ಕೋಳಿ ಸಾಕಾಣಕೆ ಕೇಂದ್ರದ ನೀರಿನಿಂದ ಕೆರೆ ಕಲುಷಿತ; ಮೀನುಗಳ ಸಾವು
ಮೈಸೂರು

ಕೋಳಿ ಸಾಕಾಣಕೆ ಕೇಂದ್ರದ ನೀರಿನಿಂದ ಕೆರೆ ಕಲುಷಿತ; ಮೀನುಗಳ ಸಾವು

June 8, 2018

ಪಿರಿಯಾಪಟ್ಟಣ: ಕೋಳಿ ಸಾಕಾಣ ಕೆ ಕೇಂದ್ರದಿಂದ ಕಲುಷಿತ ನೀರು ಕೆರೆಗೆ ಸೇರುತ್ತಿರುವುದರಿಂದ ದುರ್ವಾಸನೆ ಬರುತ್ತಿರುವುದಲ್ಲದೆ ಮೀನುಗಳು ಮರಣ ಹೊಂದುತ್ತಿವೆ ಎಂದು ರೈತ ರಮೇಶ್ ಆರೋಪಿಸಿದ್ದಾರೆ.

ತಾಲೂಕಿನ ಹುಣಸವಾಡಿ ಗ್ರಾಮಕ್ಕೆ ಸೇರಿದ ಅಯ್ಯನಕೆರೆಯಲ್ಲಿ ಸಾಕಲಾದ ಮೀನು ಮರಣ ಹೊಂದುತ್ತಿದ್ದು, ದುರ್ವಾಸನೆ ಸುತ್ತಮುತ್ತಲ ಗ್ರಾಮಗಳಿಗೆ ವ್ಯಾಪಿಸುತ್ತಿದೆ ಎಂದು ಅವರು ದೂರಿದ್ದಾರೆ. ನಂದಿನಾಥಪುರ ಸಮೀಪವಿರುವ ಕೋಳಿ ಸಾಕಾಣ ಕೆ ಕೇಂದ್ರದಿಂದ ಬಂದ ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸದೇ ಹರಿಯಲು ಬಿಟ್ಟು ಕೆರೆಗಳನ್ನು ಸೇರಿರುವುದರಿಂದ ಈ ಪರಿಣಾಮ ಎದುರಾಗಿದೆ ಎಂದು ದೂರಲಾಗಿದೆ.

ಕೆರೆಯಲ್ಲಿ 2 ಲಕ್ಷ ರೂ.ಗಳಿಗೂ ಹೆಚ್ಚು ಅಧಿಕ ಹಣವನ್ನು ಖರ್ಚು ಮಾಡಿ ಸಾಕಲಾಗಿದ್ದ ಮೀನುಗಳು ಸಂಪೂರ್ಣವಾಗಿ ಮರಣ ಹೊಂದಿ ದಡದಲ್ಲಿ ತೇಲುತ್ತಿದ್ದು, ಅಪಾರ ನಷ್ಟವಾಗಿರುವುದಲ್ಲದೆ ಈ ಕೆರೆಯ ನೀರು ದುರ್ವಾಸನೆ ಬೀರುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿ ಉಸಿರು ಕಟ್ಟುವ ವಾತಾವರಣದಲ್ಲಿ ದಿನ ಕಳೆಯಬೇಕಾಗಿದ್ದು, ಈ ನೀರನ್ನು ಕುಡಿದ ಜಾನುವಾರುಗಳು ಮತ್ತು ಸಾಕುಪ್ರಾಣ ಗಳು ಹಾಗೂ ಕಾಡುಪ್ರಾಣ ಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಗ್ರಾಮದ ಸುತ್ತಮುತ್ತಲ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.

Translate »