ಪರಿಸರ ರಕ್ಷಣೆ ಎಲ್ಲರ ಹೊಣೆ
ಮೈಸೂರು

ಪರಿಸರ ರಕ್ಷಣೆ ಎಲ್ಲರ ಹೊಣೆ

June 8, 2018

ಬೆಟ್ಟದಪುರ:  ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಪೊಲೀಸ್ ಉಪನಿರೀಕ್ಷಕ ಜಯಸ್ವಾಮಿ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಶಿಡಿಲುಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನ ದೈವಿವನದ ಹೊರಾಂಗಣ ದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಮಾನವನು ಉತ್ತಮವಾದ ಜೀವನ ವನ್ನು ನಡೆಸಬೇಕಾದರೆ ಪ್ರಕೃತಿದತ್ತವಾದ ಸಂಪನ್ಮೂಲಗಳು ಮೂಲಕಾರಣವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದಿನನಿತ್ಯದ ಬಳಕೆ ಗಾಗಿ ಮರಗಳನ್ನು ನಾಶಪಡಿಸುವ ಪ್ರವೃತ್ತಿ ಯಿದೆ. ಇದರಿಂದಾಗಿ ಪರಿಸರ ನಾಶ ಹೊಂದುತ್ತಿದೆ. ಉತ್ತಮವಾದ ಗಾಳಿ ಸಿಗ ದಂತಾಗುತ್ತದೆ. ಆಹಾರ ಪದಾರ್ಥಗಳಿಗೂ ಕೂಡ ಮುಂದೊಂದು ದಿನ ಕೊರತೆ ಅನು ಭವಿಸುವ ಸಂದರ್ಭ ಎದುರಾದರೂ ಕೂಡ ಆಶ್ಚರ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು ಎಂದರು.

ವನಪಾಲಕರಾದ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಪತ್ರಕರ್ತರ ಸಂಘವು ಅನೇಕ ಸಾಮಾಜಿಕ ಕಾರ್ಯ ಕ್ರಮಗಳನ್ನು ಆಯೋಜಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಅಲ್ಲದೆ ಇಲಾಖೆಯು ಪರಿಸರ ಸಂರಕ್ಷಣೆಗೆ ಅನೇಕ ಕಾರ್ಯ ಕ್ರಮಗಳನ್ನು ಆಯೋಜಿ ಸುತ್ತಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿ ಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ವಾತಾ ವರಣವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ತಿಳಿಸಿದರು. ಹಿರಿಯ ಪತ್ರಕರ್ತರಾದ ಹೆಚ್.ಡಿ. ರಮೇಶ್ ಹಾಗೂ ಪರಿಸರ ಹೋರಾಟ ಗಾರ ಕೌಲನಹಳ್ಳಿ ಸೋಮಶೇಖರ್, ನವೀನ್‍ಕುಮಾರ್ ಮಾತನಾಡಿದರು.

ಪತ್ರಕರ್ತರಾದ ಪಿ.ಪಿ.ಮಹದೇವ್, ನವೀನ್ ಕುಮಾರ್, ಶಿವದೇವ, ಹೆಚ್.ಕೆ. ಮಹೇಶ್, ಕುಮಾರ್, ಅಶೋಕ್, ಪ್ರಸನ್ನ ಕುಮಾರ, ಅಶ್ವಥ್, ಶರತ್, ರಾಮೇಗೌಡ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಿದಾ ನಂದ್ ಮತ್ತಿತರರು ಹಾಜರಿದ್ದರು.

Translate »