಿದಂತೆ ಶಿಕ್ಷಣ ನೀತಿ ಹಾಗೂ ನಿವೃತ್ತಿ ವೇತನದ ತಾರತಮ್ಯದ ಬಗ್ಗೆ ಹೋರಾಟ ಮಾಡುವ ಬದ್ಧತೆ ಯನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ ಬಿ. ನಿರಂಜನಮೂರ್ತಿ ಗೆಲುವು ಖಚಿತವೆಂದು ಹಿರಿಯ ಮುಖಂಡ, ರಾಜ್ಯ ಸಮಿತಿ ಸದಸ್ಯ ಕರುಹಟ್ಟಿ ಮಹಾದೇವಯ್ಯ ಹೇಳಿದರು.

ಪಟ್ಟಣದ ವಿದ್ಯೋದಯ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಸಂಜೆ ಶಿಕ್ಷಕ ಮತದಾರರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಅವರ ಪರ ಮತಯಾಚಿಸಿ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಸರ್ಕಾರ ರಚನೆಯಲ್ಲಿ ಪಾಲುದಾರರು. ಚುನಾವಣೆಯಲ್ಲಿ ಅವೆರಡು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದ್ದ ರಿಂದ ಬಿಜೆಪಿ ಅಭ್ಯರ್ಥಿ ಬಗ್ಗೆ ಒಮ್ಮತವಿ ರುವುದರಿಂದ ಈ ಬಾರಿ ಗೆಲ್ಲಲು ಸಹಕಾರಿಯಾಗಲಿದೆ ಎಂದರು

ರಾಜ್ಯದ ಆಡಳಿತರೂಢ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಲ್ಲಿ ಸ್ಪರ್ಧೆಯ ಬಗ್ಗೆ ಗೊಂದಲ ವಿರುವುದರಿಂದ ವಿಧಾನ ಪರಿಷತ್‍ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಉಪನ್ಯಾಸಕರಾಗಿರುವ ಬಿ.ನಿರಂಜನ ಮೂರ್ತಿ ಅವರಿಗೆ ಸಮಸ್ಯೆಗಳ ಅರಿವಿದೆ. ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿರುವ ಮರಿ ತಿಬ್ಬೇಗೌಡರು ಯಾವುದೇ ಕೆಲಸವನ್ನು ಸರಿಯಾಗಿ ಮಾಡಿಲ್ಲದ್ದರಿಂದ ಈ ಬಾರಿ ಬದಲಾವಣೆಯ ನಿರೀಕ್ಷೆಯಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ ಎಂದು ಅವರು ಹೇಳಿದರು.

ಕ್ಷೇತ್ರಾಧ್ಯಕ್ಷ ಪರಶಿವಮೂರ್ತಿ, ವರುಣಾ ಕ್ಷೇತ್ರದ ಮುಖಂಡ ತೋಟದಪ್ಪ ಬಸವ ರಾಜು, ಮುಖಂಡರಾದ ರಂಗೂ ನಾಯಕ್, ದಯಾನಂದಪಟೇಲ್ ಬಾಗಳಿ ಯೋಗೇಶ್, ದಿಲೀಪ್, ವರಕೂಡು ಪ್ರಕಾಶ್, ಬಿ. ಮಹೇಶ್, ಬೈರಾಪುರ ಮಂಜುನಾಥ್ ಮಹದೇವ ಸ್ವಾಮಿ ಮತ್ತಿತರರು ಹಾಜರಿದ್ದರು.

Translate »